For Quick Alerts
  ALLOW NOTIFICATIONS  
  For Daily Alerts

  ರದ್ದಿ ಪೇಪರ್‌ನಲ್ಲೂ ಸೀರೆ ಮಾಡುವ ವಿಧಾನ ನೋಡಿದ್ದೀರಾ? ಶಾಲಿನಿನೊಮ್ಮೆ ನೋಡಿ ಬಿಡಿ!

  By ಎಸ್ ಸುಮಂತ್
  |

  ಇದೇನು ಗುರು ರದ್ದಿ ಪೇಪರ್‌ನಲ್ಲಿ ಬಟ್ಟೆ ರೆಡಿ ಮಾಡೋದಾ..? ಅದರಲ್ಲೂ ಸೀರೆ ನೇಯೋದಾ..? ತಿಂಗಳ ಪೇಪರ್ ನೆಲ್ಲಾ ರದ್ದಿ ಅಂಗಡಿಗೆ ಹಾಕುತ್ತೇವೆ. ಇದೇನಾದ್ರೂ ವರ್ಕೌಟ್ ಆದ್ರೆ ಗುಜರಿಗೆ ಹಾಕುವ ಪೇಪರ್‌ನಲ್ಲಿ ಪ್ರತಿ ತಿಂಗಳಿಗೆ ಮನೆಯವರಿಗೆ ಸೀರೆ ನೇಯ್ದು ಗಿಫ್ಟ್ ಕೊಡಬಹುದು ಎಂಬ ಯೋಚನೆ ನಿಮ್ಮಲ್ಲಿ ಬರ್ತಾ ಇದೆ ಅಲ್ವಾ. ಅದಕ್ಕೆಂದೇ ನಟಿ, ನಿರೂಪಕಿ ಶಾಲಿನಿ ರದ್ದಿ ಪೇಪರ್ ನಲ್ಲಿ ಮಾಡಿದ ಸೀರೆ ಹೇಗೆಲ್ಲಾ ಇರುತ್ತದೆ ಎಂಬುದನ್ನು ತೋರಿಸಿದ್ದಾರೆ. ಇಲ್ಲೆಲ್ಲೂ ಸಿಗದ, ಹುಡುಕಿಕೊಂಡು ಹೋದರು ಕಣ್ಣಿಗೆ ಬೀಳದಾ ಡಿಸೈನರ್ ರದ್ದಿ ಸೀರೆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

  ರದ್ದಿ ಪೇಪರ್‌ನಲ್ಲಿ ಸೀರೆಯನ್ನು ಹೇಗಪ್ಪಾ ಮಾಡ್ತಾರೆ ಎಂಬ ಅನುಮಾನ ಇದ್ದವರು ಶಾಲಿನಿ ತೊಟ್ಟ ಸೀರೆಯನ್ನೊಮ್ಮೆ‌ ನೋಡಿದರೆ ಸೀರೆ ರೆಡಿ ಮಾಡುವ ವಿಧಾನ ತಿಳಿಯುತ್ತೆ. ಜೊತೆಗೆ ಸೀರೆಯ ಲುಕ್ ಮತ್ತಷ್ಟು ಸೊಗಸಾಗಿ ಕಾಣುತ್ತಿದೆ. ಪೇಪರ್‌ನಲ್ಲಿ ಸಿದ್ಧವಾದ ಬ್ಲೌಸ್ ಅಂಡ್ ಸೀರೆಯಲ್ಲಿ ಶಾಲಿನಿ ಮಿಂಚುತ್ತಿದ್ದಾರೆ. ಒಂಥರ ಅಟ್ರ್ಯಾಕ್ಟ್ ಮಾಡುವಂತಿದೆ.

  10 ಸೆಲೆಬ್ರೆಟಿ 'ಇಸ್ಮಾರ್ಟ್ ಜೋಡಿ' ಜೊತೆ ಗಣೇಶ್ ಗೋಲ್ಡನ್ ಶೋ!10 ಸೆಲೆಬ್ರೆಟಿ 'ಇಸ್ಮಾರ್ಟ್ ಜೋಡಿ' ಜೊತೆ ಗಣೇಶ್ ಗೋಲ್ಡನ್ ಶೋ!

  ರದ್ದಿ ಪೇಪರ್ ಸೀರೆ ಹೇಗಿದೆ?

  ಶಾಲಿನಿ ಅಂಡ್ ಗ್ಯಾಂಗ್‌ಗೆ ಕಾಮಿಡಿಯಲ್ಲಿ ಫೈವ್ ಸ್ಟಾರ್ ಕೊಡಲೇಬೇಕು. ಅಷ್ಟು ಅದ್ಭುತವಾಗಿ ನಕ್ಕು ನಲಿಸುತ್ತಾರೆ. ಅದರಲ್ಲೂ ಈ ಟೀಂನಿಂದ ಕಾಸ್ಟ್ಯೂಮ್ ಪರಿಚಯ ಮಾಡಿಕೊಡುವ ರೀತಿಯೇ ವಿಭಿನ್ನದಲ್ಲಿ ವಿಭಿನ್ನ. ಶಾಲಿನಿಯ ಎಲ್ಲಾ ಕಾಸ್ಟ್ಯೂಮ್ ಡಿಸೈನ್ ಮಾಡೋದು ಮೌನಿಶಾ. ಸದ್ಯ ಪೇಪರ್ ಡಿಸೈನ್‌ನಲ್ಲಿ ಅದ್ಭುತವಾಗಿ ಕಾಣುವಂತಹ ಸೀರೆ ರೆಡಿ ಮಾಡಿದ್ದಾನೆ. ಅದನ್ನೇ ಹಾಕಿಕೊಂಡಿರುವ ಶಾಲಿನಿ, ಮೌನಿಶನ ಜೊತೆಗೆ ಕೂತು ಪೇಪರ್‌ನಲ್ಲಿ ಬಂದಿರುವ ನ್ಯೂಸ್ ಓದುತ್ಗಾ ಇರುತ್ತಾರೆ. ಪಾಪ ಅವರು ಹಾಕಿರುವ ಕಾಸ್ಟ್ಯೂಮ್‌ನಿಂದಾಗಿ ಅಲ್ಲಿಗೆ ಯಾರು ಬರುತ್ತಾರೆ ಎಂಬುದೇ ತಿಳಿದಿಲ್ಲ. ಮಾತಾಡುತ್ತಿರುವಾಗಲೇ ರದ್ದಿ ಪೇಪರ್ ಹುಡುಕುತ್ತಿದ್ದವ ಅಲ್ಲಿಗೆ ಬಂದೇ ಬಿಟ್ಟ. ಕೈಯಲ್ಲಿದ್ದ ಪೇಪರ್‌ನೂ ಕಿತ್ತುಕೊಂಡು, ಶಾಲಿನಿಗೆ ಶಾಕ್ ಮಾಡಿಬಿಡೋದಾ? ಯಾರೋ, ಯಾಕೋ ಬಂದಿದ್ದು ಅಂತ ಶಾಲಿನಿಯ ಏರು ಧ್ವನಿಗೆ, ಗಡಗಡ ಅಂತ ನಡುಗಿದವ ನಾನು ರದ್ದಿ ಪೇಪರ್‌ನವ ನಿಮ್ಮ ಸೀರೆ, ಬ್ಲೌಸ್ ತೆಗೆದುಕೊಂಡು ಹೋಗೋದಕ್ಕೆ ಎಂದಾಗ ಶಾಲಿನಿ ಶಾಕ್ ಗಿರೀಶ್ ರಾಕ್..

  ಶಾಲಿನಿ ಕೋಪಕ್ಕೆ ಮೌನೇಶ ಎಸ್ಕೇಪ್

  ಪಾಪ ರಸ್ತೆಯಲ್ಲೆಲ್ಲೋ ಕೋಳಿ ಸತ್ತು ಬಿದ್ದಿತ್ತಂತೆ. ಆ ಸತ್ತ ಕೋಳಿಯಲ್ಲಿ ಪುಕ್ಕವೇ ಇರಲಿಲ್ಲವಂತೆ. ಶಾಲಿನಿ ಜೊತೆಯಲ್ಲಿ ಇರುವ ಗಿರೀಶ ಮತ್ತೆ ಹೇರ್ ಸ್ಟೈಲ್ ಆರ್ಟಿಸ್ಟ್. ಆ ಸತ್ತ ಕೋಳಿ ನೋಡಿ ಅಯ್ಯೋ ಪಾಪ ಅಂದುಕೊಂಡು ಸೆಟ್‌ಗೆ ಬಂದರೆ, ಅಲ್ಲಿ ಕೋಳಿ ಪುಕ್ಕ ನೋಡಿ ಶಾಕ್ ಆಗೋದಾ..? ಅದು ಶಾಲಿನಿ ಹೆಗಲ ಮೇಲೆ. ಹೌದು, ಈ ವಿಚಾರವನ್ನು ಗಿರೀಶ್ ಶಾಲಿನಿಗೆ ಹೇಳಿದಾಗ, ಶಾಲಿನಿ ಅಯ್ಯೋ ಪಾಪ ಕೋಳಿ ಸತ್ತು ಬಿದ್ದಿತ್ತಾ, ಪುಕ್ಕ ಬೇರೆ ಕಿತ್ತಿದ್ದರಾ ಎಂದುಕೊಂಡಾಕೆ ತಕ್ಷಣ ತನ್ನ ಹೆಗಲ ಮೇಲಿರುವ ಪುಕ್ಕ ನೋಡಿ ರೊಚ್ಚಿಗೆದ್ದಿದ್ದಾರೆ. ಆ ಜೋರು ಧ್ವನಿಗೆ ಮೌನೇಶಾ ಅಲ್ಲಿಂದಾ ಎಸ್ಕೇಪ್.

  ಜೋಕರ್ ಬ್ಲೌಸ್ ಹೇಗಿದೆ ಗೊತ್ತಾ?

  ಅಬ್ಭಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಏನು ಕಡಿಮೆಯಾ. ಅದರಲ್ಲೂ ಈ ರೀತಿಯಾದ ಬ್ಲೌಸ್ ಬೇರೆ ಯಾರ ಬಳಿಯೂ ಸಿಗುವುದಕ್ಕೆ ಸಾಧ್ಯವಿಲ್ಲ. ಜೋಕರ್ ಬ್ಲೌಸ್ ನೋಡಿದ ಗಿರೀಶ ಅಂಡ್ ಟೀಂ ಶಾಲಿನಿ ಅವರ ಬಳಿ ಬಂದು, ಇದೇನು ಮೇಡಂ ನೋಡೋದಕ್ಕೆ ಪೆಂಡಾಲ್ ಇದ್ದಂಗ್ ಇದ್ಯಲ್ಲಾ ಮೇಡಂ ಅಂದ್ರೆ, ಪಾಪ ಶಾಲಿನಿ ಶಾಕ್ ಆಗಿದ್ದಾರೆ. ಅದನ್ನು ಸಹಿಸಿಕೊಂಡರೆ ಈ ಕಡೆಯಿಂದ ಒಳ್ಳೆ ಚಾಕಲೇಟ್ ಪೇಪರ್‌ ಥರ ಇದೆ ಮೇಡಂ ಅನ್ನೋದಾ? ಟೋಟಲಿ ಈ ಬ್ಲೌಸ್‌ನಲ್ಲಿ ಜೋಕರ್ ಥರ ಕಾಣ್ತೀರ ಅಂದಿದ್ದೆ ತಡ ಶಾಲಿನಿಯ ಆರ್ಭಟಕ್ಕೆ ಮೌನೇಶ ಓಟ.

  ಕಾಮಿಡಿಗೆ ಫೇಮಸ್

  ಕಾಮಿಡಿಗೆ ಫೇಮಸ್

  ಶಾಲಿನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಸ್ಟಾರ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅದಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಫ್ಯಾಮಿಲಿ ಜೊತೆಗೊಂದಿಷ್ಟು ಕಾಮಿಡಿ, ಸಹೋದ್ಯೋಗಿಗಳ ಜೊತೆಗೊಂದಿಷ್ಟು ಕಾಮಿಡಿ ಮಾಡುತ್ತಾ, ಫಾಲೋವರ್‌ಗಳಿಗೆ ಸಖತ್ ಮಜಾ ನೀಡುತ್ತಿರುತ್ತಾರೆ.

  English summary
  Star suvarna Super Star Reality Show Written Update On Shalini Special. Here is the details.
  Friday, July 8, 2022, 23:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X