'ಓಂ' ಸಿನಿಮಾದಲ್ಲಿ ಪ್ರೇಮಾಗೆ ಕಂಠದಾನ ಮಾಡಿರೋದು ಯಾರು?

Recommended Video

Weekend With Ramesh Season 4: ಓಂ ಸಿನೆಮಾದಲ್ಲಿ ಪ್ರೇಮಾಗೆ ಕಂಠದಾನ ಮಾಡಿದ್ದು ಯಾರು?

ಕೆಲವು ಹೀರೋಯಿನ್ ಗಳು ನಟನೆ ಮಾಡಿರ್ತಾರೆ, ಆದ್ರೆ ಡಬ್ಬಿಂಗ್ ಮಾಡಿರಲ್ಲ. ಇದು ಸಿನಿಮಾ ಜಗತ್ತಿನಲ್ಲಿ ಸಾಮಾನ್ಯ. ಈ ರೀತಿ ನಟಿಯರಿಗೆ ಕಂಠದಾನ ಮಾಡುವ ಕಂಠದಾನ ಕಲಾವಿದರು ತುಂಬಾ ಜನ ಇಂಡಸ್ಟ್ರಿಯಲ್ಲಿದ್ದಾರೆ.

ಪ್ರೇಮಾ ಅವರು ಇತ್ತೀಚಿನ ಸಿನಿಮಾಗಳಲ್ಲಿ ತಮ್ಮ ಚಿತ್ರಗಳಿಗೆ ತಾವೇ ಡಬ್ಬಿಂಗ್ ಮಾಡ್ತಾರೆ. ಆದ್ರೆ, ಓಂ ಸಿನಿಮಾದಲ್ಲಿ ಪ್ರೇಮಾ ಡಬ್ ಮಾಡಿಲ್ಲ. ಹಾಗಿದ್ರೆ, ಪ್ರೇಮಾ ಅವರ ಮಾಧುರಿ ಪಾತ್ರಕ್ಕೆ ಕಂಠದಾನ ಮಾಡಿದ್ದು ಯಾರು ಎಂಬ ಕುತೂಹಲಕ್ಕೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತೆರೆ ಬಿದ್ದಿದೆ.

ಹೌದು, ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ, ಪ್ರೇಮಾ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟ ಓಂ ಸಿನಿಮಾದಲ್ಲಿ ಪ್ರೇಮಾಗೆ ಕಂಠದಾನ ಮಾಡಿದ್ದು ಸುನೇತ್ರಾ ಪಂಡಿತ್.

ಸಿಲ್ಲಿ ಲಲ್ಲಿ ಖ್ಯಾತಿಯ ಸುನೇತ್ರಾ ಪಂಡಿತ್ ನಟನೆ ಜೊತೆ ಕೆಲವರಿಗೆ ಕಂಠದಾನ ಮಾಡಿದ್ದಾರೆ. ಅದರಲ್ಲಿ ಓಂ ಸಿನಿಮಾದ ಮಾಧುರಿ ಪಾತ್ರವೂ ಒಂದು. ಪ್ರೇಮಾ ಅವರ ಅದ್ಭುತ ಅಭಿನಯ ನೋಡಿದ್ದವರಿಗೆ ಅವರಲ್ಲಿದ್ದ ಕಂಠ ಸುನೇತ್ರಾ ಪಂಡಿತ್ ಅವರದ್ದು ಎಂದು ಅನೇಕರಿಗೆ ಗೊತ್ತಿರಲಿಲ್ಲ.

Sunethra pandit gives voice to prema in om movie

ಅಂದ್ಹಾಗೆ, ಸುನೇತ್ರಾ ಪಂಡಿತ್ ಅವರು ರಂಗಭೂಮಿ, ಧಾರಾವಾಹಿ ಹಾಗೂ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಯಾರೇ ನೀನು ಚೆಲುವೆ, ಉಲ್ಟಾ ಪಲ್ಟಾ, ನಿನಗೋಸ್ಕರ ಅಂತಹ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಕೇವಲ ಪ್ರೇಮಾ ಮಾತ್ರವಲ್ಲದೇ ಶಿಲ್ಪಾ, ರಮ್ಯಾ ಕೃಷ್ಣ, ರಂಭಾ, ಚಾರುಲತಾ, ರಮ್ಯಾ ಅಂತಹ ನಟಿಯರಿಗೂ ಸುನೇತ್ರಾ ಪಂಡಿತ್ ಕಂಠದಾನ ನೀಡಿದ್ದಾರೆ.

More from Filmibeat

English summary
Kannada actress prema was participate in weekend with ramesh 4. Sunethra pandit gives voice to prema in om movie. the movie has released in 1995.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X