'ಬಿಗ್ ಬಾಸ್-4' ಮುಗಿದ ನಂತರ ಕಲರ್ಸ್ ವಾಹಿನಿಯಲ್ಲಿ 'ಸೂಪರ್ ಮಿನಿಟ್-3'
ಪ್ರತಿ ಸೆಕೆಂಡ್ ಕೂಡ ಮುಖ್ಯ ಎಂಬುದನ್ನು ಮಜವಾದ ಆಟದ ಮೂಲಕ ವೀಕ್ಷಕರಿಗೆ ಮನದಟ್ಟು ಮಾಡಿಕೊಟ್ಟ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಗೇಮ್ ಶೋ 'ಸೂಪರ್ ಮಿನಿಟ್' ಮತ್ತೆ ಶುರುವಾಗಲಿದೆ.
'ಸೂಪರ್ ಮಿನಿಟ್-3' ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಯಲ್ಲಿ ಸದ್ದು ಮಾಡಲಿದ್ದಾರೆ.
ಹೌದು, ಇನ್ನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸೂಪರ್ ಮಿನಿಟ್' ಮೂರನೇ ಸೀಸನ್ ಪ್ರಸಾರವಾಗಲಿದೆ. ಮೂಲಗಳ ಪ್ರಕಾರ, 'ಬಿಗ್ ಬಾಸ್ ಕನ್ನಡ-4' ಮುಗಿದ ಬಳಿಕ 'ಸೂಪರ್ ಮಿನಿಟ್-3' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.['ಸೂಪರ್ ಮಿನಿಟ್' ನಲ್ಲಿ ನೀವೂ ಭಾಗವಹಿಸಬೇಕಾ? ಹೀಗೆ ಮಾಡಿ...]

ಈಗಾಗಲೇ ಕಾರ್ಯಕ್ರಮದ 'ನೀಲಾಂಬರಿ' ರೆಡಿಯಾಗಿದ್ದು, ತೆರೆ ಹಿಂದಿನ ಕೆಲಸಗಳಿಗೆ ಚಾಲನೆ ನೀಡಲಾಗಿದೆ. 'ಚಿನ್ನದ ಹುಡುಗ' ಗಣಿ ಕೂಡ ತಮ್ಮ ಚಿತ್ರಗಳ ಚಿತ್ರೀಕರಣದಿಂದ ಬ್ರೇಕ್ ತಗೊಂಡು ಮಿನಿಟ್ ಆಟ ಆಡಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬರೀ ಸೆಲೆಬ್ರಿಟಿಗಳಿಗಷ್ಟೇ 'ಸೂಪರ್ ಮಿನಿಟ್' ಮೊದಲ ಆವೃತ್ತಿ ಸೀಮಿತವಾಗಿದ್ರೆ, 'ಸೂಪರ್ ಮಿನಿಟ್-2' ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗೆ ಅವಕಾಶ ಲಭಿಸಿತ್ತು. ಇನ್ನೂ 'ಸೂಪರ್ ಮಿನಿಟ್-3' ಕಾರ್ಯಕ್ರಮದ ರೂಪುರೇಷೆಗಳು ಹೇಗಿರುತ್ತೋ, ಕಾದು ನೋಡ್ಬೇಕು...


Click it and Unblock the Notifications











