ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು ; ಗಿಲ್ಲಿ - ಅಶ್ವಿನಿ ವಾಗ್ಯುದ್ದ

''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಮಾತ್ರ ಅಲ್ಲ. ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ ಕೂಡ ಹೌದು. ಈ ಸಂಘರ್ಷದ ಕಥೆ ಈಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈ 50 ದಿನದಲ್ಲಿ ಈ ಬಿಗ್ ಬಾಸ್ ಮನೆ ವಿವಾದಕ್ಕೆ ಸಾಕ್ಷಿಯಾಗಿದೆ. ರಂಪ-ರಾಮಾಯಣ ಮತ್ತು ಕಣ್ಣೀರಿಗೆ ಕೂಡ ಸಾಕ್ಷಿಯಾಗಿದೆ. ಇನ್ನು ಇದೇ ಮನೆಯಲ್ಲಿ ತಮ್ಮ ತಪ್ಪಿನ ಅರಿವು..

ಆಗಿ ಕೆಲವರು ತಮ್ಮ ಆಟದ ಶೈಲಿ ಬದಲಿಸಿದ್ದಾರೆ. ಇನ್ನೂ ಕೆಲವರು ಬದಲಿಸಲು ಸಾಧ್ಯವಾಗದೇ ಮನೆಯಿಂದ ಹೊರಗಡೆ ಬಂದಿದ್ದಾರೆ. ಮತ್ತೂ ಕೆಲವರು ಯಾವ ಬದಲಾವಣೆ ಮಾಡಿಕೊಳ್ಳದಿದ್ದರೂ ಕೂಡ ಮನೆಯಲ್ಲಿದ್ದಾರೆ. ಉದಾಹರಣೆಗೆ ಅಶ್ವಿನಿ ಗೌಡ.

SUPERVISORS FURY Gilli Nata vs Ashwini Gowda Task Fight Escalates Over Respect and Ego

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಬಿಗ್ ಬಾಸ್'' ಮನೆಗೆ ಹೋದ ಮೊದಲ ದಿನದಿಂದಲೇ ಅಶ್ವಿನಿ ಗೌಡ ಅವರದ್ದು ಆನೆ ನಡೆದಿದ್ದೇ ದಾರಿ ಎಂಬಂತಹ ವರ್ತನೆ. ಬೇರೆಯವರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಅಶ್ವಿನಿ ತಮ್ಮನ್ನು ಯಾರಾದರೂ ಏಕವಚನದಲ್ಲಿ ಕರೆದರೆ ಗರಂ ಆಗುತ್ತಾರೆ. ಜಗಳಕ್ಕೆ ನಿಲ್ಲುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆಯಂತೆ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ವಾಗ್ಯುದ್ದ ನಡೆದಿದೆ. ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ.

ಹೌದು, ಅಸಲಿಗೆ ಇಂದು ( ನವೆಂಬರ್ 18 ) ''ಬಿಗ್ ಬಾಸ್'' ಮನೆಯಲ್ಲಿ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಎರಡು ತಂಡಗಳಿದ್ದು, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿದೆ. ಇದೇ ಟಾಸ್ಕ್ ಸಮಯದಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ವಾಕ್ಸಮರ ಶುರುವಾಗಿದೆ.

ನಾನಾ -ನೀನಾ ಎಂದು ಇಬ್ಬರು ಇಲ್ಲಿ ಜಗಳಕ್ಕಿಳಿದಿದ್ದು, ವ್ಯೆಯಕ್ತಿಕವಾಗಿ ನಿಂದಿಸುವ ಹಂತಕ್ಕೆ ಈ ಜಗಳ ತಲುಪಿದೆ. ನಿನ್ನ ಯೋಗ್ಯತೆ.. ನನ್ನತ್ರ ಇಟ್ಕೋಬೇಡ ಎಂದೆಲ್ಲಾ ಏಕವಚನದಲ್ಲಿಯೇ ಇಬ್ಬರು ಪರಸ್ಪರ ನಿಂದಿಸಿದ್ದಾರೆ. ಕೂಗಾಡಿದ್ದಾರೆ.

ಸದ್ಯ ಇಂದು (ನವೆಂಬರ್ 18 ) ಬಿಡುಗಡೆಯಾದ ಈ ಪ್ರೋಮೋ ನೋಡಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಅಶ್ವಿನಿ ಯಾವತ್ತು ಬದಲಾಗಲ್ಲ ಎಂದು ಒಬ್ಬರು ಹೇಳಿದರೆ, ಅಶ್ವಿನಿ ಗೆ ತಾಳ್ಮೆ ಅನ್ನೋದೇ ಇಲ್ಲ.. ಇವಳು ಹೋಗು ಬಾ ಅನ್ನಬಹುದು ಬೇರೆಯವರು ಇವಳಿಗೆ ಹೋಗಿ ಬನ್ನಿ ಅನ್ಬೇಕಂತೆ, ಇದು ಯಾವ ನ್ಯಾಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸೀಸನ್‌ನಲ್ಲಿ ಬರೀ ಜಗಳನೇ ಆಗೋಯ್ತು ಎಂದು ಮತ್ತೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

SUPERVISORS FURY Gilli Nata vs Ashwini Gowda Task Fight Escalates Over Respect and Ego

ಅಂದ್ಹಾಗೇ ''ಬಿಗ್ ಬಾಸ್'' ಮನೆಯಲ್ಲಿ ಈ ಬಾರಿ ಎರಡನೇ ದಿನವೇ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಗಿಲ್ಲಿ ಹೋಗೇ..ಬಾರೇ..ಎಂದು ಏಕವಚನದಲ್ಲಿಯೇ ಮಾತನಾಡಿದ್ದರು. ಆಗ ಕೆರಳಿದ್ದ ಅಶ್ವಿನಿ ಗೌಡ ಎಚ್ಚರಿಕೆ ನೀಡಿದ್ದರು.

ಇಲ್ಲಿಂದ ಶುರುವಾದ ಇವರ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬಂತು. ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದ ಅಶ್ವಿನಿ ಗೌಡ, ಈ ಹಿಂದೆ ಎಲ್ಲೋ ಒಂದು ಕಡೆ ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನಟ ನನ್ನನ್ನು ತುಂಬಾ ಪರ್ಸನಲಿ ಟಾರ್ಗೆಟ್ ಮಾಡ್ತಿದ್ದಾರೆ ಎಂದು ನನಗೆ ಅನ್ನಿಸ್ತಾ ಇದೆ. ಗೇಮ್ ಅಂತ ಬಂದರೆ ತುಂಬಾ ಸ್ವಾರ್ಥಿ ಆಗಿರುತ್ತಾರೆ ಎಂದು ಹೇಳಿದ್ದರು. ಹೀಗೆ ಕಾಲ ಕಾಲಕ್ಕೆ ಕಿತ್ತಾಡಿಕೊಳ್ಳುತ್ತಲೇ ಬರುತ್ತಿರುವ ಅಶ್ವಿನಿ ಗೌಡ ಮತ್ತು ಗಿಲ್ಲಿ ಈಗ ಮತ್ತೆ ಕಿತ್ತಾಡಿಕೊಂಡಿದ್ದಾರೆ. ವ್ಯೆಯಕ್ತಿಕವಾಗಿ ನಿಂದಿಸಿದ್ದಾರೆ. ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರ ಈ ವಿಷಯದ ಕುರಿತು ಚರ್ಚೆ ನಡೆಯುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Bigg Boss Kannada 12 News: The bitter rivalry between Gilli Nata and Ashwini Gowda explodes over a new task and a singular address issue. Get the latest fight updates, task details, and who the Captain punished!
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X