»   » ಗಣೇಶ್ ಜೊತೆ ನೀವೂ 'ಸೂಪರ್ ಮಿನಿಟ್' ಆಟ ಆಡಬಹುದು!

ಗಣೇಶ್ ಜೊತೆ ನೀವೂ 'ಸೂಪರ್ ಮಿನಿಟ್' ಆಟ ಆಡಬಹುದು!

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ಚಂದ್ರಿಕಾ, ನಟಿ ಅನು ಪ್ರಭಾಕರ್, ಲವ್ಲಿ ಸ್ಟಾರ್ ಪ್ರೇಮ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು 'ಸೂಪರ್ ಮಿನಿಟ್' ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನೆಲ್ಲಾ ನೀವು ಕಲರ್ಸ್ ಕನ್ನಡ ವಾಹಿನಿಯಲ್ಲಿ ನೋಡಿರ್ತೀರಾ.

ಒಂದು ನಿಮಿಷದಲ್ಲಿ ಕಲಾವಿದರು ಆಟವಾಡುತ್ತಿದ್ದಾಗ, 'ನಾವು ಯಾವಾಗ ಹೀಗೆ ಆಡುವುದು' ಅಂತ ನೀವೂ ಅಂದುಕೊಂಡಿರಬಹುದು. ಅಂತಹ ಆಸೆ ನಿಮಗೆ ಇದ್ದರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ.[ಗೋಲ್ಡನ್ ಸ್ಟಾರ್ 'ಸೂಪರ್ ಮಿನಿಟ್' ಸದ್ಯದಲ್ಲೇ ಶುರು!]

Super Minute season 2; This time for Public

ಇದೇ ಶನಿವಾರದಿಂದ (ಫೆಬ್ರವರಿ 13) 'ಸೂಪರ್ ಮಿನಿಟ್ ಸೀಸನ್ 2' ಶುರುವಾಗಲಿದೆ. ಸಾರ್ವಜನಿಕರಿಗೆ ಈ ಬಾರಿ ಮಿನಿಟ್ ಆಟ ಆಡಲು ಕಲರ್ಸ್ ಕನ್ನಡ ವಾಹಿನಿ ಅವಕಾಶ ನೀಡಿರುವುದು ವಿಶೇಷ.

ಕಾಲೇಜು ವಿದ್ಯಾರ್ಥಿಗಳು, ರಾಜಕಾರಣಿಗಳು, ಪತ್ರಕರ್ತರು ಮತ್ತು ಕರ್ನಾಟಕದ ಮೂಲೆ ಮೂಲೆಯಲ್ಲಿ 'ಸೂಪರ್ ಮಿನಿಟ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆಲ್ಲಾ ಈ ಬಾರಿ ಅವಕಾಶ ಇದೆ.

ಕಾರ್ಯಕ್ರಮಕ್ಕಾಗಿ ವಾರಕ್ಕೆ ಎರಡು ದಿನ ಗಣೇಶ್ ಕಾಲ್ ಶೀಟ್ ನೀಡಿದ್ದಾರೆ. ಈಗಾಗಲೇ 'ಸೂಪರ್ ಮಿನಿಟ್ ಸೀಸನ್-2' ಪ್ರೋಮೋ ಜನಪ್ರಿಯವಾಗಿದೆ. ಈ ವಾರಾಂತ್ಯದಿಂದ ಪ್ರತಿ ಶನಿವಾರ ಹಾಗು ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Colors Kannada Channel's popular game show Super Minute is back. Second Season of Super Minute will be hosted by Kannada Actor Ganesh. This time Public can participate in this show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada