ಅಪಘಾತದ ಬಳಿಕ ಮೊದಲ ರೀಲ್ಸ್ ಮಾಡಿದ ಸುನೇತ್ರ

By ಪೂರ್ವ

ಕನ್ನಡದ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಸುನೇತ್ರ ಅವರಿಗೆ ಕೆಲವು ದಿನಗಳ ಹಿಂದೆ ಅಪಘಾತವಾಗಿತ್ತು. ಹಲವು ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಸುನೇತ್ರರವರು ಇದೀಗ ವಿಶ್ರಾಂತಿಯಲ್ಲಿದ್ದಾರೆ.

ಸುನೇತ್ರ ಅವರು ಮೇ 7 ರಂದು ಶೂಟಿಂಗ್ ಮುಗಿಸಿ ಮನೆಗೆ ತನ್ನ ದ್ವಿ ಚಕ್ರದಲ್ಲಿ ತೆರಳುವ ವೇಳೆ ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆಕ್ಸಿಡೆಂಟ್ ಆಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುನೇತ್ರಾ ಪಂಡಿತ್ ಅವರಿಗೆ ತೀವ್ರ ರಕ್ತಸ್ರಾವ ಆಗಿತ್ತು. ಸ್ಥಳೀಯರ ಸಹಾಯದಿಂದ ಕೂಡಲೇ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತವಾದ ಬಳಿಕ ಇದೀಗ ಚೇತರಿಸಿಕೊಂಡಿರುವ ಸುನೇತ್ರ ಮತ್ತೆ ನಟನೆಗೆ ಮರಳುವ ಸುಳಿವು ತೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದ ಸುನೇತ್ರ, ಅಪಘಾತವಾದ ಬಳಿಕ ಮೊದಲ ಬಾರಿಗೆ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Sunetra Pandith Instagram Video Viral

ರೀಲ್ಸ್ ಮಾಡಿರುವ ಸುನೇತ್ರ, ''ಎದುರುಗಡೆ ಚೆನ್ನಾಗಿದ್ದರೇ ಸಾಲದು ಮನಸ್ಸಿನ ಒಳಗಡೆ ಕೂಡ ಚೆನ್ನಾಗಿರಬೇಕು ಮನಸ್ಸು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಮನಸ್ಸಿನ ಹೊರಗಡೆ ಹೇಗಿದ್ದರು ಚಿಂತೆ ಇಲ್ಲ. ಆದರೆ ಮನಸ್ಸಿನ ಸೌಂದರ್ಯಕ್ಕೆ ಇದೀಗ ಎಲ್ಲರೂ ಮಾರು ಹೋಗುತ್ತಾರೆ. ಮನಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಪ್ರಾಮಾಣಿಕೆಯಿಂದ ಇದ್ದರೆ ಬದುಕು ಸುಂದರವಾಗಿರುತ್ತದೆ'' ಎಂಬುವುದನ್ನು ರೀಲ್ಸ್ ಮೂಲಕ ಹೇಳಿದ್ದಾರೆ. ಈ ರೀಲ್ಸ್‌ ವಿಡಿಯೋನಲ್ಲಿ ಸುನೇತ್ರ ಅವರು ಚೇತರಿಸಿಕೊಂಡಂತೆ ಕಾಣುತ್ತಿದ್ದಾರೆ. ಇನ್ನೂ ಸುನೇತ್ರ ಅವರ ರೀಲ್ಸ್ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸುನೇತ್ರ ಪಂಡಿತ್ ಅವರು ಚೇತರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.

ಕನ್ನಡ ಕಿರುತೆರೆಯಲ್ಲಿ ಸುನೇತ್ರ ಪಂಡಿತ್ ಉತ್ತಮ ಹೆಸರುಗಳಿಸಿದ್ದಾರೆ. ಸಿಲ್ಲಿ-ಲಲ್ಲಿ ಧಾರವಾಹಿಯ ವಿಶಾಲು ಪಾತ್ರವನ್ನು ಮರೆವಂತೆಯೇ ಇಲ್ಲ. ಇಂಥಹುದೇ ಪಾತ್ರವೆಂದು ಯಾವುದಕ್ಕೂ ಅಂಟಿಕೊಳ್ಳದೆ ಎಲ್ಲ ರೀತಿಯ ಪಾತ್ರಗಲಲ್ಲೂ ಮಿಂಚಿದ್ದಾರೆ ಸುನೇತ್ರಾ. ಹಲವಾರು ವರ್ಷದಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಸುನೇತ್ರಾ ಪಂಡಿತ್ ಹಲವಾರು ನಟಿಯರಿಗೆ ಕಂಠದಾನವನ್ನು ಕೂಡ ನೀಡಿದ್ದಾರೆ.

More from Filmibeat

English summary
Sunetra Pandith social media video viral. Sunetra Pandith met with an accident recently. Now she posted a video after she recovers from injury.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X