»   » ಸರಿಗಮಪ ಸೀಸನ್-13 ಪ್ರಶಸ್ತಿ ಮುಡಿಗೇರಿಸಿಕೊಂಡ ಸುನಿಲ್

ಸರಿಗಮಪ ಸೀಸನ್-13 ಪ್ರಶಸ್ತಿ ಮುಡಿಗೇರಿಸಿಕೊಂಡ ಸುನಿಲ್

Posted By:
Subscribe to Filmibeat Kannada

ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ' ಸೀಸನ್ 13 ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ಇದೇ ಮೊದಲ ಬಾರಿಗೆ 'ಸರಿಗಮಪ' ಫಿನಾಲೆ ಕಾರ್ಯಕ್ರಮವನ್ನ ನೇರ ಪ್ರಸಾರ ಮಾಡಲಾಗಿತ್ತು. ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಜೊತೆ ಮಹಾಗುರುಗಳಾಗಿ ನಾದಬ್ರಹ್ಮ ಹಂಸಲೇಖ ಅವರು ತೀರ್ಪುಗಾರರಾಗಿದ್ದರು.

ಸರಿಗಮಪ-13 ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಶ್ರೀಹರ್ಷ, ಮೆಹಬೂಬ್ ಸಾಬ್, ಅರವಿಂದ್, ಧನುಷ್, ದೀಕ್ಷಾ, ಸುನಿಲ್ ಪ್ರವೇಶ ಪಡೆದಿದ್ದರು. ಈ 6 ಜನರಲ್ಲಿ ಅತ್ಯುತ್ತಮ ಗಾಯನದ ಮೂಲಕ ಸಂಗೀತ ಪ್ರಿಯರ ಮನಸೆಳೆದ ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್, ಜನರಗಳ ಆಯ್ಕೆಯಂತೆ ಸರಿಗಮಪ ಸೀಸನ್-13ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮುಂದೆ ಓದಿ

ಸರಿಗಮಪ ಸೀಸನ್-13ರ ವಿನ್ನರ್

ಅಪ್ಪನ ಕನಸನ್ನು ಸಾಕಾರ ಮಾಡಿದ ಸುನಿಲ್ ಸರಿಗಮಪ ಸೀಸನ್-13ರ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರು ಸುನಿಲ್ ಗೆ ಪ್ರಶಸ್ತಿ ಹಾಗೂ ಬಹುಮಾನ ಮೊತ್ತ ನೀಡಿ ಗೌರವಿಸಿದರು.

ಮೊದಲ ಪ್ರಶಸ್ತಿ ಮೊತ್ತವೆಷ್ಟು?

ಸರಿಗಮಪ 13ನೇ ಆವೃತ್ತಿ ಗೆದ್ದ ಸುನಿಲ್ ಗೆ 5 ಲಕ್ಷ ಬಹುಮಾನ ಮೊತ್ತವನ್ನ ನೀಡಲಾಗಿದೆ.

2ನೇ ಸ್ಥಾನ ಪಡೆದ ಮೆಹಬೂಬ್ ಸಾಬ್

ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಶಾಲೆಯ ಮತ್ತೋರ್ವ ಪ್ರತಿಭೆ ಮೆಹಬೂಬ್ ಸಾಬ್ ಅವರು ಸರಿಗಮಪ 13ನೇ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರು. ಇವರಿಗೆ ಮುಗುಳುನಗೆ ಚಿತ್ರತಂಡದಿಂದ 3 ಲಕ್ಷ ಹಾಗೂ ಜನರಿಂದ 1.5 ಲಕ್ಷ ಬಹುಮಾನ ನೀಡಲಾಯಿತು.

ಮೂರನೇ ಸ್ಥಾನದಲ್ಲಿ ಶ್ರೀಹರ್ಷ

ಫಿನಾಲೆಯಲ್ಲಿ ಅದ್ಭುತ ಪರ್ಪಾಮೆನ್ಸ್ ನೀಡಿದ ಶ್ರೀಹರ್ಷ ಮೂರನೇ ಸ್ಥಾನದೊಂದಿಗೆ 1 ಲಕ್ಷ ಬಹುಮಾನವನ್ನ ಪಡೆದುಕೊಂಡರು.

ಫಿನಾಲೆಯಲ್ಲಿದ್ದ ಉಳಿದ ಸ್ಪರ್ಧಿಗಳು

ಇನ್ನು ಅದ್ಧೂರಿಯಾಗಿ ನಡೆದ ಫಿನಾಲೆಯಲ್ಲಿ ಧನು‍ಷ್ ನಾಲ್ಕನೇ ಸ್ಥಾನ ಪಡೆದುಕೊಂಡರೆ, ದೀಕ್ಷಾ ಮತ್ತು ಅರವಿಂದ್ ನಂತರದ ಸ್ಥಾನಗಳನ್ನ ಪಡೆದುಕೊಂಡರು.

English summary
zee kannada's sarigamapa season 13 winner is Sunil, Mehboob sab Gets Seconds Place in the finale

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada