13 ಪ್ರಶ್ನೆಯಲ್ಲಿ ಒಂದೂ ತಪ್ಪು ಉತ್ತರ ಕೊಟ್ಟಿಲ್ಲ ಈ ಸ್ಪರ್ಧಿ.! ಯಾವುದು ಪ್ರಶ್ನೆಗಳು.?
ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯಲ್ಲಿ ಸುಜಾತ ಎಂಬ ಸ್ಪರ್ಧಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ಕೇಳಲಾದ ಬಹುತೇಕ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿ ಸದ್ಯಕ್ಕೆ 25 ಲಕ್ಷ ಹಣ ಗೆದ್ದಿದ್ದಾರೆ.
ಇನ್ನು ಎರಡು ಪ್ರಶ್ನೆಗಳು ಬಾಕಿಯಿದ್ದು, ಇಂದಿನ ಸಂಚಿಕೆಯಲ್ಲಿ ಆಟ ಮುಂದುವರೆಯಲಿದೆ. ಇದಕ್ಕೂ ಮುಂಚೆ ಸುಜಾತ ಅವರು ಹದಿಮೂರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇತಿಹಾಸ, ಕ್ರಿಕೆಟ್, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾವುದೇ ಗೊಂದಲವಿಲ್ಲದೇ ಪಕ್ಕಾ ಉತ್ತರ ನೀಡಿ ಪ್ರೇಕ್ಷಕರಿಗೆ ಅಚ್ಚರಿ ಉಂಟು ಮಾಡಿದ್ದಾರೆ.
ಸಾಮಾನ್ಯವಾಗಿ ಈ ಹಿಂದೆ ಬಂದಿದ್ದ ಬಹುತೇಕ ಸ್ಪರ್ಧಿಗಳು ಸುಲಭದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಆಟ ಕ್ವಿಟ್ ಮಾಡಿದ್ದರು. ಆದ್ರೆ, ಸುಜಾತ ಅವರ ಬುದ್ದಿವಂತಿಕೆ ಕೋಟಿ ಗೆಲ್ಲುವ ಭರವಸೆ ಮೂಡಿಸಿದೆ. ಹಾಗಿದ್ರೆ, ಕನ್ನಡದ ಕೋಟ್ಯಧಿಪತಿಯಲ್ಲಿ ಸುಜಾತ ಎದುರಿಸಿದ ಪ್ರಶ್ನೆಗಳು ಯಾವುದು.? ಎಂದು ತಿಳಿಯಲು ಮುಂದೆ ಓದಿ.....

8ನೇ ಪ್ರಶ್ನೆಯಿಂದ ಆಟ ಶುರು
ಮಂಗಳವಾರದ ಎಪಿಸೋಡ್ ನಲ್ಲಿ 7 ಪ್ರಶ್ನೆಗಳಿಗೆ ಉತ್ತರ ನೀಡಿದ್ದ ಸುಜಾತ ಅವರ ಆಟ ಬುಧವಾರ 8ನೇ ಪ್ರಶ್ನೆಯಿಂದ ಆರಂಭವಾಯಿತು.
ಪ್ರಶ್ನೆ: ನೇತಾಜಿ ಸುಭಾಷ್ ಚಂದ್ರ ಭೋಸ್ ಪ್ರಾರಂಭಿಸಿದ ರಾಜಕೀಯ ಪಕ್ಷ ಯಾವುದು.?
A ಸ್ವರಾಜ್ ಪಾರ್ಟಿ
B ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್
C ಅನುಶೀಲನ್ದ ಸಮಿತಿ
D ಗದಗ್ ಪಾರ್ಟಿ
ಸರಿಯಾದ ಉತ್ತರ: B ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್

9ನೇ ಪ್ರಶ್ನೆ ಇದು
2017 ಐಸಿಸಿ ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಭಾರತದ ಮಹಿಳೆಯರ ತಂಡಕ್ಕೆ ನಾಯಕಿ ಆಗಿದ್ದವರು ಯಾರು.?
A ಸ್ಮೃತಿ ಮಂದಣ್ಣ
B ಜೂಲನ್ ಗೋಸ್ವಾಮಿ
C ಮಿತಾಲಿ ರಾಜ್
D ವೇದಾ ಕೃಷ್ಣಮೂರ್ತಿ
ಸರಿಯಾದ ಉತ್ತರ: ಮಿತಾಲಿ ರಾಜ್

3 ಲಕ್ಷದ 20 ಸಾವಿರದ ಪ್ರಶ್ನೆ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕರ್ನಾಟಕದ ಯಾವ ನಗರದಲ್ಲಿದೆ.?
A ಧಾರವಾಡ
B ಗದಗ
C ವಿಜಯಪುರ
D ಶಿವಮೊಗ್ಗ
ಸರಿಯಾದ ಉತ್ತರ: ವಿಜಯಪುರ

11ನೇ ಪ್ರಶ್ನೆ ಇದಾಗಿತ್ತು
ಮಹಾಭಾರತದ ಪ್ರಕಾರ ದ್ರೌಪದಿಯ ವಸ್ತ್ರಾಪಹರಣವನ್ನು ವಿರೋಧಿಸಿದ ಏಕೈಕ ವ್ಯಕ್ತಿ ಯಾರು.?
A ಕರ್ಣ
B ವಿಕರ್ಣ
C ವಿದುರ
D ಧೃತರಾಷ್ಟ್ರ
ಸರಿಯಾದ ಉತ್ತರ: B ವಿಕರ್ಣ

ಇಲ್ಲಿದೆ 12ನೇ ಪ್ರಶ್ನೆ
ಇವರಲ್ಲಿ ಯಾರು ಬರ್ಮಾದ ಮಂಡಾಲೆ ಸೆರೆಮನೆಯಲ್ಲಿದ್ದಾಗ ಗೀತಾ ರಹಸ್ಯ ಎನ್ನುವ ಪುಸ್ತಕ ಬರೆದರು.?
A ಲಾಲಾ ಲಜಪತ್ ರಾಯ್
B ಬಿಪಿನ್ ಚಂದ್ರಪಾಲ್
C ಬಾಲ ಗಂಗಾಧರ ತಿಲಕ್
D ಅರಬಿಂದೋ
ಸರಿಯಾದ ಉತ್ತರ: C ಬಾಲ ಗಂಗಾಧರ ತಿಲಕ್

'ಲೈಫ್ ಲೈನ್ ಬಳಸಿದ' ಪ್ರಶ್ನೆ
ಭಾರತದ ಕಾಡುಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ಏಕೈಕ ವಾನರ ಪ್ರಭೇದ 'ಹುಲಕ್ ಗಿಬ್ಬನ್' ಅನ್ನು ಯಾವ ಪ್ರದೇಶದಲ್ಲಿ ಕಾಣಬಹುದು.?
A ಕರ್ನಾಟಕದ ಮಲೆನಾಡು
B ಅರಾವಳಿ ಪರ್ವತಗಳು
C ಪೂರ್ವ ಘಟ್ಟಗಳು
D ಈಶಾನ್ಯ ಭಾರತದ ಅರಣ್ಯಗಳು
ಸರಿಯಾದ ಉತ್ತರ : D ಈಶಾನ್ಯ ಭಾರತದ ಅರಣ್ಯಗಳು (ಆಡಿಯೆನ್ಸ್ ಪೋಲ್)


Click it and Unblock the Notifications











