For Quick Alerts
  ALLOW NOTIFICATIONS  
  For Daily Alerts

  ತಕಧಿಮಿತ ಶೋ ಗೆದ್ದು ಬೀಗಿದ ಸುನೀಲ್-ದಕ್ಷಿತಾ

  |

  ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ತಕಧಿಮಿತ ಡಾನ್ಸ್ ಕಾರ್ಯಕ್ರಮ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ತರಹೇವಾರಿ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು ಡಾನ್ಸರ್ಸ್. ಆದ್ರೆ ಈ ಅದ್ಭುತ ನೃತ್ಯಗಾರರು ಇನ್ನು ಮುಂದೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವುದಿಲ್ಲ.

  ಹೌದು, ತಕಧಿಮಿತ ರಿಯಾಲಿಟಿ ಶೋಗೆ ಈಗಾಗಲೆ ಅದ್ಧೂರಿ ತೆರೆ ಬಿದ್ದಿದೆ. ನಿನ್ನೆ ತಕಧಿಮಿತ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ನಡೆದಿದೆ. ಫಿನಾಲೆಗೆ 5 ಜೋಡಿಗಳು ಎಂಟ್ರಿ ಕೊಟ್ಟಿದ್ದರು. ಡಾನ್ಸರ್ ಜೊತೆಗೆ ಅತಿಥಿಗಳಾಗಿ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ, ಬಿಗ್ ಬಾಸ್ ಖ್ಯಾತಿಯ ಶಶಿ ಡಾನ್ಸ್ ವಿಶೇಷವಾಗಿತ್ತು.

  'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.! 'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.!

  ಫಿನಾಲೆಯಲ್ಲಿ ಎರಡು ಸುತ್ತಿನ ಡಾನ್ಸ್ ಪರ್ಫಾಮೆನ್ಸ್ ಇತ್ತು. ಕೆಲವರ ಡಾನ್ಸ್ ಮೆಚ್ಚುಗೆಗೆ ಪಾತ್ರವಾದ್ರೆ ಇನ್ನು ಕೆಲವರು ನಿರಾಸೆ ಮೂಡಿಸಿದ್ರು. ಆದ್ರೂ ಅದ್ಭುವಾಗಿ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೊನೆಯದಾಗಿ ದಕ್ಷಿತಾ ಮತ್ತು ಸುನಾಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮುಂದೆ ಓದಿ..

  ಟ್ರೋಫಿ ಗೆದ್ದ ಸುನೀಲ್-ದಕ್ಷಿತಾ

  ಟ್ರೋಫಿ ಗೆದ್ದ ಸುನೀಲ್-ದಕ್ಷಿತಾ

  ತಕಧಿಮಿತ ಮೊದಲ ಸೀಸನ್ ನ ವಿನ್ನರ್ ಆಗಿ ಎಲ್ಲರ ನೆಚ್ಚಿನ ಜೋಡಿಯಾದಿದ್ದ ಸುನೀಲ್ ಮತ್ತು ದಕ್ಷಿತಾ ಹೊರಹೊಮ್ಮಿದ್ದಾರೆ. ತಕಧಿಮಿತ ಸೀಸನ್ ಮೊದಲ ಶೋ ಟ್ರೋಫಿಯನ್ನು ಎತ್ತಿ ಹಿಡಿದು ಗೆದ್ದು ಬೀಗಿದ್ದಾರೆ. ಸುನೀಲ್ ಮತ್ತು ದಕ್ಷಿತಾ ಅವರ ಫಿನಾಲೆ ಡಾನ್ಸ್ ಅದ್ಭುತವಾಗಿತ್ತು ಅಷ್ಟೆಯಲ್ಲ ಮೈ ಜುಮ್ ಎನಿಸುವ ಪರ್ಫಾಮೆನ್ಸ್ ಗೆ ಪ್ರೇಕ್ಷಕರು ಮತ್ತು ಜಡ್ಜಸ್ ಕೂಡ ಫಿದಾ ಆಗಿದ್ದಾರೆ. ಶೋ ಪ್ರಾರಂಭದಿಂದನು ಪ್ರೇಕ್ಷಕರ ನೆಚ್ಚಿನ ಜೋಡಿಯಾಗಿದ್ದ ಸುನೀಲ್ ಮತ್ತು ದಕ್ಷಿತಾ ಕೊನೆಗೂ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

  'ಕನ್ನಡದ ಕೋಟ್ಯಧಿಪತಿ' : ಕಷ್ಟದಲ್ಲಿ ಇದ್ದಾಗ ಫ್ರೆಂಡ್ಸೆ ತಾನೇ ಬರೋದು 'ಕನ್ನಡದ ಕೋಟ್ಯಧಿಪತಿ' : ಕಷ್ಟದಲ್ಲಿ ಇದ್ದಾಗ ಫ್ರೆಂಡ್ಸೆ ತಾನೇ ಬರೋದು

