ಸುಧಾರಾಣಿ ಅಭಿನಯದ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಮೇಕಿಂಗ್ ವಿಡಿಯೋ ಇಲ್ಲಿದೆ!
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರೋಮೊ ಬಿಟ್ಟಾಗಿನಿಂದಾಲು ಒಂದಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಈಗಾಗಲೇ ಜೀ ಕನ್ನಡದಲ್ಲಿ ಬರುತ್ತಿರುವ ಸಾಕಷ್ಟು ಧಾರಾವಾಹಿಗಳು ಜನರ ಮನಸ್ಸನ್ನು ಗೆದ್ದಿವೆ.
ಗೆದ್ದಿರೋ ಧಾರಾವಾಹಿಗಳ ನಡುವೆ ಮತ್ತೊಂದು ಹೊಸ ಧಾರಾವಾಹಿ ಬರುತ್ತಿದೆ ಎಂದ ಕೂಡಲೇ ಎಲ್ಲರ ಚಿತ್ತ ಸಾಮಾನ್ಯವಾಗಿ 'ಶ್ರೀರಸ್ತು ಶುಭಮಸ್ತು' ಮೇಲೆ ಬಿದ್ದಿತ್ತು. ಇದೀಗ ಹೊಸ ಧಾರಾವಾಹಿ ಹೊಸದಾಗಿ ಮೂಡಿ ಬರುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡು ಕುಟುಂಬ.. ಈ ಎರಡು ಕುಟುಂಬದಲ್ಲೂ ಒಂದೇ ಸಮಸ್ಯೆ. ಮಕ್ಕಳು ತಂದೆ ತಾಯಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದೇನೆ ಮನ ನೋಯಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೂ ಮಕ್ಕಳು ಬದಲಾಗುತ್ತಾರೆ ಎಂಬ ಆಸೆಯಲ್ಲಿ ಮಾಧವ-ತುಳಸಿ ಕಾಯುತ್ತಾ ಇದ್ದಾರೆ. ಈ ನಡುವೆ ಬರುವ ಸೊಸೆ.. ಬರುವ ಹೆಂಡತಿ ಜೀವನವನ್ನು ಬದಲಾಯಿಸಲಿದ್ದಾರೆ.

ಮಗನಿಂದಾನೇ ಮಾಧವನಿಗೆ ನೋವು
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ ತುಂಬಾ ಖ್ಯಾತಿ ಪಡೆದಿರುವ ವ್ಯಕ್ತಿ. ಇವರು ಮಾಡುವ ಅಡುಗೆಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ. ಹೊರಗಡೆ ಹೋದರೆ ಸಾಕು ಸುಮಾರು ಜನ ಅಭಿಮಾನಿಗಳು ಇವರನ್ನು ಮುತ್ತಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಬಯಸಿದ್ದು ಸಿಗುತ್ತಿಲ್ಲ. ಮಗನನ್ನು ಅಪ್ಪಿ ಮುದ್ದಾಡಬೇಕು ಎಂಬ ಆಸೆ ಇದೆ. ಆದರೆ ಆಸೆ ಈಡೇರುತ್ತಿಲ್ಲ. ಅಪ್ಪನ ನೆರಳನ್ನು ಕಂಡರೂ ಆಗುವುದಿಲ್ಲ. ಯಾವತ್ತಾದರೂ ಒಂದು ದಿನ ಎಲ್ಲವೂ ಸರಿಯಾಗುತ್ತೆ ಎಂದು ಕಾಯುತ್ತಿದ್ದಾರೆ.

ಮಗನಿಗಾಗಿ ತುಡಿಯುವ ತುಳಸಿ ಮನ
ತುಳಸಿಯದ್ದು ಒಂದು ರೀತಿ ಮಾಧವನ ರೀತಿಯ ತೊಳಲಾಟವೇ. ಗಂಡನಿಲ್ಲದ ಮನೆಯಲ್ಲಿ ವಯಸ್ಸಾದ ಮಾವನನ್ನು ನೋಡಿಕೊಂಡು, ಮಗನಿಗಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಮಗನಾದವನು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಬರೀ ತನ್ನ ನೆಮ್ಮದಿ, ಸುಖವನ್ನಷ್ಟೇ ನೋಡುತ್ತಿದ್ದಾನೆ. ಅಮ್ಮ ಮಾಡುವ ಕೆಲಸ ಕರ್ತವ್ಯವೆಂದು ತಿಳಿದು ಬಿಟ್ಟಿದ್ದಾನೆ. ಆಗಾಗ ಹರ್ಟ್ ಮಾಡಿದರು ಕೂಡ ಸುಮ್ಮನೆ ಆಗಿ ಬಿಡುತ್ತಾರೆ.

