For Quick Alerts
  ALLOW NOTIFICATIONS  
  For Daily Alerts

  ಮಹಿಳೆಯರೆಲ್ಲರೂ ಅರಿಶಿನ-ಕುಂಕುಮ ಹಿಡಿದು ಆಂಕರ್ ಶಾಲಿನಿಗೆ ಪೂಜೆ ಮಾಡಿದ್ಯಾಕೆ?

  By ಎಸ್ ಸುಮಂತ್
  |

  ಇತ್ತೀಚೆಗಷ್ಟೇ ವರಮಹಾಲಕ್ಷ್ಮೀಯ ಹಬ್ಬ ಮುಗಿದಿದೆ. ಹೆಣ್ಣು ಮಕ್ಕಳೆಲ್ಲ ಅರಿಶಿನ - ಕುಂಕುಮ ಹಿಡಿದು ತಾಯಿ ವಿಶೇಷ ಪೂಜೆ ಮಾಡಿ, ಇಷ್ಟಾರ್ಥಗಳನ್ನು ಪೂರೈಸು ತಾಯಿ ಅಂತ ಬೇಡಿಕೊಂಡಿದ್ದಾರೆ. ದೇವಸ್ಥಾನಗಳಿಗೆ ಹೋಗಿ ನಮಿಸಿ ಬಂದಿದ್ದಾರೆ. ತಾಯಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇನ್ನು ಗೌರು ಗಣೇಶ ಹಬ್ಬದ ತನಕ ಅಂತ ವಿಶೇಷ ಪೂಜೆ ಏನು ಇರುವುದಿಲ್ಲ. ಆದರೆ ಶಾಲಿನಿಗೆ ದೇವರಂತ ಭಾಗ್ಯ ಬಂದಿದೆ.

  ಆಂಕರ್ ಶಾಲಿನಿ ತನ್ನ ನಿರೂಪಣೆಯಿಂದಲೇ ಸೆಳೆದವರು. ಅವರ ನಿರೂಪಣೆಗೆ ಫ್ರಾನ್ಸ್ ಕೂಡ ಕೊಂಚ ಹೆಚ್ಚಾಗಿಯೇ ಇದ್ದಾರೆ. ಅವರ ನಿರೂಪಣೆಯ ಸ್ಟೈಲೇ ಒಂಥರ ಖುಷಿ ಕೊಡುವಂಥದ್ದು. ಶಾಲಿನಿ ನಿರೂಪಣೆ ಮಾಡುತ್ತಾರೆ ಎಂದರೆ ಅಲ್ಲಿ ಖುಷಿ ಇರುತ್ತದೆ. ಕಾಮಿಡಿ ಮಾಡುತ್ತಲೇ ಎಲ್ಲರನ್ನು ನಕ್ಕು ನಲಿಸುತ್ತಾರೆ. ಆದರೆ ಅದ್ಯಾಕೆ ಈಗ ಪೂಜೆ ಮಾಡಿಸಿಕೊಂಡು ದೇವರ ರೀತಿ ಕೂತಿದ್ದಾರೆ ಎಂಬುದನ್ನು ಮುಂದೆ ಓದಿ.

  ದೇವತೆಗೆ ವಿಶೇಷ ಪೂಜೆ

  ದೇವತೆಗೆ ವಿಶೇಷ ಪೂಜೆ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಮಹಿಳಾ ಮಣಿಯರಿಗಾಗಿಯೇ ಇರುವ ಈ ಶೋ ನಡೆಸಿಕೊಡುವವರು ಶಾಲಿನಿ. ಹೊಸ ಹೊಸ ಆಟ ಆಡಿಸುತ್ತಾ, ಕಾಲು ಎಳೆಯುತ್ತಾ ಒಂದಷ್ಟು ಮನರಂಜನೆ ನೀಡುತ್ತಿದ್ದಾರೆ. ಆದರೆ ಈಗ ಮಹಿಳಾ ಮಣಿಗಳು ಅರಿಶಿನ-ಕುಂಕುಮ, ಹೂ ಹಿಡಿದು ಅವರ ಮುಂದೆ ನಿಂತಿದ್ದಾರೆ. ದೇವರಂತೆ ಫೀಲ್ ಮಾಡುತ್ತಿದ್ದಾರೆ. ಮನದೊಳಗೆ ನಗು ಬಂದರೂ ಪಿಸುಕ್ ಎನ್ನದೆ, ಮರೆಯಲ್ಲಿಯೇ ನಕ್ಕು, ಭಕ್ತಿ ಭಾವದಿಂದ ನಮಿಸಿದ್ದಾರೆ. ಹೂ ಇಟ್ಟು, ಕಡ್ಡಿ ಬೆಳಗಿ ಅರಸು ಶಾಲಿನಿ ತಾಯೆ ಎಂದು ಬೇಡಿದ್ದಾರೆ.

