»   » 'ಬಿಗ್ ಬಾಸ್' ಸ್ಪರ್ಧಿಗಳ ಎದುರು ಈಟಿವಿ ನ್ಯೂಸ್ ಆಂಕರ್ಸ್ ಚಾಲೆಂಜ್.!

'ಬಿಗ್ ಬಾಸ್' ಸ್ಪರ್ಧಿಗಳ ಎದುರು ಈಟಿವಿ ನ್ಯೂಸ್ ಆಂಕರ್ಸ್ ಚಾಲೆಂಜ್.!

Posted By:
Subscribe to Filmibeat Kannada
'ಟೈಮ್ ಜೊತೆ ಆಟವಾಡುವ ಟೈಮ್' ಇದೇ ಶನಿವಾರದಿಂದ (ಫೆಬ್ರವರಿ 18) ಶುರು ಆಗಲಿದೆ. ಮೊದಲ ಸೀಸನ್ ನಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದಂತೆ, ಎರಡನೇ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದಂತೆ ಈ ಬಾರಿ ನಡೆಯುವುದಿಲ್ಲ.

'ಕಲರ್ಸ್ ಕುಟುಂಬ'ದ 16 ತಂಡಗಳ ನಡುವಿನ ಚಾಂಪಿಯನ್ ಶಿಪ್ ಸೆಣಸಾಟಕ್ಕೆ 'ಸೂಪರ್ ಮಿನಿಟ್-3' ಮೀಸಲು. ಈ ಹದಿನಾರು ತಂಡಗಳ ಪೈಕಿ 'ಬಿಗ್ ಬಾಸ್' ತಂಡ ಕೂಡ ಇರುವುದು ವಿಶೇಷ.

'ಮಿನಿಟ್' ಆಟ ಆಡುತ್ತಾರೆ 'ಬಿಗ್ ಬಾಸ್ ಸ್ಪರ್ಧಿಗಳು

'ಸೂಪರ್ ಮಿನಿಟ್-3' ಕಾರ್ಯಕ್ರಮದ 16 ತಂಡಗಳ ಪೈಕಿ 'ಬಿಗ್ ಬಾಸ್' ತಂಡ ಕೂಡ ಒಂದು.['ಮಿನಿಟ್' ಆಟ ಶುರು ಆಗೋಕೆ ಇನ್ನು ಮೂರೇ ದಿನ ಬಾಕಿ.!]

'ಬಿಗ್ ಬಾಸ್' ತಂಡದಲ್ಲಿ ಯಾರ್ಯಾರು.?

'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್, 'ಕಿರಿಕ್' ಕೀರ್ತಿ, ರೇಖಾ, ಭುವನ್ ಮತ್ತು ಚೈತ್ರ 'ಸೂಪರ್ ಮಿನಿಟ್-3' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.['ಬಿಗ್ ಬಾಸ್-4' ಮುಗಿದ ನಂತರ ಕಲರ್ಸ್ ವಾಹಿನಿಯಲ್ಲಿ 'ಸೂಪರ್ ಮಿನಿಟ್-3']

ಮೊದಲ ಸಂಚಿಕೆ ಚಿತ್ರೀಕರಣ ಮುಗಿದಿದೆ.!

ಇದೇ ಶನಿವಾರದಿಂದ ಪ್ರಾರಂಭವಾಗುವ 'ಸೂಪರ್ ಮಿನಿಟ್-3' ಕಾರ್ಯಕ್ರಮದ ಮೊದಲ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಅದರಲ್ಲಿ 'ಬಿಗ್ ಬಾಸ್' ತಂಡಕ್ಕೆ ಚಾಲೆಂಜ್ ಮಾಡಿದವರು ಈಟಿವಿ ನ್ಯೂಸ್ ತಂಡದ ಆಂಕರ್ ಗಳು.

ಗೆದ್ದವರು ಯಾರು.?

ಮೊದಲ ಸಂಚಿಕೆಯಲ್ಲಿ 'ಬಿಗ್ ಬಾಸ್' ತಂಡ ಗೆಲ್ತೋ, ಇಲ್ಲ ಈಟಿವಿ ತಂಡ ಗೆಲ್ತೋ ಅಂತ ತಿಳಿದುಕೊಳ್ಳಲು ಈ ವಾರಾಂತ್ಯದವರೆಗೂ ನೀವು ಕಾಯಲೇಬೇಕು. ಮೊದಲ ಸಂಚಿಕೆ ಕುರಿತು ಗಣೇಶ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ...

ಉಳಿದ ತಂಡಗಳು ಯಾವುವು.?

'ಬಿಗ್ ಬಾಸ್', 'ಈಟಿವಿ' ಟೀಮ್ ಜೊತೆಗೆ 'ಪುಟ್ಟಗೌರಿ ಮದುವೆ', 'ಮನೆದೇವ್ರು', 'ಕುಲವಧು', 'ಅಗ್ನಿ ಸಾಕ್ಷಿ', 'ಲಕ್ಷ್ಮಿ ಬಾರಮ್ಮ' ತಂಡಗಳು ಸೆಣಸಾಡಲಿವೆ.

ಪ್ರೋಮೋ ನೋಡಿದ್ರಾ.?

'ಸೂಪರ್ ಮಿನಿಟ್-3' ಕಾರ್ಯಕ್ರಮದಲ್ಲಿ ಭಾಗವಹಿಸಿರುವ 'ಬಿಗ್ ಬಾಸ್' ತಂಡದ ಪ್ರೋಮೋ ಇಲ್ಲಿದೆ ನೋಡಿ...ಈ ಲಿಂಕ್ ಕ್ಲಿಕ್ ಮಾಡಿ...

English summary
Its the time for 'Bigg Boss' team v/s 'Etv News Anchors' team in 'Super Minute season 3', which will be aired in Colors Channel on February 18th, Saturday 9 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada