Super Queen: ರಿಯಾಲಿಟಿ ಶೋಗಾಗಿ ಬದಲಾದ 'ಜೊತೆ ಜೊತೆಯಲಿ' ಧಾರಾವಾಹಿಯ ಪುಷ್ಪಾ !

By ಎಸ್ ಸುಮಂತ್

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಬರುವ ಪುಷ್ಪಾ ಸಿರಿಮನೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪುಷ್ಪಾ ಎಂದಾಕ್ಷಣಾ ಸುಬ್ಬುನೇ ಗಢಗಢ ಅಂತ ನಡುಗ್ತಾರೆ. ಇನ್ನು ಏರಿಯಾ ಹೆಂಗಸರು ಪುಷ್ಪಾ ಬಂದ್ಲು ಕಣೇ ಸುಮ್ಮನೆ ಇರಿ ಅಂತ ಸ್ಟಾಪ್ ಮಾಡ್ತಾರೆ. ಅಷ್ಟು ಗಟ್ಟಿ ಧ್ವನಿ. ಮಗಳೆಂದರೆ ಧಾರಾವಾಹಿಯಲ್ಲಿ ಎಷ್ಟು ಪ್ರಾಣವೋ, ನಿಜ ಜೀವನದಲ್ಲೂ ಅಷ್ಟೇ ಪ್ರೀತಿ.

ಆದರೆ, ಧಾರಾವಾಹಿ, ಸಿನಿಮಾಗಳಲ್ಲಿ ಹೆಚ್ಚು ಗಟ್ಟಿಗಿತ್ತಿಯಾಗಿಯೇ ಕಾಣಿಸಿಕೊಳ್ಳುವ ಅಪೂರ್ವ ರಿಯಲ್ ಲೈಫ್‌ನಲ್ಲಿ ಕಂಪ್ಲೀಟ್ ಎಮೋಷನಲ್ ವುಮೆನ್. ಅದನ್ನು ಈಗಾಗಲೇ ಸಾಕಷ್ಟು ಫ್ಲಾಟ್ ಫಾರ್ಮ್‌ನಲ್ಲಿ ನೋಡಿದ್ದೇವೆ. ಈಗ ಅಪೂರ್ವ ಸುದ್ದಿಯಾಗಿದ್ದೇ ಬೇರೆ ವಿಚಾರಕ್ಕೆ.

Super Queen Reality Show Contestant And Actress Apoorva New Look with Daughter Goes Viral

ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಅಪೂರ್ವ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅಪೂರ್ವ ಸಿಕ್ಕಾಪಟ್ಟೆ ಫೇಮಸ್. ನ್ಯಾಚುರಲ್ ನಟನೆಗೆ ಸೈ ಎಂದವರೆ ಹೆಚ್ಚು. ಪುಷ್ಪಾ ಮಾತು, ಜಗಳ, ನಟನೆ ಎಲ್ಲವೂ ಜನರ ಮನಸ್ಸನ್ನು ಕದ್ದಾಗಿದೆ. ಪುಷ್ಪಾ ಧಾರಾವಾಹಿಯಲ್ಲಿ ಬೆಸ್ಟ್ ಅಮ್ಮ. ಆದರೆ, ಅಪೂರ್ವ ನಿಜ ಜೀವನದಲ್ಲಿ ಬೆಸ್ಟ್ ಅಮ್ಮ. ಈಗ ಹೊಸ ಫೋಟೋಗೆ ಮಗಳ ಜೊತೆ ನಿಂತು ಪೋಸ್ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ಸೀರೆ ಹಾಕಿಕೊಂಡು ಪಕ್ಕಾ ಗೃಹಿಣಿಯಮನತೆ ಕಾಣಿಸಿಕೊಂಡ ಅಪೂರ್ವ ಈಗ ಫುಲ್ ಮಾಡರ್ನ್ ಲುಕ್‌ನಲ್ಲಿ ಮಿಂಚ್ತಾ ಇದ್ದಾರೆ.

ಅಪೂರ್ವಾಗೆ ಮಗಳು ಎಂದರೆ ಬಲು ಇಷ್ಟ. ಅದು ಧಾರಾವಾಹಿಯಲ್ಲಾದರೂ ಸರಿ, ನಿಜ ಜೀವನದಲ್ಲಾದರೂ ಸರಿ. ಅಪೂರ್ವ ಅವರ ರಿಯಲ್ ಮಗಳ ಹೆಸರು ರಾಜ್ವಿ. ಇಬ್ಬರನ್ನು ಸೋಶಿಯಲ್ ಮೀಡಿಯಾದಲ್ಲಿ ಗಮನಸಿಬಹುದು. ರಾಜ್ವಿ ಯಾವಾಗಲೂ ಅಮ್ಮ ಮಾಡುವ ಕೆಲಸಗಳನ್ನೆಲ್ಲಾ ವಿಡಿಯೋ ಮಾಡುತ್ತಾ ಮನರಂಜನೆ ತೆಗೆದುಕೊಳ್ಳುತ್ತಾರೆ. ಇದು ಅಮ್ಮ ಮಗಳ ನಡುವಿನ ಬಾಂಧವ್ಯ ಸಾರುತ್ತದೆ. ಈಗ ಇಬ್ಬರು ಫೋಟೋಗೆ ಪೋಸ್ ನೀಡಿರುವುದು ಮತ್ತಷ್ಟು ಸ್ಪೂರ್ತಿ ನೀಡುವಂತಹ ಫೋಟೋಶೂಟ್ ಆಗಿದೆ.

ಅಮ್ಮ ಮಗಳನ್ನು ಹಾಡಿ ಹೊಗಳಿದ ನೆಟ್ಟಿಗರು

ಅಪೂರ್ವ ಮತ್ತು ರಾಜ್ವಿ ಹೀಗೆ ಫೋಟೋಗೆ ಪೋಸ್ ನೀಡಿರೋದು ಒಂದು ರಿಯಾಲಿಟಿ ಶೋಗಾಗಿ. ಜೀ ಕನ್ನಡದಲ್ಲಿಯೇ ಸೂಪರ್ ಕ್ವೀನ್ ರಿಯಾಲಿಟಿ ಶೋ ನಡೀತಾ ಇದೆ. ಇದರಲ್ಲಿ ಅಪೂರ್ವ ಸ್ಪರ್ಧಿಯಾಗಿದ್ದಾರೆ. ಕಾರ್ಯಕ್ರಮದ ಸೆಮಿ ಫೈನಲ್ ರೌಂಡ್ ಇದ್ದು, ಅದಕ್ಕಾಗಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಇಬ್ಬರು ಕೆಂಪು ಬಣ್ಣದ ಮಾಡರ್ನ್ ಡ್ರೆಸ್ ಧರಿಸಿದ್ದು, ಪುಷ್ಪಾ ಎರಡು ಜಡೆ ಹಾಕಿ, ಮೇಲಕ್ಕೆ ಕಟ್ಟಿದ್ದಾರೆ. ಹೊಸ ಲುಕ್‌ನಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಕ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ.

Super Queen Reality Show Contestant And Actress Apoorva New Look with Daughter Goes Viral

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ನಲ್ಲಿ ಅಮ್ಮ ಮಕ್ಕಳ ಜುಗಲ್ ಬಂದಿ ನೋಡುತ್ತಲೇ ಇರುತ್ತೀವಿ. ಹೆಚ್ಚಾಗಿ ಕಾಣಿಸಿಕೊಳ್ಳುವ ಜೋಡಿಗಳು ಅಮ ಮಗಳಂತೆ ಅನಿಸೋದೆ ಇಲ್ಲ. ಬದಲಾಗಿ ಫ್ರೆಂಡ್ಸ್ ರೀತಿನೋ, ಅಕ್ಕ ತಂಗಿಯ ರೀತಿಯೋ ಕಾಣಿಸುತ್ತಾರೆ. ಈಗ ಅಪೂರ್ವ ಹಾಗೂ ರಾಜ್ವಿಯೂ ಅದೇ ರೀತಿ ಕಾಣಿಸುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರೆಲ್ಲಾ ಅದೇ ಹೊಗಳಿಕೆಗ ಮಾತುಗಳನ್ನು ಹೇಳುತ್ತಿದ್ದಾರೆ.

More from Filmibeat

English summary
Zee Kannada Reality Show Super Queen Reality Show Contestant And Actress Apoorva New Look with Daughter Goes Viral. Here is the details about Apoorva new photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X