ಧಿಡೀರ್ ಅಂತ 'ಭಾಗ್ಯಲಕ್ಷ್ಮಿ' ಧಾರಾವಾಹಿ ಬಿಟ್ಟ ನಟಿ ಸುನೀತಾ ಶೆಟ್ಟಿ; ಅಮೆರಿಕಗೆ ತೆರಳಿದ್ದೇಕೆ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಬಹುದೊಡ್ಡ ಪ್ರೇಕ್ಷಕ ಬಳಗವನ್ನು ಹೊಂದಿದೆ. ಬಹಳಷ್ಟು ಜನಪ್ರಿಯತೆಯನ್ನು ಪಡೆದಿರುವ ಈ ಧಾರಾವಾಹಿಯಲ್ಲಿ ನಟಿ ಸುನೀತಾ ಶೆಟ್ಟಿ ಪ್ರಮುಖ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹೌದು 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಕಥಾನಾಯಕಿಯಾದ ಭಾಗ್ಯಳ ತಾಯಿ ಪಾತ್ರವನ್ನು ನಟಿ ಸುನೀತಾ ಶೆಟ್ಟಿ ಮಾಡಿಕೊಂಡು ಬಂದಿದ್ದರು. ಸುನಂದಾ ಎಂಬ ಈ ಪಾತ್ರವು ಜನರ ಮನ ಗೆದ್ದಿತ್ತು. ಆದರೆ, ಈಗ ನಟಿ ಸುನೀತಾ ಶೆಟ್ಟಿ ಅವರು ದಿಢೀರ್ ಅಂತ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ಸದಾ ಖಡಕ್ಕಾಗಿ ಮಾತನಾಡುವ ತನ್ನ ಮಗಳಿಗೆ ಎಲ್ಲವೂ ಒಳಿತಾಗಬೇಕೆಂದು ಬಯಸುವ ಹೆಂಗಸಿನ ಪಾತ್ರ ಅದಾಗಿತ್ತು. ಬಹಳಷ್ಟು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಸುನೀತಾ ಶೆಟ್ಟಿ ಅವರು ಈ ಪಾತ್ರಕ್ಕೆ ಬಹಳ ಚೆನ್ನಾಗಿ ಜೀವ ತುಂಬಿದ್ದರು. ಆದರೆ, ಈಗ ಆಕೆ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದಕ್ಕೆ ಅಸಲಿ ಕಾರಣ ನಟಿ ಸುನೀತಾ ಶೆಟ್ಟಿ ಅವರ ಅಮೆರಿಕ ಪ್ರವಾಸ.

Sunita Shetty came out of Bhagyalakshmi serial went to America

ನಟಿ ಸುನೀತಾ ಶೆಟ್ಟಿ ಅವರು ಮೂರು ತಿಂಗಳ ಕಾಲ ಅಮೆರಿಕಗೆ ಹೋಗಲಿದ್ದಾರಂತೆ. ಈ ಕಾರಣಕ್ಕೆ ಧಾರಾವಾಹಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು 'ಭಾಗ್ಯಲಕ್ಷ್ಮಿ' ಧಾರವಾಹಿಯಿಂದಲೇ ಹೊರ ನಡೆದಿದ್ದಾರಂತೆ. ಸುನೀತಾ ಶೆಟ್ಟಿ ಅವರ ಮಗಳು ಅಮೆರಿಕದಲ್ಲೇ ನೆಲೆಸಿದ್ದು, ಮಗಳ ಮನೆಗೆ ಮೂರು ತಿಂಗಳ ಕಾಲ ವಾಸವಿದ್ದು ಬರುವ ಪ್ಲಾನ್ ಹಾಕಿಕೊಂಡಿರುವುದರಿಂದ ನಟಿ ಸುನೀತಾ ಶೆಟ್ಟಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ಅವರಿಗೂ ಸುನೀತಾ ಶೆಟ್ಟಿ ಅವರಿಗೂ ಒಳ್ಳೆಯ ಬಂಧವಿತ್ತು. ಇದೀಗ ಸುನೀತಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆಯಬೇಕಾಗಿ ಬಂದಿದ್ದರಿಂದ ಭಾವುಕರಾಗಿದ್ದಾರಂತೆ.

'ಭಾಗ್ಯಲಕ್ಷ್ಮಿ' ಧಾರಾವಾಹಿ ಸೆಟ್‌ನಲ್ಲಿ ಕೊನೆಯ ದಿನದ ಶೂಟ್ ನಂತರ ತಂಡದವರೊಂದಿಗೆ ಕೇಕ್ ಕತ್ತರಿಸಿ ಬೀಳ್ಕೊಟ್ಟ ನಟಿ ಸುನೀತಾ ಶೆಟ್ಟಿ ಭಾವುಕರಾಗಿದ್ದಾರೆ. ಬಹುದೊಡ್ಡ ತಾರಾಗಣವನ್ನು ಹೊಂದಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಇತರೆ ನಟ ನಟಿಯರು ಕೂಡ ಸುನೀತಾ ಶೆಟ್ಟಿ ಅವರನ್ನು ಕಳಿಸಿಕೊಡುವಾಗ ತುಸು ಭಾವುಕರಾಗಿರುವುದು ಕಂಡುಬಂದಿದೆ.

Sunita Shetty came out of Bhagyalakshmi serial went to America

ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಇರುವ ನಟಿ ಸುನೀತಾ ಶೆಟ್ಟಿ 'ಭಾಗ್ಯಲಕ್ಷ್ಮಿ' ಧಾರಾವಾಹಿಯಿಂದ ಹೊರ ಬರುತ್ತಿರುವುದರ ಬಗ್ಗೆ ಬರೆದುಕೊಂಡಿದ್ದು "ಭಾಗ್ಯಲಕ್ಷ್ಮಿ ಧಾರಾವಾಹಿ ಯಾವತ್ತಿಗೂ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಸಿಹಿಯಾದ ಜೇನು. ತಂಡದ ಎಲ್ಲಾ ಸ್ನೇಹಿತರಿಗೂ ಪ್ರೀತಿಯ ಅಪ್ಪುಗೆ" ಎಂದು ಬರೆದುಕೊಂಡಿದ್ದಾರೆ.

ಇದೀಗ ಪ್ರೇಕ್ಷಕರಲ್ಲಿ ಅಭಿಮಾನಿಗಳಲ್ಲಿ ಈ ವಿಚಾರದ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಮುಂದೆ ಸುನಂದ ಪಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವೋ ಅಥವಾ ಸುನಂದಾಯ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುತ್ತಾರೋ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಹಾಗೂ ಧಾರಾವಾಹಿ ಅಭಿಮಾನಿಗಳಲ್ಲಿ ಮೂಡಿದೆ. ಮೂರು ತಿಂಗಳ ಅಮೆರಿಕ ಪ್ರವಾಸದ ನಂತರ ಮತ್ತೆ ನಟಿ ಸುನೀತಾ ಶೆಟ್ಟಿ ಅವರೇ ಸುನಂದಾ ಪಾತ್ರಕ್ಕೆ ಮರಳಿ ಬರುತ್ತಾರಾ ಎಂಬ ಪ್ರಶ್ನೆಯು ಕೆಲವರಲ್ಲಿ ಮೂಡಿದೆ. ಆದರೆ, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಧಾರಾವಾಹಿ ತಂಡದಿಂದಲೇ ಬರಬೇಕಿದೆ.

More from Filmibeat

English summary
Sunita Shetty came out of Bhagyalakshmi serial went to America:
Read more about: actress anitha banari ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X