ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

Recommended Video

Weekend with Ramesh Season 4: ನಾರಾಯಣ ಮೂರ್ತಿ ಸುಧಾ ಮೂರ್ತಿ ಅವರ ಲವ್ ಸ್ಟೋರಿ ಅದ್ಭುತ | FILMIBEAT KANNADA

ಕನ್ನಡ ಕಿರುತೆರೆಯ ಪ್ರಸಿದ್ಧ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಸೀಸನ್ 4 ಪ್ರೇಕ್ಷಕರ ಮೆಚ್ಚುಗೆಯ ಕಾರ್ಯಕ್ರಮವಾಗಿದೆ. ಆದ್ರೂ ಪ್ರೇಕ್ಷಕರಲ್ಲಿ ಒಂದು ನಿರಾಸೆ ಭಾವನೆ ಕಾಡುತ್ತಿತ್ತು. ಕೇವಲ ಸಿನಿರಂಗಕ್ಕೆ ಮಾತ್ರ ಸೀಮಿತನ ಈ ಸಾಧಕರ ಕುರ್ಚಿ ಎನ್ನುವ ಬೇಸರ ಇತ್ತು. ಆದ್ರೆ ಈ ವಾರ ಸಾಧಕರ ಚರ್ಚಿಯ ಮೇಲೆ ಕುಳಿತ ವ್ಯಕ್ತಿ, ಇಷ್ಟು ದಿನಗಳ ಬೇಸರವನ್ನು ಒಮ್ಮೆಗೆ ತೊಡೆದು ಹಾಕಿದೆ.

ಅನೇಕ ದಿನಗಳಿಂದ ಜನರು ಕಾತುರದಿಂದ ಕಾಯುತ್ತಿದ್ದ ಆ ಅಮೃತ ಘಳಿಗೆ ಕೊನೆಗೂ ಬಂದುಬಿಟ್ಟಿತ್ತು. ಹೌದು, ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರನ್ನು ಸಾಧಕರ ಸೀಟ್‌ ಮೇಲೆ ನೋಡವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದೆ.

ನಾರಾಯಣ ಮೂರ್ತಿ ಅವರ ಸಾಧನೆ ಮತ್ತು ಅವರ ಜೀವನದ ಇಂಟ್ರಸ್ಟಿಂಗ್ ಸಂಗತಿಗಳು ಅನೇಕರಿಗೆ ಮಾದರಿಯಾಗಿದೆ. ಇನ್ನು ವಿಶೇಷ ಅಂದ್ರೆ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್ ಆಗಿದೆ.ಮುಂದೆ ಓದಿ..

ಮೊದಲ ಭೇಟಿಯಲ್ಲಿ ಸಿಗರೇಟ್

ಮೊದಲ ಭೇಟಿಯಲ್ಲಿ ಸಿಗರೇಟ್

ಸುಧಾ ಮೂರ್ತಿ ಅವರು ಮೊದಲು ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ನಾರಾಯಣ ಮೂರ್ತಿ ಅವರು ಸಿಗರೇಟ್ ಸೇದುತ್ತಿದ್ದರಂತೆ. ಅದನ್ನು ನೋಡಿ ಸುಧಾ ಮೂರ್ತಿ ಒಮ್ಮೆ ಶಾಕ್ ಆಗಿದ್ರಂತೆ. ಯಾವತ್ತು ಸಿಗರೇಟ್ ಮುಟ್ಟದ ನಾರಾಯಣ ಮೂರ್ತಿ ಅವರು ಮೊದಲು ಸುಧಾ ಅವರನ್ನು ಭೇಟಿಯಾದ ಸಮಯದಲ್ಲಿ ಸಿಗರೇಟ್ ಹಿಡಿದುಕೊಂಡಿದ್ರಂತೆ. ಆದ್ರೆ ಅದೂ ಗೆಳೆಯ ಕೊಟ್ಟಿದ್ದ ಸಿಗರೇಟ್ ಆಗಿತ್ತಂತೆ.

ರಿಕ್ಷಾದಲ್ಲಿ ಪ್ರಪೋಸ್

ರಿಕ್ಷಾದಲ್ಲಿ ಪ್ರಪೋಸ್

ಸುಧಾ ಮೂರ್ತಿ ಆಗುವ ಮೊದಲು ಸುಧಾ ಕುಲಕರ್ಣಿ ಆಗಿದ್ದರಂತೆ. ಸುಧಾ ಕುಲಕರ್ಣಿ ಅವರು ಪರಿಚಯವಾಗಿ ವರ್ಷಗಳ ನಂತರ ನಾರಾಯಣ ಮೂರ್ತಿ ಅವರು ಪ್ರಪೋಸ್ ಮಾಡಿದ್ರಂತೆ. ಅದೂ ರಿಕ್ಷಾದಲ್ಲಿ ಹೋಗುತ್ತಿದ್ದಾಗ. ಇಬ್ಬರು ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ನಾರಾಯಣ ಮೂರ್ತಿ ಅವರು ಮದುವೆ ಆಗುತ್ತಿಯಾ ಎಂದು ಕೇಳಿದ್ರಂತೆ.

