»   » ಸಖತ್ ಸಂಡೇ ವಿತ್ ಸುದೀಪ್ ಜೊತೆ ಸುಮಂತ್, ಕೃತಿ

ಸಖತ್ ಸಂಡೇ ವಿತ್ ಸುದೀಪ್ ಜೊತೆ ಸುಮಂತ್, ಕೃತಿ

Posted By:
Subscribe to Filmibeat Kannada

ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 2' ಅರ್ಧ ಶತಕ ಪೂರೈಸಿ ಮುನ್ನಡೆದಿದೆ. ಈ ವಾರ ಗುರುಪ್ರಸಾದ್ ಮತ್ತು ಸಂತೋಷ್ ನಾಮಿನೇಟ್ ಆಗಿದ್ದಾರೆ. ಆದರೆ ಅವರಿಬ್ಬರಲ್ಲಿ ಯಾರೊಬ್ಬರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ.

ಓಟಿಂಗ್ ಲೈನ್ಸ್ ಇಲ್ಲದ ಕಾರಣ ಅವರು ಮನೆಯಲ್ಲೇ ಉಳಿಯುತ್ತಾರೆ. ಆದರೆ ಈ ವಿಷಯ ಮಾತ್ರ ಅತ್ತ ಗುರುಪ್ರಸಾದ್ ಇತ್ತ ಸಂತೊಷ್ ಅವರಿಬ್ಬರಿಗೂ ಗೊತ್ತಿಲ್ಲ. ಒಟ್ಟಾರೆ ಸುದೀಪ್ ಈ ವಾರ ಅವರಿಬ್ಬರ ಜೊತೆ ಟಪಾಂಗುಚಿ ಆಡುವುದಂತೂ ಇದ್ದೇ ಇದೆ. ಜೊತೆಗೆ ವೀಕ್ಷಕರಿಗೆ ಭರಪೂರ ಮನರಂಜನೆ. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]


ಇನ್ನು ಪ್ರತಿ ವಾರದಂತೆ ಈ ವಾರ ಇಬ್ಬರು ಅತಿಥಿಗಳು ಸಖತ್ ಸಂಡೇ ವಿತ್ ಸುದೀಪ್ (ಆ.24) ಜೊತೆ ಪಾಲ್ಗೊಳ್ಳುತ್ತಿದ್ದಾರೆ. ಅವರು ಬೇರಾರು ಅಲ್ಲ ನಟ ಸುಮಂತ್ ಶೈಲೇಂದ್ರ ಹಾಗೂ ಕ್ಯೂಟ್ ಬೆಡಗಿ ಕೃತಿ ಕರಬಂಧ.

ಇವರಿಬ್ಬರ ಜೋಡಿಯ 'ತಿರುಪತಿ ಎಕ್ಸ್ ಪ್ರೆಸ್' ಚಿತ್ರ ಬಿಡುಗಡೆಗೆ (ಸೆಪ್ಟೆಂಬರ್ 5) ಸಿದ್ಧವಾಗಿದೆ. ಈ ಚಿತ್ರದ ಬಗೆಗಿನ ತಮ್ಮ ಅನುಭವಗಳನ್ನು ಬಿಗ್ ಬಾಸ್ ವೇದಿಕೆ ಮೇಲೆ ಕೃತಿ ಮತ್ತು ಸುಮಂತ್ ಹಂಚಿಕೊಳ್ಳಲಿದ್ದಾರೆ. 'ದಿಲ್ ವಾಲಾ' ಚಿತ್ರದ ಬಳಿಕ ಸುಮಂತ್ ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈಗಾಗಲೆ ಬಿಗ್ ಬಾಸ್ ವೇದಿಕೆ ಮೇಲೆ ಹಲವಾರು ತಾರೆಗಳು ಬಂದು ತಮ್ಮ ಅನುಭಗಳನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಮುಖ್ಯವಾಗಿ ರವಿಚಂದ್ರನ್, ರವಿಶಂಕರ್, ವಿಜಯ್ ಪ್ರಕಾಶ್, ಉಮಾಶ್ರೀ, ತಾರಾ, ಎಸ್ ನಾರಾಯಣ್ ಮುಂತಾದವರು. (ಒನ್ಇಂಡಿಯಾ ಕನ್ನಡ)

English summary
Kannada movie 'Tirupati Express' lead actors Sumanth Shailendra and Kriti Kharabanda will be seen in Bigg Boss Kannada 2 on Sunday (24th August), both are the celebrity guest of this week. sources says, the celebrities share the stage with host Sudeep on 'Sakkat Sunday with Sudeep'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada