300 ಎಪಿಸೋಡ್ ಪೂರೈಸಿದ 'ಶ್ರೀರಸ್ತು ಶುಭಮಸ್ತು':ಸೆಟ್ಟಲ್ಲಿ ಸುಧಾರಾಣಿಯನ್ನು ಹೇಗೆಲ್ಲಾ ಕಾಡುತ್ತಾರೆ ನೋಡಿ?

By ಎಸ್ ಸುಮಂತ್

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಶುರುವಾದಾಗಿನಿಂದ ಸಾಕಷ್ಟು ಆಸಕ್ತಿದಾಯವಾಗಿಯೇ ಬರುತ್ತಿದೆ. ನಮ್ಮ ಅಕ್ಕಪಕ್ಕದ ಕಥೆ ಏನೋ ಎಂಬಂತೆ ಎಲ್ಲರಿಗೂ ಹತ್ತಿರವಾಗಿ ಬಿಟ್ಟಿದೆ. ತುಳಸಿ ಅವರ ಮುಗ್ಧತೆ, ಅವರಿಗೆ ಸೃಷ್ಟಿಯಾಗುತ್ತಿರುವ ಶತ್ರುಗಳು, ಅವೆಇಗೆ ಬರುತ್ತಿರುವ ಸವಾಲು, ಅದನ್ನು ನಿಭಾಯಿಸುವ ರೀತಿ, ಮಾಧವನ ಬೆಂಬಲ ಎಲ್ಲವೂ ಧಾರಾವಾಹಿ ನೋಡುಗರನ್ನು ಹಿಡಿದಿಟ್ಟಿದೆ.

ಸಂಗಾತಿ ಎಂಬುದು ಯಾಕೆ ಅಗತ್ಯ ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಅಸಡ್ಡೆ ತೋರುವವರೆ ಹೆಚ್ಚು. ಆದರೆ, ವಯಸ್ಸು ಮೀರಿದ ಮೇಲೆ ಕನಿಷ್ಠ ಪಕ್ಷ ಭಾವನೆಗಳ ತೊಳಲಾಟ, ಮನಸ್ಸಿನ ನೋವು, ಹೊರಗಿನ ದಿನಚರಿಯನ್ನಾದರೂ ಕೇಳುವ ಮನಸ್ಸು ಜೊತೆಗಿದ್ದರೆ, ಆ ನೆಮ್ಮದಿಯೇ ಬೇರೆ. ಆ ನಿಜಾಂಶವನ್ನು ಈ ಧಾರಾವಾಹಿ ಮೂಲಕ ಅದ್ಭುತವಾಗಿ ಹೆಣೆದಿದ್ದಾರೆ.

Sudharani Shrirasthu Shubhamasthu

300 ಎಪಿಸೋಡ್ ಮುಗಿಸಿದ 'ಶ್ರೀರಸ್ತು ಶುಭಮಸ್ತು'

ಇದು ಧಾರಾವಾಹಿಗಳ ಜಮಾನ. ಅದರಲ್ಲೂ ಜೀ ಕನ್ನಡ ನೀಡುವ ಒಂದೊಂದು ಧಾರಾವಾಹಿಗಳು ಬೇರೆ ಕಡೆಗೆ ಗಮನ ಹೋಗುವುದಕ್ಕೆ ಬಿಡುವುದಿಲ್ಲ. ಅಷ್ಟು ಮನಸ್ಸನ್ನು, ಮನುಷ್ಯನನ್ನು ಹಿಡಿದಿಡುವಂತ ಕಥೆಗಳನ್ನೇ ನೀಡುತ್ತಿದೆ. ಸಂಜೆಯಿಂದ ಹಿಡಿದು ರಾತ್ರಿ ಮಲಗುವ ತನಕ ಜೀ ಕನ್ನಡದ ಪ್ರತಿಯೊಂದು ಧಾರಾವಾಹಿಯೂ ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ಶ್ರೀರಸ್ತು ಶುಭಮಸ್ತು ಕೂಡ. ಇತ್ತೀಚೆಗಷ್ಟೇ ಶುರುವಾಯ್ತೇನೋ ಎನಿಸುತ್ತದೆ. ಆದರೆ, ಈಗ ಈ ಧಾರಾವಾಹಿ ಹತ್ತು ತಿಂಗಳನ್ನು ಪೂರೈಸಿಯೇ ಬಿಟ್ಟಿದೆ. ಧಾರವಾಹಿ 300 ಎಪಿಸೋಡ್‌ಗಳನ್ನು ಪ್ರಸಾರ ಮಾಡಿದ ಖುಷಿಯಲ್ಲಿದೆ.