  ಫೈನಲ್ ನಲ್ಲಿ ನಾಲ್ಕು ಜೋಡಿ

  ಫೈನಲ್ ನಲ್ಲಿ ನಾಲ್ಕು ಜೋಡಿ

  ಫೈನಲ್ ಗೆ ನಾಲ್ಕು ಜೋಡಿಗಳು ಎಂಟ್ರಿ ಕೊಟ್ಟಿದ್ದರು. ಬಾಸ್ಕರ್ ಮತ್ತು ನೇಹಾ ಜೋಡಿ, ಮಂಜು ಮತ್ತು ಕಾರುಣ್ಯ ರಾಮ್, ನಮ್ರತಾ ಮತ್ತು ಕಿಶನ್ ಹಾಗೂ ದಕ್ಷಿತಾ ಮತ್ತು ಸುನೀಲ್ ಜೋಡಿ. ನಾಲ್ಕು ಜೋಡಿಯ ಪರ್ಫಾಮೆನ್ಸ್ ಕೂಡ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿದೆ.

  ರನ್ನರ್ ಅಪ್ ಕಾರುಣ್ಯ-ಮಂಜು

  ರನ್ನರ್ ಅಪ್ ಕಾರುಣ್ಯ-ಮಂಜು

  ತಕಧಿಮಿತ ಶೋನ ರನ್ನರ್ ಅಪ್ ಆಗಿ ಕಾರುಣ್ಯ ಮತ್ತು ಮಂಜು ಹೊರಹೊಮ್ಮಿದ್ದಾರೆ. ಫಿನಾಲೆಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ್ದರು ಕಾರುಣ್ಯ ಮಂಜು ಜೋಡಿ. ಪ್ರಾರಂಭದಿಂದನು ಅದ್ಭತ ಡಾನ್ಸ್ ಮೂಲಕ ಎಲ್ಲರ ಮನಗೆದಿದ್ದ ಈ ಜೋಡಿ ಎರಡನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

  ರವಿಚಂದ್ರನ್, ಸುಮನ್ ಮತ್ತು ಅನುರಾಧಾ

  ರವಿಚಂದ್ರನ್, ಸುಮನ್ ಮತ್ತು ಅನುರಾಧಾ

  ತಕಧಿಮಿತ ಶೋ ನಾ ಮತ್ತೊಂದು ಆಕಾರ್ಷಣೆ ಅಂದ್ರೆ ಮೂವರು ಜಡ್ಜಸ್. ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಸುಮನ್ ರಂಗನಾಥ್ ಮತ್ತು ಅನುರಾಧಾ ವಿಕ್ರಾಂತ್ ಈ ಕಾರ್ಯಕ್ರಮ ಜಡ್ಜಸ್ ಆಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಪ್ರತೀಬಾರಿಯೂ ಇವರು ಹೇಳುವ ಕಮೆಂಟ್ಸ್, ಕಾಂಪ್ಲಿಮೆಟ್ಸ್ ನೀಡಿ ಡಾನ್ಸರ್ ಅನ್ನು ಮತ್ತಷ್ಟು ಹುರಿದುಂಬಿಸುತ್ತಿದ್ದರು.

  ಈ ವೀಕೆಂಡ್ ನಿಮ್ಮ ಜೊತೆ ಕಳೆಯುತ್ತಾರೆ 'ಅಮರ್'ಈ ವೀಕೆಂಡ್ ನಿಮ್ಮ ಜೊತೆ ಕಳೆಯುತ್ತಾರೆ 'ಅಮರ್'

  ಅಕುಲ್ ನಿರೂಪಣೆ

  ಅಕುಲ್ ನಿರೂಪಣೆ

  ಈ ಶೋ ನ ಮುಖ್ಯ ಆಕರ್ಷಣೆ ನಿರೂಪಕ ಅಕುಲ್ ಬಾಲಾಜಿ. ಎಂದಿನಂತೆ ಅಕುಲ್ ಶೈಲಿಯ ಎನರ್ಜಿಟಿಕ್ ಮಾತು, ತಮಾಷೆ ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದರು. ತಾವು ಡಾನ್ಸ್ ಮಾಡುತ್ತಾ ಎಲ್ಲರ ಕಾಲನ್ನು ಎಳೆಯುತ್ತಿದ್ದ ಅಕುಲ್ ಗೆ ಪ್ರೇಕ್ಷಕರು ಮತ್ತೊಮ್ಮೆ ಮನ ಸೋತಿದ್ದಾರೆ.

  English summary
  Sunil and Dikshita win the dance contest of Thakadimitha reality show. First season of dance reality show Takadimita dropped last week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X