'ವೀಕೆಂಡ್ ವಿತ್ ರಮೇಶ್'ನಲ್ಲಿ ಸುಮಲತಾ ಅಂಬರೀಶ್
Recommended Video
ನಟಿ, ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರ ಸಂಚಿಕೆ ಇದೇ ವಾರ ಪ್ರಸಾರ ಆಗಲಿದೆ.
ಇತ್ತೀಚಿಗಷ್ಟೆ ಮಂಡ್ಯ ಕ್ಷೇತ್ರದಿಂದ ಗೆದ್ದ ಸುಮಲತಾ ತುಂಬ ಖುಷಿಯಲ್ಲಿ ಇದ್ದಾರೆ. ಆ ಖುಷಿಯನ್ನು ಈಗ ಕಾರ್ಯಕ್ರಮ ಡಬಲ್ ಮಾಡಿದೆ. ಇವರ ಸಾಧನೆಯ ಕಥೆ ಕಾರ್ಯಕ್ರಮದಲ್ಲಿ ತೆರೆದುಕೊಳ್ಳಲಿದೆ.
ಕನ್ನಡ, ಮಲೆಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಸುಮಲತಾ ನಟಿಸಿದ್ದಾರೆ. ದಕ್ಷಿಣ ಭಾರತದ ಎವರ್ ಗ್ರೀನ್ ಸ್ಟಾರ್ ನಟಿಯರ ಪೈಕಿ ಇವರು ಕೂಡ ಒಬ್ಬರಾಗಿದ್ದಾರೆ.

ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಚಿರಂಜೀವಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸುಮಲತಾ ತೆರೆ ಹಂಚಿಕೊಂಡಿದ್ದಾರೆ.
ಈ ಹಿಂದೆ ಅಂಬರೀಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಸುಮಲತಾ ಸರದಿ ಬಂದಿದೆ. ಯಾವುದೇ ಸಣ್ಣ ಸುಳಿವು ನೀಡಿದೆ, ನೇರವಾಗಿ ಕಾರ್ಯಕ್ರಮದ ಪ್ರಸಾರದ ವಿಷಯವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
ಅಂದಹಾಗೆ ಈ ವಾರ ಸುಮಲತಾ ಹಾಗೂ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಸಂಚಿಕೆ ಪ್ರಸಾರ ಆಗಲಿದೆ. ಸುಮಲತಾ ಸಂಚಿಕೆ ಬಹುತೇಕ ಶನಿವಾರ ಪ್ರಸಾರ ಆಗಲಿದೆ.


Click it and Unblock the Notifications











