twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ ಚಿಕಿತ್ಸೆಗಾಗಿ ಸಿಂಗಾಪೂರ್ ಗೆ ಹೋಗಿದ್ದು ಅತ್ಯಂತ ಕಷ್ಟದ ಸ್ಥಿತಿ: ಸುಮಲತಾ

    |

    Recommended Video

    Weekend With Ramesh Season 4: ಒಂದು ಕಡೆ ಅಭಿಮಾನಿಗಳು, ಇನ್ನೊಂದು ಕಡೆ ಮಾಧ್ಯಮ | FILMIBEAT KANNADA

    ಅದು 2014....ಎಲ್ಲವೂ ಚೆನ್ನಾಗಿದ್ದ ಸಮಯ. ವಸತಿ ಸಚಿವರಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇದ್ದಕ್ಕಿದ್ದಂತೆ ಅಂಬಿ ಆರೋಗ್ಯ ಏರುಪೇರಾಯಿತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿದರು. ಅಂಬಿಗೆ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಿದರು.

    ಆದರೆ ದಿನಗಳ ಕಳೆಯಿತಾದರೂ ಅಂಬರೀಶ್ ಆರೋಗ್ಯ ಚೇತರಿಕೆಯಾಗಿಲ್ಲ. ಅಭಿಮಾನಿಗಳು ಆಸ್ಪತ್ರೆ ಬಳಿಯೇ ಕಾದು ಕುಂತರು. ರಾಜಕಾರಣಿಗಳು ಆಸ್ಪತ್ರೆಗೆ ಬಂದು-ಬಂದು ಹೋಗ್ತಿದ್ದರು. ಅಭಿಮಾನಿಗಳಲ್ಲಿ ಭಾರಿ ಆತಂಕ ಕಾಡಿತ್ತು. ಏನಾಗ್ತಿದೆ ಎಂಬುದೇ ಗೊತ್ತಾಗದ ಪರಿಸ್ಥಿತಿ.

    'ಸುಮಲತಾ ಅವರನ್ನೆ ಮದುವೆ ಆಗ್ತೀನಿ' ಎಂದು ಹೇಳಿದ್ರಂತೆ ಪುನೀತ್ ರಾಜ್ ಕುಮಾರ್ 'ಸುಮಲತಾ ಅವರನ್ನೆ ಮದುವೆ ಆಗ್ತೀನಿ' ಎಂದು ಹೇಳಿದ್ರಂತೆ ಪುನೀತ್ ರಾಜ್ ಕುಮಾರ್

    ಇಂತಹ ಸಂದರ್ಭದಲ್ಲಿ ಅಂಬರೀಶ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರ್ ಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಸುದ್ದಿ ಹೊರಬಿತ್ತು. ಇದು ಅಂಬರೀಶ್ ಅಭಿಮಾನಿಗಳ ಆತಂಕವನ್ನ ಮತ್ತಷ್ಟು ಹೆಚ್ಚಿಸಿತ್ತು. ಆದರೆ ಈ ಎಲ್ಲ ಪರಿಸ್ಥಿತಿಯನ್ನ ತಾಳ್ಮೆಯಿಂದ ನಿಭಾಯಿಸಿ, ಅಂಬರೀಶ್ ಅವರನ್ನ ಸಿಂಗಾಪೂರ್ ಗೆ ಕರೆದುಕೊಂಡು ಹೋಗಿ ಆರೋಗ್ಯವಾಗಿ ವಾಪಸ್ ಕರೆದುಕೊಂಡು ಬಂದಿದ್ದರು ಸುಮಲತಾ ಅಂಬರೀಶ್. ಈ ಘಟನೆ ಬಗ್ಗೆ ಸಿಂಗಾಪೂರ್ ಗೆ ಹೋದ ಆ ಜರ್ನಿಯ ಬಗ್ಗೆ ಅಂಬಿ ಪತ್ನಿ ಹೇಳಿಕೊಂಡಿದ್ದಾರೆ. ಮುಂದೆ ಓದಿ.....

