ಬ್ಯಾಂಕಾಕ್‌ನಲ್ಲಿರುವ ನಿರ್ಮಲಾಗೆ ಭಾರ್ಗವಿಯಿಂದ ಆಘಾತ ; ಹೇಳಿದ್ದೇನು ಸುಜಾತ ?

ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ ಗೊತ್ತಾದರು ಹಲವರು ಬಾರಿ ಆ ಪಾತ್ರಗಳನ್ನು ಮತ್ತು ಆ ಪಾತ್ರಧಾರಿಗಳನ್ನು ಹಲವರು ಮನೆಯ ಸದಸ್ಯರಂತೆ ನೋಡುತ್ತಾರೆ. ಪ್ರೀತಿ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ದ್ವೇಷವನ್ನು ಕೂಡ ಮಾಡುತ್ತಾರೆ.

ಆದರೆ.. ಹೀಗೆ ಬೆಸೆದ ಸಂಬಂಧ ಕೆಲ ಒಮ್ಮೆ ಅರ್ಧಕ್ಕೆ ಕಳಚಿ ಬಿದ್ದಿದ್ದು ಇದೆ. ಹಲವರು ವ್ಯೆಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಏಕಾಏಕಿ ಹೊರ ಬರುತ್ತಾರೆ. ಇನ್ನೂ ಕೆಲವರು ಬೇರೆ ಯಾವುದೋ ಕಾರಣಕ್ಕೋ ಅಥವಾ ಅನಾರೋಗ್ಯದಿಂದಾಗಿಯೋ, ಮನಸಿಲ್ಲದಿದ್ದರೂ ಧಾರಾವಾಹಿಯನ್ನು ಕೈ ಬಿಡುತ್ತಾರೆ. ಹೀಗೆ ದಿನ ನಿತ್ಯ ಕಣ್ಣೆದುರು ಬರುವ ಚಿರಪರಿಚಿತ ಮುಖ ಏಕಾಏಕಿ ಕಾಣಿಸದಿದ್ದಾಗ, ಪಾತ್ರಧಾರಿ ಬದಲಾದಾಗ ಪ್ರೇಕ್ಷಕರಿಗೆ ನಿರಾಸೆಯಾಗುತ್ತೆ. ಕೆಲ ಒಮ್ಮೆ ಚೆನ್ನಾಗಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಕೂಡ ಮಕಾಡೆ ಮಲಗುತ್ತೆ.

sujatha-akshaya-breaks-silence-on-shocking-bhargavi-llb-exit

ಇನ್ನೂ ಇಲ್ಲಿ ಪಾತ್ರಗಳನ್ನು ಏಕಾಏಕಿ ಅಂತ್ಯಗೊಳಿಸಲಾಗುತ್ತೋ, ಹಾಗೇ ಹೇಳದೇ ಕೇಳದೇ ಪಾತ್ರಧಾರಿಗಳನ್ನು ಬದಲಿಸಲಾಗುತ್ತೆ. ತಮ್ಮ ಪಾತ್ರ ಬೇರೆಯವರ ಪಾಲಾಗಿದೆ ಎನ್ನುವ ವಿಚಾರ ಇವರಿಗೆ ಗೊತ್ತೇ ಇರಲ್ಲ. ಉದಾಹರಣೆಗೆ ಸುಜಾತಾ ಅವರನ್ನೇ ತೆಗೆದುಕೊಳ್ಳಿ.

ಹೌದು, ಸುಜಾತ ಅಕ್ಷಯ.. ಕನ್ನಡ ಕಿರುತೆರೆಯಲ್ಲಿ ತಮ್ಮ ಚಾಪು ಮೂಡಿಸಿರುವ ನಟಿ. ಹಲವಾರು ವರ್ಷಗಳಿಂದ ಕಿರುತೆರೆಯ ಮೂಲಕ ಮನ ಮನೆ ತಲುಪಿರುವ ಸುಜಾತ ಒಂದು ಚಿಕ್ಕ ಗ್ಯಾಪ್ ನಂತರ ''ಕಲರ್ಸ್ ಕನ್ನಡ''ಕ್ಕೆ ಮರಳಿದ್ದರು.