ನಕ್ಕು ಸುಮ್ಮನಾಗಿದ್ದ ಸುಧಾ ಮೂರ್ತಿ

ನಕ್ಕು ಸುಮ್ಮನಾಗಿದ್ದ ಸುಧಾ ಮೂರ್ತಿ

ನಾರಾಯಣ ಮೂರ್ತಿ ಮೊದಲು ಪ್ರಪೋಸ್ ಮಾಡಿದ ತಕ್ಷಣ ಸುಧಾ ಮೂರ್ತಿ ನಕ್ಕು ಸುಮ್ಮನಾಗಿದ್ರಂತೆ. ತಕ್ಷಣಕ್ಕೆ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲವಂತೆ. ಆದ್ರೆ ಸ್ವಲ್ಪ ಕಾಯಿಸಿ, ಆ ನಂತರ ನಾರಾಯಣ ಮೂರ್ತಿ ಅವರ ಪ್ರೀತಿಗೆ ಮನಸೋತು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ.

ಪ್ರಪೋಸ್ ಮಾಡ್ತಾರೆ ಎನ್ನುವುದು ಗೊತ್ತಿತ್ತು

ಪ್ರಪೋಸ್ ಮಾಡ್ತಾರೆ ಎನ್ನುವುದು ಗೊತ್ತಿತ್ತು

ನಾರಾಯಣ ಮೂರ್ತಿ ಅವರು ಪ್ರಪೋಸ್ ಮಾಡ್ತಾರೆ ಅಂತ ಸುಧಾ ಮೂರ್ತಿ ಅವರಿಗೆ ಮೊದಲೆ ಗೊತ್ತಿತ್ತಂತೆ. ಆದ್ರೆ ಅವರ ಬಳಿ ಕೆಲಸವಿರಲ್ಲಿ. ಹಾಗಾಗಿ ನಾರಾಯಣ ಮೂರ್ತಿ ಅವರನ್ನು ಮದುವೆ ಆದ್ರೆ ಸುಖವಾಗಿ ಇರ್ತೀನಾ ಎನ್ನುವುದನ್ನು ಮೊದಲೆ ಯೋಚಿಸಿದ್ರಂತೆ. ಆ ನಂತರ ಒಪ್ಪಿಕೊಂಡ್ರಂತೆ.

ನಾರಾಯಣ ಮೂರ್ತಿ ಚಿತ್ರ ಬಿಟ್ಟು ಬೇರೆ ಇರಲಿಲ್ಲ

ನಾರಾಯಣ ಮೂರ್ತಿ ಚಿತ್ರ ಬಿಟ್ಟು ಬೇರೆ ಇರಲಿಲ್ಲ

ಸುಧಾ ಮೂರ್ತಿ ಅವರು ಪ್ರೀತಿಯನ್ನು ಒಪ್ಪಿಕೊಳ್ಳುವ ಸಮಯದಲ್ಲಿ ನಾರಾಯಣ ಮೂರ್ತಿ ಕೆಲಸವಿಲ್ಲದೆ ಕಾಲಿ ಇದ್ದರಂತೆ. ಆ ಸಮಯದಲ್ಲಿ ಪ್ರಪೋಸ್ ಮಾಡಿದ್ರಂತೆ. ಆದ್ರೆ ಸುಧಾ ಮೂರ್ತಿ ಅವರಿಗೆ ಗಂಡನ ಜಾಗದಲ್ಲಿ ನಾರಾಯಣ ಮೂರ್ತಿ ಅವರ ಚಿತ್ರ ಬಿಟ್ಟು ಬೇರೆ ಯಾರು ಇರಲಿಲ್ಲವಂತೆ. ಹಾಗಾಗಿ ಕೆಲಸ ಇಲ್ಲದಿದ್ರು ಪರವಾಗಿಲ್ಲ ಎಂದು ಮದುವೆಯಾಗಿದ್ದಾರೆ.