    ನನ್ನ ಜೀವನದ ಅತಿ ದೊಡ್ಡ ಕಷ್ಟ

    ನನ್ನ ಜೀವನದ ಅತಿ ದೊಡ್ಡ ಕಷ್ಟ

    ''ನನ್ನ ಜೀವನದಲ್ಲಿ ನಾನು ಎದುರಿಸಿದ ಅತಿ ದೊಡ್ಡ ಸಂಕಷ್ಟದ ದಿನ ಅದು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡು ಪಟ್ಟಿದ್ದ ಕಷ್ಟದ ಬಳಿಕ ಆ ಪರಿಸ್ಥಿತಿ ಮತ್ತೆ ಕಾಡಿತ್ತು. ಭಯ, ಆತಂಕ, ಒತ್ತಡ ದೊಡ್ಡ ಮಟ್ಟದಲ್ಲಿತ್ತು. ಒಂದು ಕಡೆ ಮಾಧ್ಯಮ, ಅಭಿಮಾನಿಗಳು, ಆತ್ಮೀಯರು ಎಲ್ಲರೂ ಆಸ್ಪತ್ರೆ ಬಳಿ ಕಾಯ್ತಿದ್ದರು. ಏನೂ ಮಾಡಬೇಕು ಎಂಬುದೇ ಗೊತ್ತಾಗದ ಸ್ಥಿತಿ ಅದು''

    ಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆ

    ಇಲ್ಲಿದ್ರೆ ಒತ್ತಡ ಹೆಚ್ಚಾಗುತ್ತೆ ಎಂಬ ನಿರ್ಧಾರ

    ಇಲ್ಲಿದ್ರೆ ಒತ್ತಡ ಹೆಚ್ಚಾಗುತ್ತೆ ಎಂಬ ನಿರ್ಧಾರ

    ''ಅಂತಹ ಪರಿಸ್ಥಿತಿಯನ್ನ ಇಲ್ಲಿ ನಿಭಾಯಿಸುವುದು ಕಷ್ಟವಾಯಿತು. ಇಲ್ಲಿ ಇದ್ರೆ ವೈದ್ಯರಿಗೆ, ಉಳಿದವರಿಗೆ ಒತ್ತಡ ಹೆಚ್ಚಾಗುತ್ತೆ ಎಂಬ ಆತಂಕ ಕಾಡಿತು. ಇಲ್ಲಿಂದ ಸ್ವಲ್ಪ ದೂರ ಕರೆದುಕೊಂಡು ಹೋದರೆ ಸ್ವಲ್ಪ ನಿರಾಳವಾಗಿ ಚಿಕಿತ್ಸೆ ಕೊಡಿಸಬಹುದು ಎಂಬ ಆಲೋಚನೆಯಿಂದ ಸಿಂಗಾಪೂರ್ ಗೆ ಕರೆದುಕೊಂಡು ಹೋಗಬೇಕಾಯಿತು. ಇದು ನನ್ನ ಜೀವನದ ಅತಿ ಕಷ್ಟದ ನಿರ್ಧಾರವಾಗಿತ್ತು''

    ಅಂಬರೀಶ್ ಜೊತೆ ಆಕ್ಟ್ ಮಾಡಬಾರದೆಂದು ನಿರ್ಧರಿಸಿದ್ದರಂತೆ ಸುಮಲತಾಅಂಬರೀಶ್ ಜೊತೆ ಆಕ್ಟ್ ಮಾಡಬಾರದೆಂದು ನಿರ್ಧರಿಸಿದ್ದರಂತೆ ಸುಮಲತಾ