''ಭಾರ್ಗವಿ ಎಲ್.ಎಲ್.ಬಿ'' ಧಾರಾವಾಹಿಯಲ್ಲಿ ನಿರ್ಮಲಾ ಪಾಟೀಲ್ ಪಾತ್ರವನ್ನು ಮಾಡುತ್ತಿದ್ದರು. ಆದರೆ ಈಗ ಸುಜಾತಾ ಅವರ ಸ್ಥಾನ ಬೇರೆಯವರಿಗೆ ಪಾಲಾಗಿದೆ‌. ಇಂಟ್ರೆಸ್ಟಿಂಗ್ ಅಂದರೆ ತಮ್ಮ ಪಾತ್ರ ಬೇರೆಯವರ ಪಾಲಾಗಿದೆ ಎನ್ನುವ ವಿಚಾರ ಖುದ್ದು ಸುಜಾತ ಅವರಿಗೆ ಗೊತ್ತಿಲ್ಲ.

ಬದಲಿಗೆ ತಮ್ಮ ಪಾಡಿಗೆ ತಾವು ಬ್ಯಾಂಕಾಕ್ ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದರು ಸುಜಾತ. ಆಗ ಈ ಬೆಳವಣಿಗೆ ನಡೆದಿದೆ. ಸೋಶಿಯಲ್ ಮೀಡಿಯಾ ಮತ್ತು ಟ್ರೋಲ್ ಪೇಜ್ ಗಳ ಮೂಲಕ ಸುಜಾತಾ ಅವರಿಗೆ ತಮ್ಮ ಮತ್ತು ''ಭಾರ್ಗವಿ ಎಲ್.ಎಲ್.ಬಿ''ಯ ಸಂಬಂಧ ಮುಕ್ತಾಯವಾಗಿದೆ ಎನ್ನುವ ವಿಷಯ ಗೊತ್ತಾಗಿದೆ.

sujatha-akshaya-breaks-silence-on-shocking-bhargavi-llb-exit

ಆದರೆ ಸುಜಾತ ಅವರ ಜಾಗದಲ್ಲಿ ಬೇರೆ ಯಾರೇ ಯಾರೇ ಆಗಿದ್ದರೂ ಕೂಡ ಈ ವಿಚಾರವನ್ನು ದೊಡ್ಡದಾಗಿಸುತ್ತಿದ್ದರು. ವಿವಾದ ಮಾಡುತ್ತಿದ್ದರು. ಆದರೆ. ಸುಜಾತಾ ಅವರ ನಡೆ ಇದಕ್ಕೆ ತದ್ವಿರುದ್ದವಾದದ್ದು ಎನ್ನುವುದು ಇಲ್ಲಿ ಪ್ರಶಂಸಿಸಬೇಕಾದ ವಿಚಾರ. ತಮ್ಮನ್ನು ಧಾರಾವಾಹಿಯಿಂದ ತೆಗೆಯಲಾಗಿದೆ ಎನ್ನುವ ವಿಚಾರ ಗೊತ್ತಾದ್ಮೇಲೂ ಕೂಡ ಸುಜಾತ ಯಾರ ವಿರುದ್ದವೂ ಅಪಸ್ವರ ಎತ್ತಿಲ್ಲ. ಯಾರ ವಿರುದ್ದವೂ ಆರೋಪ ಮಾಡಿಲ್ಲ. ಬದಲಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.

ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಸುಜಾತ ''ನಾನು ಈಗ ಬ್ಯಾಂಕಾಕ್‌ನ ಸುವರ್ಣಭೂಮಿ ಏರ್ಪೋರ್ಟ್‌ನಲ್ಲಿ ಇದ್ದೀನಿ. ವಾಪಸ್ ಬೆಂಗಳೂರಿಗೆ ಬರುತ್ತಿದ್ದೇನೆ. ಈ ವಿಡಿಯೋ ಯಾಕೆ ಮಾಡ್ತಿದ್ಧೀನಿ ಅಂದ್ರೆ.. ಸಡನ್ ಆಗಿ ನನಗೆ ಒಂದು ಮೆಸೇಜ್ ಬಂತು.. ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ನಿರ್ಮಲಾ ಪಾಟೀಲ್ ಕ್ಯಾರೆಕ್ಟರ್‌ನ ರಿಪ್ಲೇಸ್ ಮಾಡ್ತಾ ಇದ್ದಾರೆ'' ಎನ್ನುವ ಮೆಸೇಜ್ ಅದು. ಹಾಗೇ ಹಲವಾರು ಟ್ರೋಲ್ ಪೇಜಸ್‌ನವರು ವೈಯಕ್ತಿಕ ಕಾರಣದಿಂದ ಸುಜಾತ ಅಕ್ಷಯ ಸೀರಿಯಲ್‌ ಬಿಡ್ತಾ ಇದ್ದಾರೆ' ಅಂತ ಹಾಕಿದ್ದಾರೆ''

''ಎಷ್ಟೊಂದು ಜನ ನನಗೆ ಮೆಸೇಜ್ ಮಾಡ್ತಾ ಇದ್ದಾರೆ.. 'ಹೇಗಿದ್ದೀರಾ? ಎಲ್ಲಾ ಓಕೆನಾ?'', ''ಯಾಕೆ ಏನಾಯ್ತು?'', ''ಹೆಲ್ತ್ ಏನಾದ್ರೂ ಪ್ರಾಬ್ಲಮ್ ಆಯ್ತಾ?'' ಅಂತೆಲ್ಲಾ. ಥ್ಯಾಂಕ್ಯೂ ಸೋ ಮಚ್ ನಿಮ್ಮೆಲ್ಲರ ಕನ್ಸರ್ನ್‌ಗೆ. ನಾನು ಹುಷಾರಾಗೇ ಇದ್ದೀನಿ. ಚೆನ್ನಾಗೇ ಇದ್ದೀನಿ. ವೆಕೇಶನ್ ಮೋಡ್‌ನಲ್ಲಿದ್ದೀನಿ. ಇದು ಪ್ಲಾನ್ಡ್ ವೆಕೇಶನ್. ನಾನು & ನನ್ನ ಫ್ರೆಂಡ್ಸ್ ತುಂಬಾನೇ ಖುಷಿಯಾಗಿದ್ದೀವಿ''

''ನಾನು ಯಾಕೆ ಇದನ್ನ ಹೇಳ್ತಾ ಇದ್ದೀನಿ ಅಂತಂದ್ರೆ ಒಬ್ಬೊಬ್ಬರು ಒಂದೊಂದು ಕಲ್ಪನೆ ಮಾಡಿಕೊಳ್ಳೋದು ಬೇಡ ಅಂತ. ಚಾನೆಲ್ ನನ್ನನ್ನ ಸದಾ ಗೌರವಿಸಿದೆ. ಪ್ರೊಡಕ್ಷನ್ ಹೌಸ್‌ನವರು ಯಾಕೆ ಈ ನಿರ್ಧಾರ ತೆಗೆದುಕೊಂಡರು ಅಂತ ನನಗೆ ಗೊತ್ತಿಲ್ಲ. ಡೇಟ್ ಕೇಳಲಿಲ್ಲ. ಶೂಟಿಂಗ್‌ಗೆ ಬಾ ಅಂತಾನೂ ಹೇಳಲಿಲ್ಲ. ಇದರ ಹಿಂದಿನ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ಈಗ ರೀಪ್ಲೇಸ್ ಅಂತೂ ಮಾಡಿದ್ದಾರೆ. ಇನ್ನೊಂದು ಪ್ರಾಜೆಕ್ಟ್ ಮೂಲಕ ನಾನು ವಾಪಸ್ ಬರುತ್ತೇನೆ, ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ'' ಎಂದಿದ್ದಾರೆ.

ಮುಂದುವರೆದು ''ಭಾರ್ಗವಿ ಎಲ್‌ಎಲ್‌ಬಿ'' ಸೀರಿಯಲ್‌ ಶುರುವಾಗಿ ಒಂದು ವರ್ಷ 8 ತಿಂಗಳು ಆಗಿರಬಹುದು. ಇವತ್ತಿನವರೆಗೂ ಪ್ರತಿದಿನ ನಾನು ನಿರ್ಮಲಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದೀನೆ. ಪಾತ್ರ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ. ಹೊಸದಾಗಿ ನನ್ನ ಪಾತ್ರವನ್ನ ಯಾರು ಮಾಡ್ತಿದ್ದಾರೋ.. ಅವರಿಗೂ ಆಲ್‌ ದಿ ಬೆಸ್ಟ್. ಅವರೂ ಮಿಂಚಲಿ. ನನಗೆ ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ'' ಎಂದು ಕೂಡ ಸುಜಾತಾ ತಮ್ಮ ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.

English summary
Is there a rift in the Bhargavi LLB team? Bigg Boss fame Sujatha Akshaya breaks her silence on her abrupt replacement from the hit Kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X