For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಸಾಧಕರ ಕುರ್ಚಿಯಲ್ಲಿ ಕುಳಿತ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ

  |
  Weekend With Ramesh Season 4 : ಈ ವಾರ ವೀಕೆಂಡ್‍ಗೆ ಬರುವ ಮತ್ತೊಂದು ಸಾಧಕ ದಂಪತಿ ಹೆಸರು ಬಹಿರಂಗ

  ಶಶಿ ಕುಮಾರ್ ಮತ್ತು ವಿನಯ ಪ್ರಸಾದ್ ನಂತರ ಈ ವಾರ ಯಾವ ಸಾಧಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂಬ ಕುತೂಹಲ ಕಾಡುತ್ತಿತ್ತು. ಆ ಕುತೂಹಲಕ್ಕೆ ಸೋಮವಾರವೇ ಜೀ ಕನ್ನಡ ಬ್ರೇಕ್ ಹಾಕಿತ್ತು.

  ರೋರಿಂಗ್ ಸ್ಟಾರ್ ಶ್ರೀಮುರಳಿ ಈ ವಾರದ ಮೊದಲ ಅತಿಥಿ ಎಂಬುದು ಅಧಿಕೃತವಾಗಿದೆ. ಹಾಗಿದ್ರೆ ಈ ವಾರ ಶ್ರೀಮುರಳಿ ಒಬ್ಬರೇನಾ ಅಥವಾ ಮತ್ತೊಬ್ಬರು ಬರ್ತಾರಾ ಎಂಬ ಪ್ರಶ್ನೆಯೂ ಮುಂದಿತ್ತು. ಇದೀಗ, ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ.

  ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?

  ಬರಿ ಸಿನಿಮಾದವರು ಮಾತ್ರನಾ ಸಾಧಕರು? ಬೇರೆ ಕ್ಷೇತ್ರದಲ್ಲಿ ಸಾಧಿಸಿದವರು ಕೂಡ ಅನೇಕರು ಇದ್ದಾರೆ, ಅವರನ್ನ ಕರೆಸಿ ಎಂದು ಒತ್ತಾಯ ಮಾಡ್ತಿದ್ದ ಪ್ರೇಕ್ಷಕರಿಗೆ ಇದು ಭರ್ಜರಿ ಸುದ್ದಿ. ಪ್ರೇಕ್ಷಕರ ಒತ್ತಾಯಕ್ಕೆ ಬೆಲೆ ನೀಡಿರುವ ಜೀ ಕನ್ನಡ ಸಿನಿಮಾ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ವ್ಯಕ್ತಿಗಳನ್ನ ಈ ವಾರ ಸಾಧಕರ ಸೀಟಿನಲ್ಲಿ ಕೂರಿಸುತ್ತಿದೆ. ಯಾರದು? ಮುಂದೆ ಓದಿ...

  ಸುಧಾಮೂರ್ತಿ-ನಾರಾಯಣ ಮೂರ್ತಿ

  ಸುಧಾಮೂರ್ತಿ-ನಾರಾಯಣ ಮೂರ್ತಿ

  ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ವಿಷ್ಯವನ್ನ ಜೀ ಕನ್ನಡ ವಾಹಿನಿ ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಸಾಧಕರ ಸೀಟಿಗೆ ನಿಜವಾದ ಅರ್ಥ ಸಿಕ್ಕಿದೆ ಎಂದು ಪ್ರೇಕ್ಷಕರು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

  ನೀವು ಪ್ರಶ್ನೆಗಳನ್ನ ಕೇಳಬಹುದು

  ನೀವು ಪ್ರಶ್ನೆಗಳನ್ನ ಕೇಳಬಹುದು

  WWR4ರ ಸಾಧಕರ ಸೀಟ್ ಅಲಂಕರಿಸುತ್ತಿರುವ ಖ್ಯಾತ ಉದ್ಯಮಿಗಳಾದ ಇನ್ಫೋಸಿಸ್'ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ನೀವು ಪ್ರಶ್ನೆ ಕೇಳಬಹುದು. ಅದಕ್ಕೊಂದು ಅವಕಾಶ ಕೊಟ್ಟಿದೆ ಜೀ ಕನ್ನಡ. ಜೀ ಕನ್ನಡ ಪೇಜ್ ನಲ್ಲಿ ಕಾಮೆಂಟ್ ಮೂಲಕ ಪ್ರಶ್ನೆಗಳನ್ನ ಕೇಳಬಹುದು. ಅದರಲ್ಲಿ ಉತ್ತಮವೆನಿಸುವ ಪ್ರಶ್ನೆಗಳನ್ನ ರಮೇಶ್ ಅರವಿಂದ್ ಆಯ್ಕೆ ಮಾಡಿಕೊಂಡು ಸಾಧಕರಿಗೆ ಕೇಳಲಿದ್ದಾರೆ.

  'ಓಂ' ಸಿನಿಮಾ ಮಾಡುವಾಗ ಉಪ್ಪಿ ಕಂಡ್ರೆ ಪ್ರೇಮಾ ಉರಿದು ಬೀಳುತ್ತಿದ್ದರಂತೆ.!'ಓಂ' ಸಿನಿಮಾ ಮಾಡುವಾಗ ಉಪ್ಪಿ ಕಂಡ್ರೆ ಪ್ರೇಮಾ ಉರಿದು ಬೀಳುತ್ತಿದ್ದರಂತೆ.!

  ಒಂದು ದಿನನಾ ಅಥವಾ ಎರಡು ದಿನನಾ?

  ಒಂದು ದಿನನಾ ಅಥವಾ ಎರಡು ದಿನನಾ?

  ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ವಿಚಾರದಲ್ಲಿ ಇಬ್ಬರು ಸಮನಾದ ಸಾಧಕರು. ಸೋ, ಇವರಿಬ್ಬರ ಎಪಿಸೋಡ್ ಹೇಗೆ ಇರಲಿದೆ ಎಂಬ ಕುತೂಹಲ ಜನಸಾಮಾನ್ಯರದ್ದು. ಒಂದೇ ದಿನ ಇರುತ್ತಾ ಅಥವಾ ಶನಿವಾರ, ಭಾನುವಾರ ಎರಡು ದಿನವೂ ಇರುತ್ತಾ ಎಂಬುದು ಭಾರಿ ಚರ್ಚೆಯಾಗ್ತಿದೆ. ಅದಕ್ಕೆ ಖಚಿತವಾದ ಸ್ಪಷ್ಟನೆ ನೀಡಿಲ್ಲ.

  ಒಂದೇ ದಿನ ಇರಬಹುದು?

  ಒಂದೇ ದಿನ ಇರಬಹುದು?

  ಈಗಾಗಲೇ ನಟ ಶ್ರೀಮುರಳಿ ಅವರ ಎಪಿಸೋಡ್ ರೆಕಾರ್ಡ್ ಆಗಿದೆ. ಅಲ್ಲಿಗೆ ಈ ವಾರದ ಮೊದಲ ಅತಿಥಿ ಶ್ರೀಮುರಳಿ. ಅಂದ್ರೆ, ಭಾನುವಾರದ ಅತಿಥಿ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು ಆಗಲಿದ್ದಾರೆ ಎಂಬ ನಿರೀಕ್ಷೆ ಇದೆ. ಇವರಿಬ್ಬರ ಎಪಿಸೋಡ್ ಒಂದೇ ದಿನ ಇರಬಹುದೇ?

  ಮೊದಲ ಪತಿ ಜೊತೆಗಿನ ಅಸಮಾಧಾನದ ಬಗ್ಗೆ ಹೇಳಿಕೊಂಡ ವಿನಯ ಪ್ರಸಾದ್ ಮೊದಲ ಪತಿ ಜೊತೆಗಿನ ಅಸಮಾಧಾನದ ಬಗ್ಗೆ ಹೇಳಿಕೊಂಡ ವಿನಯ ಪ್ರಸಾದ್

  ಸಾಧಕರ ಕುರ್ಚಿಯಲ್ಲಿ ಕೂರೋದು ಯಾರು?

  ಸಾಧಕರ ಕುರ್ಚಿಯಲ್ಲಿ ಕೂರೋದು ಯಾರು?

  ಒಂದು ವೇಳೆ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಎಪಿಸೋಡ್ ಒಂದೇ ದಿನ ಆದ್ರೆ, ಸಾಧಕರ ಸೀಟಿನಲ್ಲಿ ಯಾರು ಕುಳಿತುಕೊಳ್ಳುತ್ತಾರೆ. ಸರ್ಪ್ರೈಸ್ ಎಂಬಂತೆ ಎರಡು ಸಾಧಕರ ಕುರ್ಚಿ ಸಿದ್ಧ ಮಾಡ್ತಾರಾ? ಅದೂ ಗೊತ್ತಿಲ್ಲ. ಇಲ್ಲ ಅಂದ್ರೆ ಈ ವಾರಕ್ಕೆ ಒಬ್ಬರ ಬಗ್ಗೆ ಹೇಳಿ ಮುಂದಿನ ವಾರಕ್ಕೆ ಇನ್ನೊಬ್ಬರ ಬಗ್ಗೆ ತೋರಿಸಬಹುದಾ?

  ಗಂಡ-ಹೆಂಡತಿ ಇದೇ ಮೊದಲಲ್ಲ.!

  ಗಂಡ-ಹೆಂಡತಿ ಇದೇ ಮೊದಲಲ್ಲ.!

  ಅಂದ್ಹಾಗೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ರೀತಿ ಗಂಡ-ಹೆಂಡತಿ ಬರ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಭಾಗವಹಿಸಿದ್ದರು. ಆ ಸಮಯದಲ್ಲಿ ಶನಿವಾರ ಪ್ರೇಮ್, ಭಾನುವಾರ ರಕ್ಷಿತಾ ಅವರ ಎಪಿಸೋಡ್ ಟೆಲಿಕಾಸ್ಟ್ ಮಾಡಿದ್ದರು.

  ಸಿನಿಮಾ ಬಿಟ್ಟು ಬೇರೆ ಕ್ಷೇತ್ರ

  ಸಿನಿಮಾ ಬಿಟ್ಟು ಬೇರೆ ಕ್ಷೇತ್ರ

  ಹಾಗ್ನೋಡಿದ್ರೆ ಈ ಆವೃತ್ತಿಯ ಮೊದಲ ಎಪಿಸೋಡ್ ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು. ಅದಾದ ಬಳಿಕ ಮತ್ತೆ ಸಿನಿಮಾ ನಟರು ಕೂತಿದ್ದರು. ಅದಲ್ಲಿಗೆ ಸಿನಿಮಾ ನಟರಿಗೆ ಹೆಚ್ಚು ಆಧ್ಯತೆ ಕೊಡಲಾಗುತ್ತಿದೆ ಎಂದು ಟೀಕೆ ಮತ್ತೆ ಬಂತು. ಅಷ್ಟರಲ್ಲೇ ಇವರಿಬ್ಬರು ಬರುತ್ತಿರುವುದು ಈ ಎಲ್ಲಾ ಟೀಕೆಗಳಿಗೆ ಲಗೋರಿ ಹೊಡೆದಂತಿದೆ.

  ಬಾಹುಬಲಿ ಪ್ರತಿಮೆ 40 ಕಿಮೀ ಸಾಗಿಸಿದ ಹಾದಿಯಲ್ಲಿ ಎದುರಿಸಿದ ಸವಾಲುಗಳೇನು? ಬಾಹುಬಲಿ ಪ್ರತಿಮೆ 40 ಕಿಮೀ ಸಾಗಿಸಿದ ಹಾದಿಯಲ್ಲಿ ಎದುರಿಸಿದ ಸವಾಲುಗಳೇನು?

  English summary
  Infosys foundation chairperson sudha murthy and narayana murthy are participating in weekend with ramesh season 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X