Shalini: ನಿರೂಪಕಿ ಶಾಲಿನಿ ಹಾಕಿದ್ದು ಅಂತಿಂಥ ಬ್ಲೌಸ್ ಅಲ್ಲ.. ಮೌನೀಶನ ಮೇಲೆ ಗರಂ ಆಗಿದ್ದೇಕೆ?
ಆಂಕರ್ ಶಾಲಿನಿ ಹೆಚ್ಚು ಸದ್ದು ಮಾಡುವುದು ಅವರ ಬ್ಲೌಸ್ ವಿಚಾರಕ್ಕೇನೆ. ತರಹೇವಾರಿ ಬ್ಲೌಸ್ ಗಳನ್ನ ಹಾಕುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ಈ ಹಿಂದೆಲ್ಲಾ ಡಿಸೈನರಿ ಬ್ಲೌಸ್ ಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಾ ಇತ್ತು. ಸೀರೆಯೊಂದನ್ನ ತಗೊಂಡ್ರೆ ಅದಕ್ಕೆ ಯಾವ ರೀತಿಯ ಬ್ಲೌಸ್ ರೆಡಿ ಮಾಡಿಸಬೇಕು ಎಂಬ ಯೋಚನೆ ದೊಡ್ಡಮಟ್ಟದಲ್ಲಿ ಇರ್ತಾ ಇತ್ತು.
ಬಳಿಕ ಸೀರೆ ಸಿಂಪಲ್ ಆಗಿದ್ರು, ಬ್ಲೌಸ್ ಗ್ರ್ಯಾಂಡ್ ಆಗಿ ರೆಡಿ ಮಾಡಿಸಿದ್ರೆ, ಲುಕ್ ಸಖತ್ತಾಗಿಯೇ ಕಾಣಿಸುತ್ತಿತ್ತು. ಈಗಲೂ ಡಿಸೈನ್ ಬ್ಲೌಸ್ ಕ್ರೇಜ್ ಏನು ಕಡಿಮೆಯಾಗಿಲ್ಲ. ಆದರೆ ಆಂಕರ್ ಶಾಲಿನಿ ಸ್ಟಿಚ್ ಮಾಡಿಸುವಂತ ಅದ್ಭುತವಾಗಿ ಬ್ಲೌಸ್ ಸ್ಟಿಚ್ ಮಾಡಿಸಲು ಯಾರಿಂದಾನು ಸಾಧ್ಯವಿಲ್ಲ.

ತೋರಣದ ಬ್ಲೌಸ್ ತೊಟ್ಟ ಶಾಲಿನಿ
ಮೊದಲೇ ಹೇಳಿದಂತೆ ಆಂಕರ್ ಶಾಲಿನಿ ಸೀರೆಯ ಬ್ಲೌಸ್ ಬಗ್ಗೆಯೇ ಹೆಚ್ಚು ಫೇಮಸ್ ಆಗಿದ್ದಾರೆ. ತರಹೇವಾರಿ ಬ್ಲೌಸ್ ಗಳನದನು ಹಾಕುತ್ತಾ, ಈ ರೀತಿಯಲ್ಲೂ ಬ್ಲೌಸ್‌ಗಳನ್ನು ಧರಿಸಬಹುದಾ ಎಂಬ ಆಶ್ಚರ್ಯವನ್ನುಂಟು ಮಾಡಿದವರು ಶಾಲಿನಿ. ಈಗ ಮತ್ತೊಂದು ಹೊಸ ರೀತಿಯ ಬ್ಲೌಸ್ ಗಮನ ಸೆಳೆಯುತ್ತಿದ್ದಾರೆ. ಈ ಬ್ಲೌಸ್ ಅದೆಷ್ಟು ಚೆಂದವಾಗಿದೆ ಅಂದ್ರೆ ನೋಡಿದವರು, ನಾವೂ ಕೀಡ ಯಾವ ಕಾರ್ಯಕ್ರಮಕ್ಕೆ ಈ ರೀತಿಯ ಬ್ಲೌಸ್ ಧರಿಸಬಹುದು ಎಂಬ ಯೋಚನೆಯಲ್ಲಿದ್ದಾರೆ.
