ಕಾವೇರಿ - ಅಗಸ್ತ್ಯನ ಬಾಳಲ್ಲಿ ಬಿರುಗಾಳಿಯಾಗುತ್ತಾಳಾ ವೃಂದಾ..?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿ ನಡುವೆ ಈಗ ಹೊಸ ಟ್ವಿಸ್ಟ್ ಎದುರಾಗಿದೆ.
ಇಷ್ಟವಿಲ್ಲದಿದ್ದರೂ ಕಾವೇರಿಯನ್ನು ಅಜ್ಜಿಗೋಸ್ಕರ ಅಗಸ್ತ್ಯ ಮದುವೆಯಾಗಿದ್ದಾನೆ. ಕಾವೇರಿ, ಅಗಸ್ತ್ಯನ ಶಾಲೆಯಲ್ಲೇ ಕೆಲಸ ಮಾಡುತ್ತಿದ್ದರೂ ಕೂಡ, ಮದುವೆಯಾದ ಮೇಲೂ ಒಬ್ಬಳೇ ಶಾಲೆಗೆ ಹೋಗಿ ಬರುತ್ತಾಳೆ.
ಅಗಸ್ತ್ಯನ ಮೇಲೆ ಡಿಪೆಂಡ್ ಆಗಲು ಬಯಸದ ಕಾವೇರಿ, ಪತಿ ತನ್ನನ್ನು ಒಪ್ಪಿಕೊಂಡಿಲ್ಲವಾದರೂ, ತಮ್ಮಿಬ್ಬರ ಸಂಬಂಧಕ್ಕೆ ಬೆಲೆ ಕೊಡುತ್ತಾಳೆ. ಆದರೆ, ಇವರಿಬ್ಬರ ಬಾಳಲ್ಲಿ ಈಗ ಬಿರುಗಾಳಿ ಬೀಸುತ್ತಾ ಎಂಬ ಕುತೂಹಲ ಮೂಡಿದೆ.

ಹೊಸ ಪಾತ್ರದ ಎಂಟ್ರಿ
'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಅಗಸ್ತ್ಯ ಹಾಗೂ ಕಾವೇರಿ ನಡುವೆ ವೃಂದಾ ಎಂಟ್ರಿಯಾಗಿದ್ದಾಳೆ. ಪ್ರೊಮೋದಲ್ಲಿ ಅಗಸ್ತ್ಯನ ಬಳಿಗೆ ಫಾರಿನ್‌ನಿಂದ ಬರುವ ವೃಂದಾ ಕಾವೇರಿ ಎದುರುಗಡೆಯೇ ಅಗಸ್ತ್ಯನನ್ನು ಅಪ್ಪಿಕೊಳ್ಳುತ್ತಾಳೆ. ಆದರೆ ಈ ವೃಂದಾ ಯಾರು, ಅಗಸ್ತ್ಯನಿಗೆ ಇವಳು ಏನಾಗಬೇಕು ಎಂಬುದು ಇನ್ನೂ ಗೊತ್ತಿಲ್ಲ. ವೃಂದಾಳಿಂದ ಅಗಸ್ತ್ಯ ಮತ್ತು ಕಾವೇರಿ ನಡುವಿನ ಅಂತರಾ ಇನ್ನಷ್ಟು ಹೆಚ್ಚಾಗುತ್ತಾ ಅಥವಾ ಇಬ್ಬರೂ ಒಂದಾಗಲು ವೃಂದಾಳೇ ಕಾರಣವಾಗುತ್ತಾಳಾ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದ್ದರೆ, ವೃಂದಾ ವಿಲನ್ ಎಂಬುದಂತೂ ಪಕ್ಕಾ ಆಗಿದೆ.
ವೃಂದಾ ಪಾತ್ರದಲ್ಲಿ ನಟಿ ಸುಕೃತಾ ನಾಗ್
ಧಾರಾವಾಹಿಗೆ ವೃಂದಾ ಪಾತ್ರದ ಮೂಲಕ ಎಂಟ್ರಿ ಕೊಟ್ಟಿರುವುದು ಎಲ್ಲರ ಮೆಚ್ಚಿನ ನಟಿ ಸುಕೃತಾ ನಾಗ್. ಈ ಗೊಂಬೆಯನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಲರ್ಸ್ ಕನ್ನಡದ 'ಲಕ್ಷಣ' ಧಾರವಾಹಿಯಲ್ಲಿ ವಿಲನ್ ರೋಲ್ ಮಾಡುವ ಮೂಲಕ ಕಿರುತೆರೆ ವೀಕ್ಷಕರ ಮನೆಗೆದ್ದಿದ್ದರು. ಇದೀಗ ಸ್ಟಾರ್ ಸುವರ್ಣ ವಾಹಿನಿಗೆ ಎಂಟ್ರಿಕೊಟ್ಟಿದ್ದಾರೆ. ನಟಿ ಸುಕೃತಾಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಂಜಲಿ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮನ ಗೆದ್ದಿದ್ದರು. ಅದಾದ ನಂತರ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಈಕೆ ಬಳಿಕ 'ಲಕ್ಷಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ನಟಿ ಸುಕೃತಾ ನಾಗ್ ಒಂದು ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದು, ತಮ್ಮ ದೈನಂದಿನ ಜೀವನ, ಶಾಪಿಂಗ್ ಇತ್ಯಾದಿ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಆಗಾಗ ಹಾಕುತ್ತಿದ್ದಾರೆ. ಈ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಹೊಸ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಸುಕೃತಾ ನಾಗ್ ಸೀರಿಯಲ್ ಜರ್ನಿ
ಮೆಗಾ ಧಾರಾವಾಹಿ 'ಕಾದಂಬರಿ'ಯಲ್ಲಿ ಸುಕೃತಾ ನಾಗ್ ಬಾಲ ನಟಿಯಾಗಿ ನಟಿಸಿದ್ದರು. ಬಾಲನಟಿಯಾಗಿ ನಟಿಸುವ ಮೂಲಕ ಕಿರುತೆರೆಯತ್ತ ಮುಖ ಮಾಡಿದ ಈಕೆ, ಮುಂದೆ 'ಶಿವಲೀಲಾಮೃತ', 'ಪುರುಷೋತ್ತಮ', 'ಸರಸ್ವತಿ', 'ಮಹಾಭಾರತ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ಬರೋಬ್ಬರಿ 25 ಟಿವಿ ಶೋಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ಇನ್ನು ಸುಕೃತಾ ನಾಗ್ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಕಳೆದ ವರ್ಷ ಸುಕೃತಾ ನಾಗ್ ನಟನೆಯ 'ಪಾರ್ಟ್ನರ್' ಎಂಬ ಸಿನಿಮಾ ರಿಲೀಸ್ ಆಗಿತ್ತು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸುಕೃತಾ ನಾಗ್ ಅವರು ಭಾಗವಹಿಸಿದ್ದರು.
ವೃಂದಾ ಜೊತೆ ಆಶಿಕಾ ಕೈ ಜೋಡಿಸುತ್ತಾಳಾ..?
ಇನ್ನು ಸುಕೃತಾ ನಾಗ್ ಜೊತೆಗೆ ಲಕ್ಷಣ ಧಾರಾವಾಹಿಯಲ್ಲಿ ಖಳನಟಿ ಪಾತ್ರವನ್ನು ನಿಭಾಯಿಸಿದ್ದ ನಟಿ ಶ್ರುತಿ ರಮೇಶ್ ಕೂಡ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಶಿಕ್ಷಕಿ ಆಶಿಕಾ ಪಾತ್ರದಲ್ಲಿ ಸಂಪೂರ್ಣ ನೆಗೆಟಿವ್ ಶೇಡ್ ಹೊಂದಿದ್ದು, ಶ್ರುತಿ ರಮೇಶ್ ಎರಡನೇ ಬಾರಿ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ. ವೃಂದಾ ಹಾಗೂ ಆಶಿಕಾ ಇಬ್ಬರೂ ಸೇರಿಕೊಂಡು ಕಾವೇರಿ ವಿರುದ್ಧ ಯಾವ ರೀತಿಯಲ್ಲಿ ಮಸಲತ್ತುಗಳನ್ನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