  ಬ್ಲೌಸ್‌ನಲ್ಲಿ ಹೊತ್ತು ತಂದ ಶಾಲಿನಿ

  ಬ್ಲೌಸ್‌ನಲ್ಲಿ ಹೊತ್ತು ತಂದ ಶಾಲಿನಿ

  ಹೇಳಿ ಕೇಳಿ ಶಾಲಿ‌ನಿ ಬ್ಲೌಸ್ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದೆ. ಯಾರು ಊಹೆಯನ್ನೇ ಮಾಡುವುದಕ್ಕೆ ಆಗದ ರೀತಿಯಲ್ಲಿ ಶಾಲಿನಿ ಬ್ಲೌಸ್ ಡಿಸೈನ್ ಮಾಡಿಕೊಂಡು ಬರುತ್ತಾರೆ. ಅದರ ಹಿಂದೊಂದು ಪುರಾಣವೂ ಇರುವಂತ ಬ್ಲೌಸ್ ತೊಡುವುದೇ ಹೆಚ್ಚು. ಈಗ ಬ್ಲೌಸ್‌ನಲ್ಲಿ ದುರ್ಗಾ ಮಾತೆಯನ್ನು ಹಿತ್ತು ತಂದಿದ್ದಾರೆ. ತಮ್ಮ ಬ್ಲೌಸ್‌ನ ತೋಳಿನಲ್ಲಿ ಎಂಬ್ರಾಯ್ಡರಿ ಡಿಸೈನ್‌ನಲ್ಲಿ ದುರ್ಗಾ ಮಾತೆಯ ಚಿತ್ರ ಬಿಡಿಸಲಾಗಿದೆ. ಇದೇ ಕಾರಣಕ್ಕೆ ಮಹಿಳಾ ಮಣಿಗಳೆಲ್ಲಾ ಪೂಜೆ ಮಾಡುತ್ತಿದ್ದಾರೆ.

  ಶಾಲಿನಿ ಬ್ಲೌಸ್ ಡಿಫ್ರೆಂಟ್ ಸ್ಟೈಲ್

  ಶಾಲಿನಿ ಬ್ಲೌಸ್ ಡಿಫ್ರೆಂಟ್ ಸ್ಟೈಲ್

  ಹೇಳಿ ಕೇಳಿ ಶಾಲಿನಿ ಬ್ಲೌಸ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲೂ ಶಾಲಿನಿ ಒಂದೇ ರೀತಿಯ ಬ್ಲೌಸ್ ಏನು ಹಾಕಲ್ಲ. ನವಿಲು ಗರಿ, ಕೊಳವೆ, ವೀಳ್ಯದೆಲೆ, ಬೆಟ್ಟ - ಗುಡ್ಡ ಅಬ್ಬಬ್ಬಾ ಒಂದಾ, ಎರಡಾ ವಿವಿಧ ರೀತಿಯಲ್ಲಿರುವ ಬ್ಲೌಸ್ ತೊಟ್ಟು ಬರುತ್ತಾರೆ. ಅದೇ ರೀತಿ ಈ ವಾರ ಇನ್ನೆಷ್ಟು ವೆರೈಟಿ ಬ್ಲೌಸ್ ಹಾಕಿಕೊಳ್ಳಬಹುದು ಎಂಬ ಕುತೂಹಲದಿಂದಲೇ ಅವರ ಶೋಗಾಗಿ ಕಾಯುವ ಮಂದಿ ಇದ್ದಾರೆ.

  ಮೌನಿಶ್ ತಲೆಗೆ ಈ ಐಡಿಯಾ ಬರೋದೇಗೆ?

  ಮೌನಿಶ್ ತಲೆಗೆ ಈ ಐಡಿಯಾ ಬರೋದೇಗೆ?

  ಶಾಲಿನಿ ಮನರಂಜನೆ ನೀಡುವಲ್ಲಿ ಎಕ್ಸ್ ಪರ್ಟ್. ಅವರದ್ದೇ ಆದ ಯೂಟ್ಯೂಬ್ ನಲ್ಲಿ ಫುಲ್ ಮೀಲ್ಸ್ ಮನರಂಜನೆ ನೀಡುವಂತ ವಿಡಿಯೋಗಳು ನಮಗೆ ಸಿಗುತ್ತವೆ. ಅವರ ಟೀಂ ಇದ್ದು ಬಿಟ್ಟರೆ ಮನರಂಜನೆಗೆ ಕೊರತೆಯೇ ಇಲ್ಲ. ಆ ಟೀಂನಲ್ಲಿ ಮೌನಿಶ ಕೂಡ ಇದ್ದಾನೆ. ಇದೇ ಮೌನಿಶ ಬ್ಲೌಸ್ ಡಿಸೈನ್ ಮಾಡುವುದು. ಅದೇ ರೀತಿ ಅದನ್ನು ವ್ಯಕ್ತಪಡಿಸುವ ರೀತಿಯು ಅದ್ಭುತ.

  English summary
  Super Star Reality Show Anchor Shalini Special Blouse. Here is the details.
  Sunday, August 14, 2022, 23:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X