twitter
    For Quick Alerts
    ALLOW NOTIFICATIONS  
    For Daily Alerts

    ಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆ

    |

    Recommended Video

    Weekend With Ramesh Season 4: ಸುಮಲತಾ ತವರು ಮನೆ ಬಗ್ಗೆ ನಿಮಗೆಷ್ಟು ಗೊತ್ತು? | FILMIBEAT KANNADA

    ಸುಮಲತಾ ಅಂಬರೀಶ್ ಅವರ ಕೌಟುಂಬಿಕ ಹಿನ್ನೆಲೆ ಹುಡುಕಿದಾಗ ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಖ್ಯಾತಿಯ ಅಂಬರೀಶ್ ಅವರ ಧರ್ಮಪತ್ನಿ ಹಾಗೂ ಇವರಿಬ್ಬರಿಗೆ ಅಭಿಷೇಕ್ ಎಂಬ ಒಬ್ಬ ಮಗನಿದ್ದಾನೆ ಎಂಬ ಪ್ರಾಥಮಿಕ ಮಾಹಿತಿಯಷ್ಟೆ ಸಹಜವಾಗಿ ಸಿಗುತ್ತೆ. ಸುಮಲತಾ ಮೂಲತಃ ಆಂಧ್ರದವರು ಎನ್ನುವುದು ಬಿಟ್ಟರೆ ಅವರ ತಂದೆ-ತಾಯಿ ಹಾಗೂ ಅವರ ಕೌಟುಂಬಿಕ ಹಿನ್ನೆಲೆ ಬಗ್ಗೆ ಸಂಪೂರ್ಣ ಮಾಹಿತಿ ಎಲ್ಲೂ ಸಿಕ್ಕಿರಲಿಲ್ಲ.

    ಇದೀಗ, ಸುಮಲತಾ ಅಂಬರೀಶ್ ಅವರ ತಂದೆ-ತಾಯಿ, ಸಹೋದರ ಮತ್ತು ಸಹೋದರಿಯರ ಪರಿಚಯವಾಗಿದೆ. ಅವರ ಹುಟ್ಟಿದ್ದು, ಬೆಳೆದ ವಿಷಯಗಳ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿದೆ.

    ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

    ಕುತೂಹಲಕಾರಿ ವಿಚಾರ ಅಂದ್ರೆ ಸುಮಲತಾ ಅವರ ತಂದೆ ಸಿನಿ ಇಂಡಸ್ಟ್ರಿಯಲ್ಲೇ ಕೆಲಸ ಮಾಡ್ತಿದ್ರು. ಆಗಿನ ಕಾಲಕ್ಕೆ ಅವರು ಕೂಡ ದೊಡ್ಡ ಸ್ಟಾರ್. ತಮಿಳು-ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡ್ತಿದ್ದ ವಿ ಮದನ್ ಮೋಹನ್ ತುಂಬಾ ಬೇಡಿಕೆಯುಳ್ಳ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. ಅಷ್ಟಕ್ಕೂ ಯಾರು ಈ ವಿ ಮದನ್ ನೋಹನ್? ಯಾವ ಕೆಲಸ ಮಾಡ್ತಿದ್ರು? ಸುಮಲತಾ ಕುಟುಂಬ ಹಿನ್ನೆಲೆ ಬಗ್ಗೆ ತಿಳಿಯಲು ಮುಂದೆ ಓದಿ....

    ವಿ ಮದನ್ ಮೋಹನ್-ರೂಪಾ ದಂಪತಿಯ ಮಗಳು

    ವಿ ಮದನ್ ಮೋಹನ್-ರೂಪಾ ದಂಪತಿಯ ಮಗಳು

    ವಿ ಮದನ್ ಮೋಹನ್ ಮತ್ತು ರೂಪಾ ಮೋಹನ್ ದಂಪತಿಯ ಐದು ಮಕ್ಕಳಲ್ಲಿ ನಾಲ್ಕನೇಯವರು ಸುಮಲತಾ ಜನಿಸಿದರು. ಚೆನ್ನೈನಲ್ಲಿ ಹುಟ್ಟಿದ್ದ ಇವರು ಮುಂಬೈನಲ್ಲಿ ನೆಲೆಸಿದ್ದರು. ರೇಣುಕಾ, ರೋಹಿಣಿ ಅಕ್ಕಂದಿರು. ಅಣ್ಣ ರಾಜೇಂದ್ರ ಪ್ರಸಾದ್. ತಂಗಿ ಕೃಷ್ಣಪ್ರಿಯ.

    ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತ ಮಂಡ್ಯ ಸಂಸದೆ ಸುಮಲತಾ ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತ ಮಂಡ್ಯ ಸಂಸದೆ ಸುಮಲತಾ

    ಸ್ಪೆಷಲ್ ಎಫೆಕ್ಟ್ಸ್ ಪರಿಣಿತರು

    ಸ್ಪೆಷಲ್ ಎಫೆಕ್ಟ್ಸ್ ಪರಿಣಿತರು

    ಇಂದಿನ ವಿಎಫ್ ಎಕ್ಸ್, ಸಿ.ಜಿ ಕೆಲಸಗಳನ್ನ ಆಗ ಸ್ಪೆಷಲ್ ಎಫೆಕ್ಟ್ ಎನ್ನುತ್ತಿದ್ದರು. ವಿ ಮದನ್ ಮೋಹನ್ ಅವರು ಯುಕೆ ದೇಶದಲ್ಲಿ ತರಬೇತಿ ಪಡೆದು ಬಂದಿದ್ದ ಭಾರತದ ಏಕೈಕ ವ್ಯಕ್ತಿಯಾಗಿದ್ದರು. ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡ್ತಿದ್ದರು. ಹಿಂದಿ, ತಮಿಳು ಅನೇಕ ಚಿತ್ರಗಳಲ್ಲಿ ಟೈಟಲ್ ಹಾಗೂ ಸ್ಪೆಷಲ್ ಎಫೆಕ್ಟ್ ಮಾಡಿದ್ದಾರೆ.

    ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರು

    ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರು

    ಸುಮಲತಾ ಅವರಿಗೆ ಏಳು ವರ್ಷ ಇದ್ದಾಗ ಅವರ ತಂದೆ ತೀರಿಕೊಂಡರು. ಮಕ್ಕಳನ್ನ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮದನ್ ಅವರು, ಕುಟುಂಬಕ್ಕೆ ಮತ್ತು ಮಕ್ಕಳಿಗೆ ಹೆಚ್ಚು ಸಮಯ ಕೊಡ್ತಿದ್ರು. ಎಷ್ಟೇ ಕೆಲಸ ಕೊಡ್ತಿದ್ರು ನಮ್ಮ ಜೊತೆ ಸಮಯ ಕಳೆಯುತ್ತಿದ್ದರು. ಸಂಗೀತ ಅಂದ್ರೆ ತುಂಬಾ ಇಷ್ಟ. ಫೋಟೋಗ್ರಫಿ ಹೆಚ್ಚು ಆಸಕ್ತಿ ಹೊಂದಿದ್ದರು. ಸಮಯ ಸಿಕ್ಕಾಗೆಲ್ಲ ನಮ್ಮ ಫೋಟೋ ತೆಗೆಯುತ್ತಿದ್ದರು.

    ಸುಮಲತಾ ಗೆಲುವಿನ ಬಗ್ಗೆ ರಚಿತಾ ರಾಮ್ ಮಾತುಸುಮಲತಾ ಗೆಲುವಿನ ಬಗ್ಗೆ ರಚಿತಾ ರಾಮ್ ಮಾತು

    ಆರ್.ಕೆ ಸ್ಟುಡಿಯೋ ಪಕ್ಕದಲ್ಲಿ ಇದ್ದಿದ್ದು

    ಆರ್.ಕೆ ಸ್ಟುಡಿಯೋ ಪಕ್ಕದಲ್ಲಿ ಇದ್ದಿದ್ದು

    ಬಾಂಬೆಯಲ್ಲಿ ನೆಲೆಸಿದ್ದಾಗ ಪ್ರಸಾದ್ ಲ್ಯಾಬ್ ನಲ್ಲಿ ಮದನ್ ಮೋಹನ್ ಕೆಲಸ ಮಾಡ್ತಿದ್ರು. ಆರ್.ಕೆ ಸ್ಟುಡಿಯೋ ಪಕ್ಕದಲ್ಲೇ ಕಾಲೋನಿ ಇದ್ದ ಕಾರಣ ಬಾಲಿವುಡ್ ನಟರಾದ ರಿಷಿ ಕಪೂರ್, ಅನೀಲ್ ಕಪೂರ್ ಪಕ್ಕದಲ್ಲಿ ಕ್ರಿಕೆಟ್ ಆಡ್ತಿದ್ರು. ಸುಮಲತಾ ಅವರ ಮನೆಗೂ ಬಾಲಿವುಡ್ ನ ಕೆಲವು ಸಂಗೀತ ನಿರ್ದೇಶಕರು, ಇಂಡಸ್ಟ್ರಿಯವರು ಹೋಗ್ತಿದ್ರಂತೆ.

    ಬಾಂಬೆ ಟು ಗುಂಟೂರು

    ಬಾಂಬೆ ಟು ಗುಂಟೂರು

    ತಂದೆ ನಿಧನರಾದಾಗ ತಾಯಿ ಅವರ ಊರು ಆಂಧ್ರದ ಗುಂಟೂರಿಗೆ ಹೋದರು. ನಮ್ಮ ತಾಯಿ ನಮಗೆ ಸ್ಫೂರ್ತಿ. ತುಂಬಾ ಶಕ್ತಿಯುತ ಮಹಿಳೆ. ತಂದೆಯನ್ನ ಕಳೆದುಕೊಂಡ ನೋವಿನಲ್ಲಿದ್ದರು, ಐದು ಜನ ಮಕ್ಕಳನ್ನ ಸಾಕಿ ಬೆಳೆಸಿದರು.

    English summary
    Kannada actress and Mandya mp Sumalatha ambarish Born in Chennai, she was raised in Mumbai and Andhra Pradesh and remains based in southern India. father V. Madan Mohan and mother V. Roopa Mohan. read more...
    Monday, June 10, 2019, 14:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X