'ಕನ್ನಡದ ಕೋಟ್ಯಧಿಪತಿ'ಯಲ್ಲಿ ಇತಿಹಾಸ ಸೃಷ್ಟಿಸಿದ ಸುಜಾತ
Recommended Video

ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯಲ್ಲಿ ಯಾರು ಮೊದಲು ಕೋಟ್ಯಧಿಪತಿ ಆಗ್ತಾರೆ ಎಂಬ ಕುತೂಹಲ ಮೂಡಿಸಿದೆ. ಹೀಗಿರುವಾಗಲೇ ಸುಜಾತ ಎಂಬುವವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ಕೋಟಿ ರೂಪಾಯಿಯ ಪ್ರಶ್ನೆಯನ್ನ ಎದುರಿಸಿದ್ದಾರೆ ಎಂಬ ಪ್ರೋಮೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದೇ ಕೂತುಹಲದಿಂದ ನಿನ್ನೆಯ ಎಪಿಸೋಡ್ ಆರಂಭವಾಯಿತು.
ನಿರೀಕ್ಷೆಯಂತೆ ಸುಜಾತ ಅವರು ಸಖತ್ ಆಗಿ ಆಟವಾಡಿದರು. ಯಾವುದೇ ಗೊಂದಲವಿಲ್ಲದೇ, ಲೈಫ್ ಲೈನ್ ಬಳಸದೇ ಎರಡು ಹಂತಗಳನ್ನ ದಾಟಿದರು. ಆಮೇಲೆ ಆಗಿದ್ದೆಲ್ಲಾ ಇತಿಹಾಸ. ಸ್ವತಃ ನಿರೂಪಕ ರಮೇಶ್ ಅರವಿಂದ್ ಅವರೇ ಸುಜಾತ ಅವರ ಆಟ ನೋಡಿ ದಂಗಾದರು. ಅಷ್ಟಕ್ಕೂ, ಸುಜಾತ ಗೆದ್ದ ಹಣವೆಷ್ಟು.? ಮುಂದೆ ಓದಿ.....

25 ಲಕ್ಷ ಪಡೆದ ಮೊದಲ ಸ್ಪರ್ಧಿ
ಈ ಹಿಂದೆ ಮಂಜುಳಾ ಎಂಬುವವರು 25 ಲಕ್ಷ ರೂಪಾಯಿ ಪ್ರಶ್ನೆ ನೋಡಿ ಆಟವನ್ನ ಕ್ವಿಟ್ ಮಾಡಿದ್ದರು. ಆದ್ರೆ, ಸುಜಾತ ಅವರು 25 ಲಕ್ಷದ ಪ್ರಶ್ನೆಗೆ ಉತ್ತರ ಕೊಟ್ಟು ಯಶಸ್ವಿಯಾಗಿದ್ದಾರೆ. ಇದು ಮೂರನೇ ಆವೃತ್ತಿಯ ಇತಿಹಾಸವಾಗಿದೆ. ಯಾಕಂದ್ರೆ, ಮೊದಲ ಸ್ಪರ್ಧಿ 25 ಲಕ್ಷ ಗೆದ್ದಿದ್ದಾರೆ. ವಿಶೇಷ ಸೂಚನೆ: ಇವರು ಆಟ ಮುಗಿದಿಲ್ಲ, ಇಂದು ಮುಂದುವರೆಯಲಿದೆ.

25 ಲಕ್ಷದ ಪ್ರಶ್ನೆ ಯಾವುದಾಗಿತ್ತು.?
ಭಾರತದ ಕಾಡುಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ಏಕೈಕ ವಾನರ ಪ್ರಭೇದ 'ಹುಲಕ್ ಗಿಬ್ಬನ್' ಅನ್ನು ಯಾವ ಪ್ರದೇಶದಲ್ಲಿ ಕಾಣಬಹುದು.?
A ಕರ್ನಾಟಕದ ಮಲೆನಾಡು
B ಅರಾವಳಿ ಪರ್ವತಗಳು
C ಪೂರ್ವ ಘಟ್ಟಗಳು
D ಈಶಾನ್ಯ ಭಾರತದ ಅರಣ್ಯಗಳು

ಎರಡು ಲೈಫ್ ಲೈನ್ ಬಳಸಿದ ಸುಜಾತ
ಈ ಹಿಂದಿನ ಎಲ್ಲ ಪ್ರಶ್ನೆಗಳಿಗೂ ಒಂದೇ ಸಲ ಖಡಕ್ ಆಗಿ ಉತ್ತರ ಕೊಟ್ಟ ಸುಜಾತ ಅವರು ಈ ಪ್ರಶ್ನೆಗ ಉತ್ತರ ಗೊತ್ತಿಲ್ಲವೆಂದು ನೇರವಾಗಿ ಹೇಳಿದರು. ಆದ್ರೆ, ಮೂರು ಲೈಫ್ ಲೈನ್ ಇದ್ದ ಕಾರಣ ಮೊದಲು ಆಡಿಯೆನ್ಸ್ ಪೋಲ್ ಬಳಸಿದರು. ಆಡಿಯೆನ್ಸ ಪ್ರಕಾರ ಶೇಕಡಾ 33 ರಷ್ಟು ಜನ A ಹಾಗೂ ಶೇಕಡಾ 67 ಜನ B ಉತ್ತರ ನೀಡಿದರು. ಅದ್ಯಾಕೋ ಸಮಾಧಾನವಾಗದ ಸುಜಾತ ಅವರು ಮತ್ತೊಂದು ಲೈಫ್ ಲೈನ್ ಬಳಸಿಕೊಂಡು 'ಫೊನ್ ಎ ಫ್ರೆಂಡ್' ಮಾಡಿದರು. ಆದ್ರೆ, ಅವರ ಸ್ನೇಹಿತ ಉತ್ತರ ಕೊಟ್ಟಿಲ್ಲ. ಕೊನೆಯದಾಗಿ ಆಡಿಯೆನ್ಸ್ ಪೋಲ್ ಪ್ರಕಾರವೇ ಹೋಗಲು ನಿರ್ಧರಿಸಿದರು.

ಸರಿಯಾದ ಉತ್ತರ ಯಾವುದು.?
ಬಹುಶಃ ಈ ಪ್ರಶ್ನೆಗೆ ಬಹುತೇಕ ವೀಕ್ಷಕರಿಗೂ ಉತ್ತರ ಗೊತ್ತಿರಲಿಲ್ಲ. ಹೀಗಾಗಿ, ದೊಡ್ಡ ಮಟ್ಟದ ಕುತೂಹಲವಿತ್ತು. ಕೊನೆಗೂ ರಮೇಶ್ ಅರವಿಂದ್ ಅವರು ಉತ್ತರ ನೀಡಿದರು. ಆಡಿಯೆನ್ಸ್ ಹೇಳಿದ್ದ ಉತ್ತರ ಸರಿಯಾಗಿತ್ತು.
ಸರಿಯಾದ ಉತ್ತರ : D ಈಶಾನ್ಯ ಭಾರತದ ಅರಣ್ಯಗಳು

50 ಲಕ್ಷ ಪ್ರಶ್ನೆ ಯಾವುದು.?
ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿಯಲ್ಲಿ 25 ಲಕ್ಷ ಗೆದ್ದ ಮೊದಲ ಸ್ಪರ್ಧಿ ಸುಜಾತ ಅವರ ಆಟ ಇನ್ನು ಮುಗಿದಿಲ್ಲ. ಇವತ್ತಿಗೆ ಆಟ ಕಾಯ್ದುಕೊಂಡಿದ್ದಾರೆ. ಇಂದು 50 ಲಕ್ಷದ ಪ್ರಶ್ನೆಯನ್ನ ಎದುರಿಸಲಿದ್ದಾರೆ.?

1 ಕೋಟಿ ಗೆಲ್ತಾರಾ.?
ಸುಜಾತ ಅವರ ಆಟ ನೋಡಿದ್ರೆ ಬಹುಶಃ ಇವರು ಒಂದು ಕೋಟಿಯ ಪ್ರಶ್ನೆಯನ್ನ ಎದುರಿಸುವುದು ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ 50 ಲಕ್ಷದ ಪ್ರಶ್ನೆಗೆ ಸರಿ ಉತ್ತರ ಕೊಟ್ಟಿದ್ದೇ ಆದ್ರೆ ಒಂದು ಕೋಟಿ ಸುತ್ತಿಗೆ ಹೋಗೋದು ಪಕ್ಕಾ. ಏನಾಗಲಿದೆ ಎಂಬುದು ಇಂದಿನ ಎಪಿಸೋಡ್ ನಲ್ಲಿ ಕಾದುನೋಡಬೇಕಿದೆ.

ಒಂದು ಲೈಫ್ ಲೈನ್ ಬಾಕಿ ಇದೆ
ಐದು ಪ್ರಶ್ನೆಗಳಿಗೆ ಮೊದಲ ಜಗಲಿಕಟ್ಟೆ ಹಾಗೂ ಹತ್ತು ಪ್ರಶ್ನೆಗಳಿಗೆ ಎರಡನೇ ಜಗಲಿಕಟ್ಟೆ ಅಂದ್ರೆ ಸೇಫ್ ಝೂನ್ ಇದೆ. ಈ ಎರಡು ಹಂತಗಳನ್ನ ಯಾವುದೇ ಲೈಫ್ ಲೈನ್ ಸಹಾಯವಿಲ್ಲದೇ ಸ್ಪಷ್ಟವಾಗಿ, ನೇರವಾಗಿ ಉತ್ತರ ಕೊಟ್ಟಿದ್ದರು ಸುಜಾತ. ಇನ್ನು ಒಂದು ಲೈಫ್ ಲೈನ್ ಸುಜಾತ ಅವರ ಬಳಿ ಬಾಕಿ ಇದೆ.


Click it and Unblock the Notifications











