twitter
    For Quick Alerts
    ALLOW NOTIFICATIONS  
    For Daily Alerts

    ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಸಂಚಿಕೆ ನೋಡಲು ಮರೆಯದಿರಿ

    |

    ಕನ್ನಡದ ಆರಡಿ ಕಟೌಟ್, ಕಿಚ್ಚ ಸುದೀಪ್ ಬಾಲಿವುಡ್ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಆ ಎಪಿಸೋಡ್ ಇನ್ನು ಪ್ರಸಾರವಾಗಿರಲಿಲ್ಲ. ಇದೀಗ, ಶನಿವಾರ ಸುದೀಪ್ ಭಾಗವಹಿಸಿದ್ದ ಎಪಿಸೋಡ್ ಟೆಲಿಕಾಸ್ಟ್ ಆಗ್ತಿದೆ.

    ಶನಿವಾರ ರಾತ್ರಿ 9.30ಕ್ಕೆ ಸುದೀಪ್ ಎಪಿಸೋಡ್ ಸೋನಿ ಟಿವಿಯಲ್ಲಿ ಮೂಡಿಬರ್ತಿದೆ. ವಿಶೇಷ ಅಂದ್ರೆ, ಹಿಂದಿಯ ಈ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಬಹಿರಂಗವಾಗಿತ್ತು.

    ಕಪಿಲ್ ಶರ್ಮ ಶೋನಲ್ಲಿ ಮಸ್ತ್ ಮಜಾ ಮಾಡಿದ ಕಿಚ್ಚ ಸುದೀಪ್.! ಕಪಿಲ್ ಶರ್ಮ ಶೋನಲ್ಲಿ ಮಸ್ತ್ ಮಜಾ ಮಾಡಿದ ಕಿಚ್ಚ ಸುದೀಪ್.!

    ಅಂದ್ಹಾಗೆ, ಈ ಶೋನಲ್ಲಿ ಕೇವಲ ಸುದೀಪ್ ಮಾತ್ರವಲ್ಲ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ, ನಟ ಹಾಗೂ ನಿರ್ಮಾಪಕ ಶೋಹಿಲ್ ಖಾನ್, ಸುದೀರ್ ಬಾಬು, ಮನೋಜ್ ತಿವಾರಿ, ಸಚಿನ್ ಜೋಶಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

    Sudeeps Kapil Sharma Shows episode telecasting today

    ಈ ಶೋನ ವಿಶೇಷ ಅಂದ್ರೆ ಸಿಸಿಎಲ್ ಕ್ರಿಕೆಟ್ ಟೂರ್ನಿಯ ಆರಂಭದ ಹಿನ್ನೆಲೆ ಈ ಎಲ್ಲ ಕಲಾವಿದರು ಕಪಲ್ ಶರ್ಮಾ ಶೋಗೆ ಬಂದಿದ್ದರು. ಫೆಬ್ರವರಿ 27ರಂದು ಸಿಸಿಲ್ T-10 ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗಿಯಾಗುತ್ತಿದೆ.

    CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ? CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

    ಈ ಬಗ್ಗೆ ಸ್ವತಃ ಸುದೀಪ್ ಟ್ವೀಟ್ ಮಾಡಿದ್ದರು. "ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದೆ. ನಕ್ಕು ನಕ್ಕು ಸಾಕಾಯ್ತು. ಈ ರೀತಿ ನಗುವ ಅವಕಾಶ ನನಗೆ ಸಿಕ್ಕಿದ್ದೇ ಅಪರೂಪ. ಇಂಥ ಅವಕಾಶ ಕಲ್ಪಿಸಿಕೊಟ್ಟವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಕಪಿಲ್ ಶರ್ಮ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    Sudeeps Kapil Sharma Shows episode telecasting today

    ಇಂಟ್ರೆಸ್ಟಿಂಗ್ ಏನಪ್ಪ ಅಂದ್ರೆ ಕಪಿಲ್ ಶರ್ಮ ಶೋನಲ್ಲಿ ಭಾಗವಹಿಸಿರುವ ಮೊಟ್ಟಮೊದಲ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್. ಕಪಿಲ್ ಶರ್ಮ ಶೋ ಮೂಲಕ ಹಿಂದಿ ಕಿರುತೆರೆಯ ವೀಕ್ಷಕರಿಗೂ ಸುದೀಪ್ ಆಪ್ತವಾಗಲಿದ್ದಾರೆ.

    Read more about: sudeep ಸುದೀಪ್
    English summary
    Kannada actor Kiccha Sudeep's episode of Hindi stand-up comedy show The Kapil Sharma Show will be aired on this Saturday.
    Saturday, February 23, 2019, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X