ಮೌನೀಶನ ಮೇಲೆ ಕೋಪ
ಶಾಲಿನಿ ಅವರು ಹಾಕುವ ಪ್ರತಿಯೊಂದು ಬ್ಲೌಸ್ ಕೂಡ ಮೌನಿಶನೇ ಡಿಸೈನ್ ಮಾಡೋದು. ಈಗಲೂ ಮೌನಿಶನೇ ಡಿಸೈನ್ ಮಾಡಿದ್ದಾರೆ. ಅದು ಯಾವ ಥರ ಅಂದ್ರೆ ತೋಳಿನಲ್ಲೆಲ್ಲಾ ಎಲೆ, ಗಂಟೆ, ಶಂಖ ಎಲ್ಲವನ್ನೂ ಇಟ್ಟು ಈ ಹೊಸ ರೀತಿಯ ಬ್ಲೌಸ್ ರೆಡಿ ಮಾಡಿದ್ದಾರೆ. ಆದರೆ, ಇದೆ ಸಮಯಕ್ಕೆ ಸೊಪ್ಪನ್ನು ಮೌನೀಶ ತಂದಿದ್ದಾರೆ. ಅದಾಗಲೇ ಸೊಪ್ಪನ್ನ ಯಾಕೆ ತಂದಿರೋದು ಅಂತ ಶಾಲಿನಿಗೆ ಗೊತ್ತಾಗಿದೆ. ಬೇಡ ಮೌನೀಶ ಅಂದ್ರೆ, ಎಲೆ ತಂದಿರೋದು ಪೂಜೆಗೆ. ನೀವೂ ಹಿಂಗೆ ಗೃಹಪ್ರವೇಶಕ್ಕೆ ಬನ್ನಿ. ತೋರಣ ಕಟ್ಟೋದು ತಪ್ಪುತ್ತೆ ಅಂತ ರೇಗಿಸಿದ್ದಾರೆ.
ಬ್ಲೌಸ್ ಬಗೆಯ ಕಥೆಯೇ ವಿಭಿನ್ನ
ಶಾಲಿನಿ ಹಾಕುವ ಬ್ಲೌಸ್‌ಗಳ ಬಗ್ಗೆ ನೀಡುವ ವಿವರಣೆ ಇನ್ನೂ ಅದ್ಭುತವಾಗಿರುತ್ತದೆ. ಬ್ಲೌಸ್ ರೆಡಿ ಮಾಡಿರುವ ಮೌನಿಶ ಹಾಗೂ ಹೇರ್ ಸ್ಟೈಲ್ ಮಾಡುವವರನ್ನು ನಿಲ್ಲಿಸಿಕೊಂಡು, ಆ ಬ್ಲೌಸ್ ಬಗ್ಗೆ ಒಂದು ಕಾನ್ಸೆಪ್ಟ್ ಅನ್ನೇ ರೆಡಿ ಮಾಡಿ ಬಿಡುತ್ತಾರೆ. ಈಗಲೂ ಅಂಥದ್ದೇ ವಿಡಿಯೋ ಮಾಡಿದ್ದಾರೆ. ಶಾಲಿನಿ ಅವರಿಗೆ ಹೇರ್ ಸ್ಟೈಲ್ ಮಾಡುತ್ತಿರುವಾಗ, ನೋಡು ಈ ಬ್ಲೌಸ್‌ಗೆ ಗಂಟೆ, ಶಂಖ ಎಲ್ಲ ಕಟ್ಟಿದ್ದಾನೆ. ಬಿಟ್ರೆ ನಿಂಬೆ ಹಣ್ಣನ್ನು ಕಟ್ಟಿ ಬಿಡುತ್ತಾನೆ ಎಂದು ಹೇಳುತ್ತಿರುವಾಗಲೇ ಮೌನಿಶನ ಎಂಟ್ರಿ. ಗೃಹಪ್ರವೇಶಕ್ಕೆ ಕರೆದಾಗ ಸತ್ಯಾಂಶ ಕೇಳಿ ಶಾಲಿನಿ ಶಾಕ್, ಮೌನೀಶ ರಾಕ್.
ಕಾರ್ಯಕ್ರಮಕ್ಕೆ ಸೀರೆಯುಟ್ಟು ಬರುವ ಶಾಲಿನಿ
ಶಾಲಿನಿ ಅವರ ಸೋಷಿಯಲ್ ಮೀಡಿಯಾದಲ್ಲಿ ಇಂತ ಫನ್ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಮೇಕಪ್ ಮಾಡಿಕೊಳ್ಳುವ ಗ್ಯಾಪ್‌ನಲ್ಲೇ ಒಂದು ಫನ್ ಮೂಮೆಂಟ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಮೌನೀಶ ಅಂಡ್ ಶಾಲಿನಿ ಅಷ್ಟು ಕಲಾವಲ್ಲಭರು. ಸದ್ಯ ಸ್ಟಾರ್ ಸುವರ್ಣದಲ್ಲಿ ಬರುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮವನ್ನ ಶಾಲಿನಿ ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮದಲ್ಲೂ ನೋವಿರುವವರಿಗೆ ಜೊತೆಯಾಗುತ್ತಾರೆ, ನಗಿಸುವವರನ್ನು ಇನ್ನಷ್ಟು ನಗಿಸುತ್ತಾರೆ.


Click it and Unblock the Notifications