ಕಣೋದು ಬೇರೆ, ಒಳಗಿರುವ ಜ್ಞಾನ ಬೇರೆ

ಕಣೋದು ಬೇರೆ, ಒಳಗಿರುವ ಜ್ಞಾನ ಬೇರೆ

ನಾರಾಯಣ ಮೂರ್ತಿ ಅವರನ್ನು ನೋಡುವುದಕ್ಕು ಮೊದಲು ಸುಧಾ ಮೂರ್ತಿ ಅವರ ಮನಸ್ಸಿನಲ್ಲಿ ಪತಿಯ ಬಗ್ಗೆ ಒಂದು ಕಲ್ಪನೆ ಇತ್ತಂತೆ. ಆದ್ರೆ ಅವರನ್ನು ನೋಡಿದ ತಕ್ಷಣ ಒಮ್ಮೆ ಶಾಕ್ ಆಗಿದ್ರಂತೆ. ಕುಳ್ಳುಕೆ, ತುಂಬಾ ಸರಳವಾಗಿ, ಮೇಸ್ಟ್ರು ತರ ಇರುವುದನ್ನು ನೋಡಿ ಆಶ್ಚರ್ಯವಾಗಿತ್ತಂತೆ. ಆದ್ರೆ, ಮೇಲೆ ಕಾಣುವುದು ಬೇರೆ, ಒಳಗಿರುವ ಜ್ಞಾನ ಬೇರೆ ಎಂದು ಅರ್ಥಮಾಡಿಕೊಂಡರಂತೆ ಸುಧಾ ಮೂರ್ತಿ.

ಪತಿಗೆ ಸಾಲ ನೀಡುತ್ತಿದ್ದರು

ಪತಿಗೆ ಸಾಲ ನೀಡುತ್ತಿದ್ದರು

ಸುಧಾ ಮೂರ್ತಿ ಅವರನ್ನು ಪ್ರೀತಿಸುತ್ತಿದ್ದ ಸಮಯದಲ್ಲಿ ನಾರಾಯಣ ಮೂರ್ತಿ ಅವರ ಬಳಿ ಕೆಲಸವಿರಲಿಲ್ಲ. ಹಾಗಾಗಿ ನಾರಾಯಣ ಮೂರ್ತಿ ಅವರಿಗೆ ನೀಡುತ್ತಿದ್ದ ಹಣವನ್ನು ಸುಧಾ ಮೂರ್ತಿ ಅವರು ಪುಸ್ತಕದಲ್ಲಿ ಬರೆದು ಇಡುತ್ತಿದ್ದಂತೆ. ಹೆಂಡತಿ ಆಗುವ ತನಕ ಲೆಕ್ಕ ಬರೆದು ಇಡುತ್ತೇನೆ ಅದನ್ನ ಸಾಲ ತೀರಿಸ ಬೇಕೆಂದು ಹೇಳಿದ್ರಂತೆ. ಮದುವೆ ಸಮಯದ ವರೆಗೂ ಸಾಲ 4 ಸಾವಿರ ಆಗಿತ್ತಂತೆ. ಆದ್ರೆ ಮದುವೆ ಆದ ನಂತರ ಲೆಕ್ಕದ ಪುಸ್ತಕವನ್ನು ಹರಿದು ಹಾಕಿದ್ರಂತೆ.

ಕೆಲಸ ವಿಲ್ಲದ ಅಳಿಯನ ಬಗ್ಗೆ ಅತೃಪ್ತಿ

ಕೆಲಸ ವಿಲ್ಲದ ಅಳಿಯನ ಬಗ್ಗೆ ಅತೃಪ್ತಿ

ಮದುವೆ ವಿಚಾರ ಸುಧಾ ಮೂರ್ತಿ ಅವರು ಮನೆಯಲ್ಲಿ ಹೇಳಿದ ನಂತರ ನಾರಾಯಣ ಮೂರ್ತಿ ಅವರನ್ನು ನೋಡಲು ನೋಡಲು ಸುಧಾ ಮೂರ್ತಿ ತಂದೆ ಪುಣೆಗೆ ಹೋಗಿದ್ರಂತೆ. ಅಲ್ಲಿ ಹೋಗಿ ನಾರಾಯಣ ಮೂರ್ತಿ ಅವರನ್ನು ಮಾತನಾಡಿಸಿದ ನಂತರ, ಏನು ಕೆಲಸ ಮಾಡುತ್ತಿಲ್ಲ, ಕಾಲಿ ಕುಳಿತಿದ್ದಾನೆ ಇಂತವನಿಗೆ ಹೇಗೆ ಮದುವೆ ಮಾಡಿ ಕೊಡುವುದೆಂದು ಭಾರಿ ಬೇಜಾರು ಮಾಡಿ ಕೊಂಡಿದ್ರಂತೆ. ಆದ್ರೆ ಕಂಪ್ಯೂರ್ ಹಾಗಿ ಇದ್ದಾರೆ ಎಂದು ಹೇಳಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ರಂತೆ ಸುಧಾ ಮೂರ್ತಿ.

More from Filmibeat

English summary
Sudha Murthy and Narayana Murthy spoke about their love story in Weekend With Ramesh-4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X