ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಜೋಡಿ-2' ರಿಯಾಲಿಟಿ ಶೋ
ಸ್ಟಾರ್ ಸುವರ್ಣ ವಾಹಿನಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ 'ಸೂಪರ್ ಜೋಡಿ' ಕೂಡ ಒಂದು. 'ಸೂಪರ್ ಜೋಡಿ-1' ಕಾರ್ಯಕ್ರಮದಲ್ಲಿ ಕಿರುತೆರೆ-ಬೆಳ್ಳಿತೆರೆಯ 10 ಜೋಡಿಗಳು ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದ್ದರು.
ಈಗ 'ದಿಲ್ ಜೊತೆ ಧಮ್' ಕಾನ್ಸೆಪ್ಟ್ ನಲ್ಲಿ 'ಸೂಪರ್ ಜೋಡಿ-2' ಸದ್ಯದಲ್ಲೇ ಪ್ರಾರಂಭವಾಗಲಿದೆ. ಈಗಾಗಲೇ 'ಸೂಪರ್ ಜೋಡಿ-2' ಪ್ರೋಮೋಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.['ಸೂಪರ್ ಜೋಡಿ' ಗ್ರ್ಯಾಂಡ್ ಫಿನಾಲೆ ಇಂದು! ಮಿಸ್ ಮಾಡ್ಬೇಡಿ]

ಕರ್ನಾಟಕದ ಹತ್ತು ಜನಪ್ರಿಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ ಜೋಡಿಯಾಗಲು ತಯಾರಿ ನಡೆಸುತ್ತಿದ್ದಾರೆ. 'ಸೂಪರ್ ಜೋಡಿ-2' ಟಾಸ್ಕ್ ಗಳು ವೀಕ್ಷಕರ ಊಹೆಗೂ ಮೀರಿ ಥ್ರಿಲ್ ಕೊಡಲಿವೆ.[ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']
ಅನೇಕ ರಿಯಾಲಿಟಿ ಶೋಗಳ ನಿರೂಪಣೆ ಮಾಡಿ ಖ್ಯಾತಿ ಗಳಿಸಿರುವ ಅಕುಲ್ ಬಾಲಾಜಿ, 'ಸೂಪರ್ ಜೋಡಿ-2' ಕಾರ್ಯಕ್ರಮಕ್ಕೂ ಹೋಸ್ಟ್. 'ಸೂಪರ್ ಜೋಡಿ-2' ಕಾರ್ಯಕ್ರಮದ ಪ್ರಸಾರ ದಿನಾಂಕ ಇನ್ನೂ ನಿಗದಿ ಆಗಿಲ್ಲ.
More from Filmibeat
English summary
After the success of 'Super Jodi', Kannada's popular Channel Star Suvarna is launching 'Super Jodi-2' reality show. Akul Balaji is hosting this show, which will be aired shortly.
akul balaji suvarna suvarna channel tv reality show ಅಕುಲ್ ಬಾಲಾಜಿ ಸುವರ್ಣ ಸುವರ್ಣ ವಾಹಿನಿ ಟಿವಿ ರಿಯಾಲಿಟಿ ಶೋ


Click it and Unblock the Notifications











