For Quick Alerts
  ALLOW NOTIFICATIONS  
  For Daily Alerts

  ಸುಧಾ ಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್ ಬಿ

  |
  ಕೆಬಿಸಿ ಅಂತಿಮ ಸಂಚಿಕೆ ಸುಧಾ ಮೂರ್ತಿಯವರಿಂದ ಸುಖಾಂತ್ಯ | Oneindia Kannada

  ನಟ ಅಮಿತಾಭ್ ಬಚ್ಚನ್ ನಿರೂಪಣೆಯ 'ಕೌನ್ ಬನೇಗ ಕರೋಡ್ ಪತಿ' ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು, ಪ್ರಸಾರದ ದಿನಾಂಕ ಬಹಿರಂಗವಾಗಿದೆ.

  ಪ್ರೊಮೋದಲ್ಲಿ ಸುಧಾ ಮೂರ್ತಿ ಕಾಲಿಗೆ ಬಿದ್ದು ಬಿಗ್ ಬಿ ಆಶೀರ್ವಾದ ಪಡೆದಿದ್ದಾರೆ. ಸುಧಾ ಮೂರ್ತಿ ಸಾಧನೆಯನ್ನು ವೀಕ್ಷಕರಿಗೆ ಅಮಿತಾಬ್ ವಿವರಿಸಿದ್ದಾರೆ. ಸುಧಾ ಮೂರ್ತಿ ಅವರ ಸಮಾಜ ಸೇವೆಗೆ ನಮನ ಸಲ್ಲಿಸಿದ್ದಾರೆ.

  'ಕೌನ್ ಬನೇಗ ಕರೋಡ್ ಪತಿ'ಯಲ್ಲಿ ಸುಧಾ ಮೂರ್ತಿ: ಅಮಿತಾಬ್ ಗೆ ಸಿಕ್ತು ವಿಶೇಷ ಉಡುಗೊರೆ'ಕೌನ್ ಬನೇಗ ಕರೋಡ್ ಪತಿ'ಯಲ್ಲಿ ಸುಧಾ ಮೂರ್ತಿ: ಅಮಿತಾಬ್ ಗೆ ಸಿಕ್ತು ವಿಶೇಷ ಉಡುಗೊರೆ

  ಈ ಕಾರ್ಯಕ್ರಮ ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಸೋನಿ ವಾಹಿನಿಯಲ್ಲಿ ಪ್ರಸಾರ ಆಗಲಿದೆ. 'ಕೌನ್ ಬನೇಗ ಕರೋಡ್ ಪತಿ 11'ರ ಫೈನಲ್ ಸಂಚಿಕೆ ಇದಾಗಿದೆ. ಅಂತಿಮ ಸಂಚಿಕೆಯನ್ನು ಕನ್ನಡತಿ ಸುಧಾ ಮೂರ್ತಿ ಮೂಲಕ ಸುಖಾಂತ್ಯ ಮಾಡಲಾಗುತ್ತಿದೆ.

  ಸುಧಾ ಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋಗಳು ಚಿತ್ರೀಕರಣದ ವೇಳೆಯೇ ಬಹಿರಂಗ ಆಗಿತ್ತು. ಇದೀಗ ವಾಹಿನಿ ಅಧಿಕೃತವಾಗಿ ಪ್ರೊಮೋ ಬಿಡುಗಡೆ ಮಾಡಿ, ಕಾರ್ಯಕ್ರಮ ಪ್ರಸಾರದ ದಿನಾಂಕ ತಿಳಿಸಿದೆ.

  ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾಮೂರ್ತಿ, ಅಮಿತಾಬ್ ಬಚ್ಚನ್ ಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ದೇವದಾಸಿಯರು ತಯಾರಿಸಿದ ಕೌದಿಯನ್ನು ಅಮಿತಾಬ್ ಗೆ ಗಿಫ್ಟ್ ಆಗಿ ನೀಡಿದ್ದಾರೆ. ಸುಧಾ ಮೂರ್ತಿ ಅವರು ಹೊಸ ಜೀವನ ನೀಡಿದ ದೇವದಾಸಿಯರು ಹೊಲಿದಿರುವ ಕೌದಿ ಇದಾಗಿದೆ.

  English summary
  Infosys Foundation Chairperson Sudha Murthy's Kaun Banega Crorepati episode will be telecasting on November 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X