    ವೈದ್ಯರು ಬೇಡ ಅಂದ್ರು

    ವೈದ್ಯರು ಬೇಡ ಅಂದ್ರು

    ''ಅಂಬರೀಶ್ ವೆಂಟಿಲೇಟರ್ ನಲ್ಲಿ ಇದ್ದ ಸ್ಥಿತಿ ಅದು. ಆ ವೇಳೆ ಏರ್ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಬೇಕಿತ್ತು. ಅದು ಭಯದ ಸಂಗತಿ. ಏರ್ ಆಂಬುಲೆನ್ಸ್, ವೆಂಟಿಲೇಟರ್ ಏನಾದರೂ ಆದರೆ ನಾವೇ ಜವಾಬ್ದಾರಿ ಆಗ್ತೀರಾ ಎಂಬ ಕಾರಣಕ್ಕೆ ಕೆಲವು ವೈದ್ಯರು ಕರೆದುಕೊಂಡು ಹೋಗಲು ಒಪ್ಪಲಿಲ್ಲ''

    ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

    ಆ ನಾಲ್ಕು ಗಂಟೆ ಜರ್ನಿ.....

    ಆ ನಾಲ್ಕು ಗಂಟೆ ಜರ್ನಿ.....

    ''ಅಂಬರೀಶ್ ಅವರನ್ನ ಕರೆದುಕೊಂಡು ಹೋದ ಆ ನಾಲ್ಕು ಗಂಟೆ ಜರ್ನಿ ನನ್ನ ಜೀವನದಲ್ಲಿ ಮತ್ತೆ ಯಾವತ್ತು ನಾನು ನೋಡಿಲ್ಲ. ಎಲೆಕ್ಷನ್ ಚುನಾವಣೆ ದಿನ ಕೂಡ ನಾನು ಅಂತಹ ಟೆನ್ಷನ್ ಎದುರಿಸಿಲ್ಲ. ಒಂದು ವೇಳೆ ಏನಾದರೂ ಸಮಸ್ಯೆ ಆದರೆ ಆ ನೋವು, ಆ ಆಪಾದನೆ...ಯಾರೂ ನನ್ನನ್ನು ಕ್ಷಮಿಸುವುದಿಲ್ಲ ಎಂಬ ಭಯ ಇತ್ತು. ಮೂರು ಜನ ವೈದ್ಯರ ಜೊತೆ ಅಂದು ಸಿಂಗಾಪೂರ್ ಗೆ ಪ್ರಯಾಣ ಮಾಡಿದ್ವಿ''

    ಆ ದೇವರ ಆಶೀರ್ವಾದ ಕಾಪಾಡಿತ್ತು

    ಆ ದೇವರ ಆಶೀರ್ವಾದ ಕಾಪಾಡಿತ್ತು

    ''ಇಂತಹ ಸ್ಥಿತಿಯಿಂದ ಅವರನ್ನ ಆ ದೇವರೇ ಕಾಪಾಡಿತ್ತು. ಒಂದು ವಾರದ ಬಳಿಕ ವೆಂಟಿಲೇಟರ್ ತೆಗೆದರು. ಆಮೇಲೆ ಕಣ್ಣು ಬಿಟ್ಟ ಅಂಬರೀಶ್ 'ನಾನು ಎಲ್ಲಿ ಇದ್ದೀನಿ' ಎಂದು ಕೇಳಿದ್ದರು. ನಾವು ಅವರನ್ನ ಕರೆದುಕೊಂಡು ಹೋಗಿರುವ ಬಗ್ಗೆಯೂ ಅವರಿಗೆ ಗೊತ್ತಿರಲಿಲ್ಲ. ಆಮೇಲೆ ಅಲ್ಲಿಂದ ಚೇತರಿಸಿಕೊಂಡು ವಾಪಸ್ ಬಂದ್ವಿ'' ಎಂದು ಆ ದಿನಗಳನ್ನ ನೆನಪಿಸಿಕೊಂಡರು.

    English summary
    Weekend with ramesh 4: Sumalatha reveals about ambarish singapore treatment.
    Wednesday, June 12, 2019, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X