ಸೊಸೆಯಂದಿರಿಂದ ಇಬ್ಬರ ಜೀವನದಲ್ಲಿ ಸುಖ
ತುಳಸಿ ಮನೆಗೆ ಇನ್ನು ಸೊಸೆ ಬಂದಿಲ್ಲ. ತುಳಸಿ ಮಗ ಪಾಪು ಪ್ರೀತಿ ಮಾಡಿರುವ ಹುಡುಗಿ ಕೂಡ ತುಂಬಾ ಒಳ್ಳೆಯ ಹುಡುಗಿ ಕೂಡ ತುಂಬಾ ಒಳ್ಳೆಯವಳು. ಆದರೆ, ಆ ಪ್ರೀತಿಯನ್ನು ಹೇಳುವುದಕ್ಕೆ ಪಾಪು ಇನ್ನು ಹೆದರುತ್ತಿದ್ದಾನೆ. ಅತ್ತ ಮಾಧವನ ಸೊಸೆ ಕೂಡ ಮಾವನ ಸಂತೋಷಕ್ಕಾಗಿ ಪ್ರಯತ್ನಪಡುತ್ತಿದ್ದಾಳೆ. ಒಂದಲ್ಲ ಒಂದು ದಿನ ಅವರು ಸರಿಯಾಗುತ್ತಾರೆ ಅನ್ನೋ ಭರವಸೆಯನ್ನು ನೀಡುತ್ತಿದ್ದಾಳೆ. ಇಬ್ಬರು ಸೊಸೆಯಂದಿರಿಂದ ತುಳಸಿ-ಮಾಧವ ಒಂದಾಗಲಿದ್ದಾರೆ.

ಧಾರಾವಾಹಿಯಲ್ಲಿ ಬಾರದೆ ಇರುವ ವಿಡಿಯೋ ಇಲ್ಲಿದೆ
ತುಳಸಿಗೆ ಸೊಸೆಯಾಗಿ ಸಿರಿ ಬರಬೇಕಿದೆ. ಸಿರಿಯನ್ನು ತುಳಸಿಯ ಮಗ ಪ್ರೀತಿ ಮಾಡುತ್ತಿದ್ದಾನೆ. ಈಗಾಗಲೇ ಹಲವು ಪ್ರೋಮೊಗಳಿಂದ ಅತ್ತೆ ಸೊಸೆ ಹೇಗೆ ಇರಲಿದ್ದಾರೆ ಎಂಬುದು ಪ್ರೂವ್ ಆಗಿದೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಧಾರಾವಾಹಿಗಳ ನಡುವೆಯೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪೋಸ್ಟರ್ ಒಂದು ರಪ್ ಅಂತ ಪಾಸಾಗುತ್ತೆ. ಆ ಪೋಸ್ಟರ್ ನಲ್ಲಿ ಸೊಸೆ ಸಿರಿ ಅತ್ತೆಗೆ ಗಾಡಿ ಕಲಿಸುತ್ತಿರುವುದು. ಆಗ ಮಳೆ ಬರುತ್ತಿರುವುದು. ನಾವೆಲ್ಲಾ ನಿಜವಾಗಲೂ ಗಾಡಿ ಓಡಿಸುತ್ತಿದ್ದಾರೆ ಎಂದುಕೊಂಡಿದ್ದೇವೆ. ಆದ್ರೆ ಟ್ರ್ಯಾಲಿ ಮೂಲಕ ಈ ವಿಡಿಯೋವನ್ನು ಶೂಟ್ ಮಾಡಿದ್ದಾರೆ. ಸಿರಿ ಮತ್ತು ತುಳಸಿ ತುಂಬಾ ಆತ್ಮೀಯರಾದ ಮೇಲೆ ಈ ಒಂದು ದೃಶ್ಯ ಬರಬಹುದು. ಆದ್ರೆ ಆ ವಿಡಿಯೋವೊಂದು ಮುಂಚೆಯೇ ವೈರಲ್ ಆಗಿದೆ.


Click it and Unblock the Notifications