ತುಳಸಿ ಕಂಡರೆ ಕೆಂಡಕಾರುವ ಶಾರ್ವರಿ

300 ಎಪಿಸೋಡ್‌ಗಳಲ್ಲಿ ಆರಂಭದಿಂದ ನೆನಪಿಸಿಕೊಂಡಾಗ ಆ ತಾಯಿಯ ಮಮತೆಯೇ ಕಣ್ಣ ಮುಂದೆ ಬರುತ್ತೆ. ಸದ್ಯಕ್ಕೆ ಒಂದು ಹೆಣ್ಣಿಗೆ ಪ್ರೀತಿಸುವ ಗಂಡಿನ ಬೆಂಬಲವಿರಬೇಕು ಎಂದು ಅರಿತ ದತ್ತ, ಮಾಧವನಿಗೆ ಮದುವೆ ಮಾಡಿಕೊಟ್ಟಾಗಿದೆ. ಈಗ ತುಳಸಿ, ಮಾಧವನ ಹೆಂಡತಿಯಾಗಿದ್ದಾಳೆ. ಅಧಿಕಾರದ ಆಸೆಗೆ ಶಾರ್ವರಿ, ತುಳಸಿಗೆ ಎಷ್ಟು ಸಾಧ್ಯವೋ ಅಷ್ಟು ಹಿಂಸೆ ಕೊಡುತ್ತಿದ್ದಾಳೆ. ಅದು ಮಾನಸಿಕವಾಗಿ.

ಅಭಿ ಮನೆ ಜವಾಬ್ದಾರಿ ಹೊತ್ತ ತುಳಸಿ

ಮಾಧವ ಮದುವೆಯಾಗ ಬಂದಿದ್ದೇ ದೊಡ್ಡ ಅಪರಾಧವೆಂಬಂತೆ ಜನಾರ್ಧನ, ಅಭಿಯ ಮದುವೆ ಮುರಿದು ಬಿಟ್ಟ. ಈ ವಿಚಾರ ತುಳಸಿಗೆ ಮತ್ತಷ್ಟು ಮಾನಸಿಕ ಹಿಂಸೆಯಾಗಿದೆ. ಅಭಿಯ ಮನಸ್ಸು ಗೆಲ್ಲಬೇಕು ಎಂದರೆ ದೀಪಿಕಾ ಜೊತೆಗೆ ಮುರಿದ ಮದುವೆಯನ್ನು ಮುಂದುವರೆಸಬೇಕು. ಅದೇ ಷರತ್ತನ್ನೇ ಅಭಿ, ತುಳಸಿಗೆ ಹಾಕಿದ್ದಾನೆ. ಅದಕ್ಕೆ ತುಳಸಿ ಕೂಡ ಒಪ್ಪಿ ಆಗಿದೆ. ಈ ಹೊಸ ಸವಾಲಿಗೆ ದತ್ತನ ಬೆಂಬಲವೂ ಸಿಕ್ಕಿದೆ.

ಸೆಟ್ಟಲ್ಲಿ ಹೇಗೆ ಕಾಡುತ್ತಾರೆ ನೋಡಿ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿಗೆ, ಶಾರ್ವರಿ ಹಾಗೂ ಅಭಿ ದುಷ್ಮನ್‌ಗಳಾಗಿದ್ದಾರೆ. 300 ಎಪಿಸೋಡ್‌ಗಳು ತಲುಪಿದ ಖುಷಿಯಲ್ಲಿ ಸುಧಾರಾಣಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಧಾರಾವಾಹಿಯಲ್ಲಿ ಕೆಂಡಕಾರುವಂತ ಶಾರ್ವರಿ, ಅಭಿ ಎಷ್ಟು ತಮಾಷೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತೆ.

ಬರೀ ಅಭಿ, ಶಾರ್ವರಿ‌ ಮಾತ್ರ ಅಲ್ಲ ಸುಧಾರಾಣಿ ಸೆಟ್ಟಿನಲ್ಲಿ ಇದ್ದಾಗ, ಇಡೀ ತಂಡ, ಅವರನ್ನು ರೇಗಿಸುತ್ತಾ ಇದೆ. ಶಾಟ್ ಮುಗಿಯುವುದಕ್ಕೆ ಬಿಟ್ಟಿಲ್ಲ. ಅವರನ್ನು ಡಿಸ್ಟರ್ಬ್ ಮಾಡಿದ್ದಾರೆ. ಕಡೆಗೆ ಧಾರಾವಾಹಿಯ ತಂಡ ಕಲಾವಿದರನ್ನೆಲ್ಲಾ ಸೈಡಿಗೆ ಕಳುಹಿಸಿ, ಶಾಟ್ ಓಕೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರಿಗೆ ಸಾಲು ಸಾಲು ಕಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Sudharani kannada serial Shrirasthu Shubhamasthu completed 300 episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X