'ಆನಂದ್' ಚಿತ್ರಕ್ಕೆ ನಾಯಕಿಯಾಗಿ ಸುಧಾರಾಣಿ ಆಯ್ಕೆ ಹೇಗಾಯ್ತು? ಯಾಕೀ ಗೊಂದಲ?
ಜೀ ಕನ್ನಡದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸುಧಾರಾಣಿ, ತುಳಸಿ ಪಾತ್ರವನ್ನ ನಿಭಾಯಿಸ್ತಾ ಇದ್ದಾರೆ. ತುಳಸಿ ಪಾತ್ರಕ್ಕೆ ಮೊದಲಿನಿಂದಾನೂ ಸಾಕಷ್ಟು ತೂಕವಿದೆ.
ಅಮ್ಮನಾಗಿ ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದ ತುಳಸಿಗೆ ತನ್ನ ಮಾವನೇ ಹೊಸ ಬದುಕೊಂದನ್ನು ಕೊಟ್ಟರು. ಮತ್ತೊಂದು ಮದುವೆ ಮಾಡಿ ಸಂಗಾತಿಯನ್ನು ಕಲ್ಪಿಸಿಕೊಟ್ಟರು. ಒಂದಷ್ಟು ವಿರೋಧಗಳ ನಡುವೆಯೂ ತುಳಸಿಯ ನಿಶ್ಕಲ್ಮಶ ಪ್ರೀತಿ ಹಾಗೂ ತಾಳ್ಮೆ ಎಲ್ಲಾ ಕೋಪ, ದ್ವೇಷವನ್ನು ಕಳೆದು ಈಗ ಎಲ್ಲರು ಅನ್ಯೋನ್ಯವಾಗಿರುವಂತೆ ಮಾಡಿದೆ.

ತುಳಸಿ ಗರ್ಭಿಣಿ ಎಂಬ ವಿಚಾರ ಹೊರ ಬಂದಾಗಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಸುಧಾರಾಣಿ ಅವರ ಅಭಿಮಾನಿಗಳು ಆ ಸಮಯದಲ್ಲಿ ತುಂಬಾ ಸಪೋರ್ಟಿವ್ ಆಗಿ ನಿಂತ್ರು. ಲೇಟ್ ಪ್ರೆಗ್ನೆನ್ಸಿ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಇದೀಗ ಮತ್ತೊಂದು ಗಾಸಿಪ್ ವಿಚಾರಕ್ಕೆ ತುಳಸಿ ಅಭಿಮಾನಿಗಳು ಒಂದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ.
'ಆನಂದ್' ಬಗ್ಗೆ ಹೊಸ ಚರ್ಚೆ
ಸುಧಾರಾಣಿ ಬಗ್ಗೆ ಹಲವು ಸ್ಟೇಜ್‌ಗಳಲ್ಲಿ ಹಲವು ರೀತಿಯ ವಿಚಾರಗಳು ಬಂದಿವೆ. ಅದರಲ್ಲೂ 'ಆನಂದ್' ಸಿನಿಮಾ ಬಗ್ಗೆ. ಆ ಚಿತ್ರಕ್ಕೆ ಸುಧಾರಾಣಿ ಮೊದಲ ಆಯ್ಕೆಯಲ್ಲ ಎಂಬಂತೆ ವಿಚಾರ ಹರಿದಾಡುತ್ತಿದೆ. ಅಪರ್ಣಾ ಮೊದಲು ಆಯ್ಕೆಯಾಗಿದ್ದರು. ಆದರೆ ಅವರು ಬೇಡವೆಂದ ಮೇಲೆ ಸುಧಾರಾಣಿಯವರ ಆಯ್ಕೆಯಾಗಿದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಫ್ಯಾನ್ಸ್ ಕಡೆಯಿಂದ ಕ್ಲಾರಿಟಿ
ಈ ಚರ್ಚೆಗಳಿಗೆ ಸುಧಾರಾಣಿ ಫ್ಯಾನ್ಸ್ ತೆರೆ ಎಳೆದಿದ್ದಾರೆ. ಖ್ಯಾತ ನಿರ್ದೇಶಕ ಭಗವಾನ್ ಅವರು ಮಾತಾಡಿದ್ದ ವೀಡಿಯೋ ಸಾಕ್ಷಿ ಸಮೇತ ಸ್ಪಷ್ಟನೆ ನೀಡಿದ್ದಾರೆ. "ಅಣ್ಣಾವ್ರು, ಪಾರ್ವತಮ್ಮ ಶೂಟಿಂಗ್ ಇಲ್ಲದೇ ಇದ್ದಾಗ ಚಿ. ಉದಯಶಂಕರ್ ಮನೆಗೆ ಹೋಗಿ ಕಾಲ ಕಳೆಯುತ್ತಿದ್ರು. ಆಗ ಅಲ್ಲಿಗೆ ಸುಧಾರಾಣಿ ಬಂದು ಹೋಗ್ತಿದ್ರು, ಪಾರ್ವತಮ್ಮ ತುಂಬಾ ಇಷ್ಟ ಪಟ್ಟಿದ್ರು. ಶಿವಣ್ಣನ 'ಆನಂದ್' ಚಿತ್ರ ಶುರುವಾದಾಗ ಈ ಹುಡುಗಿಯನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡ್ರು. ಸಿನಿಮಾ ಯಾವ ರೀತಿ ಗೆಲ್ತು ಗೊತ್ತೇಯಿದೆ ಎಂದಿದ್ರು"
ಬ್ಲಾಕ್ ಬಸ್ಟರ್ ಹಿಟ್ ಆನಂದ್
ಸುಧಾರಾಣಿ ಫಸ್ಟ್ ಸಿನಿಮಾ 'ಆನಂದ್'. ಇದು ಇಂದಿಗೂ ಎವರ್ ಗ್ರೀನ್ ಸಿನಿಮಾ. ಶಿವಣ್ಣ ಹಾಗೂ ಸುಧಾರಾಣಿ ಜೋಡಿಗೆ ಬಹುಪರಾಕ್ ಕೇಳಿ ಬಂದಿತ್ತು. ಹಾಡುಗಳು ಹಿಟ್ ಆಗಿತ್ತು. ಎಷ್ಟೇ ಆಗಲೀ ಪಾರ್ವತಮ್ಮ ಅವರು ಮಾಡಿದ ಜೋಡಿ, ಕೇಳಿದ ಕಥೆಯಲ್ಲವೇ.
ತುಳಸಿ ಪಾತ್ರದಲ್ಲಿ ಸುಧಾರಾಣಿ
ಇನ್ನು ಸುಧಾರಾಣಿ ಅವರು ಇಂದಿಗೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ, ಸೀರಿಯಲ್ ಅಂತ ಸದಾ ಅಭಿನಯದಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ತುಳಸಿ ಪಾತ್ರದಲ್ಲಿ ಎಲ್ಲರ ಮನೆ ಮಗಳಾಗಿದ್ದಾರೆ. ಮಾಧವನ ಮನೆಗಂತು ಅಚ್ಚುಮೆಚ್ಚಿನ ಅಮ್ಮನಾಗಿದ್ದಾರೆ. ಇತ್ತೀಚೆಗೆ ಬಂದ 'ಬಘೀರ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











