ಹಲವು ವರ್ಷಗಳಿಂದ ಕಿರುತೆರೆಯ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿಯರು

By ಪ್ರಿಯಾ ದೊರೆ

ಸಿನಿಮಾ, ಧಾರಾವಾಹಿ, ನಾಟಕ ಯಾವುದೇ ಆಗಲಿ ನಾಯಕ-ನಾಯಕಿ ಇದ್ದುಬಿಟ್ಟರೆ ಆಗಿಬಿಡುವುದಿಲ್ಲ. ಕತೆಯೊಂದಕ್ಕೆ ನಾಯಕ-ನಾಯಕಿಯಷ್ಟೆ ಪೋಷಕರ ಪಾತ್ರಗಳೂ ಅವಶ್ಯಕ.

ಆದರೆ ನಮ್ಮ ನಾಯಕ ಕೇಂದ್ರಿತ ಮನೊರಂಜನಾ ಕ್ಷೇತ್ರದಲ್ಲಿ ನಾಯಕ ನಟರಿಗಿರುಷ್ಟು ಬೇಡಿಕೆ, ಗೌರವ, ಮಹತ್ವ ಪೋಷಕ ಪಾತ್ರಗಳಿಗಿಲ್ಲ. ಟಿವಿ ಧಾರಾವಾಹಿಗಳು ನಾಯಕಿ ಕೇಂದ್ರಿತವಾದರೂ ಇಲ್ಲಿಯೂ ಸಹ ಪೋಷಕ ಪಾತ್ರಗಳಿಗೆ ಹೆಚ್ಚು ಆದ್ಯತೆ ಇಲ್ಲ.

ಕಿರುತೆರೆಯಲ್ಲಿ ನಾಯಕ ನಾಯಕಿಯರಿಗೆ ಎಷ್ಟು ಬೇಡಿಕೆ ಇರುತ್ತದೋ, ಪೋಷಕ ಪಾತ್ರಗಳೂ ಅಷ್ಟೇ ಗಮನ ಸೆಳೆಯುತ್ತವೆ. ನಾಯಕ-ನಾಯಕಿಯರ ತಂದೆ, ತಾಯಿ ಪಾತ್ರ ನಿರ್ವಹಿಸಿರುವವರು ತಮ್ಮ ಅಭಿನಯದಿಂದಲೇ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿರುತ್ತಾರೆ. ಅಂಥಹಾ ಸ್ಟಾರ್ ಪೂಷಕ ನಟ-ನಟಿಯರ ಬಗ್ಗೆ ತಿಳಿಯೋಣ ಬನ್ನಿ..

ಸಪ್ನಾ ದೀಕ್ಷಿತ್

ಸಪ್ನಾ ದೀಕ್ಷಿತ್

ಕಿರುತೆರೆ ಪ್ರೇಕ್ಷಕರಿಗೆ ಹಲವು ವರ್ಗಳಿಂದ ಚಿರಪರಿಚಿತ ಮುಖ ಸ್ವಪ್ನಾ ದೀಕ್ಷಿತ್. ತಮ್ಮ ಮನೋಜ್ಞ ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವ ಸ್ವಪ್ನಾ ಅವರು ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದು, ಸವಿರುಚಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸೇವಂತಿ, ಇಂತಿ ನಿಮ್ಮ ಆಶಾ, ಕಮಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರ, ಖಳ ನಾಯಕಿಯಾಗಿಯೂ ಬಣ್ಣ ಹಚ್ಚಿದ್ದಾರೆ. ಇನ್ನು ಸಿನಿಮಾಗಳಲ್ಲೂ ನಟಿಸಿರುವ ಸಪ್ನಾ ದೀಕ್ಷಿತ್ ಅವರು ಪಾಂಡುರಂಗ ವಿಠಲ, ದಂಡ ಪಿಂಡಗಳು, ಸಂಪಿಗೆ ಪರಿಮಳ, ಮಾಂಗಲ್ಯ, ಪುರುಷೋತ್ತಮ, ಗಿರಿಜಾ ಕಲ್ಯಾಣ, ಪದ್ಮಾವತಿ, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಸಂಗೀತಾ

ನಟಿ ಸಂಗೀತಾ

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿರುವ ನಟಿ ಸಂಗೀತಾ ಅವರ ಬಗ್ಗೆ ನಿಮಗೆ ವಿಶೇಷವಾಗಿ ಹೇಳಬೇಕಿಲ್ಲ. ಸೇವಂತಿ, ಇಂತಿ ನಿಮ್ಮ ಆಶಾ, ಮಂಗಳ ಗೌರಿ ಮದುವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಸಂಗೀತ ಅವರು ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆಗೆ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.

ನಟಿ ಸ್ವಾತಿ

ನಟಿ ಸ್ವಾತಿ

ನಟಿ ಸ್ವಾತಿ ಯಾರಿಗೆ ಗೊತ್ತಿಲ್ಲ ಹೇಳಿ.. ಮೃದು ವ್ಯಕ್ತಿತ್ವದ ಸದಾ ನಗುತ್ತಿರುವ ಸ್ವಾತಿ ಅವರು 1995 ರಿಂದ ಇಂದಿನವರೆಗೂ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸ್ವಾತಿ ಅವರ ರೀತಿ ನೀತಿಯೇ ಡಿಫರೆಂಟ್. ಸ್ವಾತಿ ಅವರು ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದು, ಮೊದಲು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಾತಿಯವರು ನೋಡುವುದಕ್ಕೆ ಈಗಲೂ ಅಂದಿನಂತೆಯೇ ಕಾಣುತ್ತಾರೆ. ಮುಖದಲ್ಲಿ ಸ್ವಲ್ಪ ಸುಕ್ಕು ಬಿಟ್ಟರೆ ಈಗಲೂ ಅದೇ ಪರ್ಸನಾಲಿಟಿಯನ್ನು ಮೇಂಟೈನ್ ಮಾಡಿದ್ದಾರೆ. ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಭಾರ್ಗವ ಅವರ ಉಯ್ಯಾಲೆ ಸೇರಿದಂತೆ ಕಿರುತೆರೆ ಪಯಣದಲ್ಲಿ ಸ್ವಾತಿ ಅವರು ಇಂದಿನವರೆಗೂ ಸುಮಾರು 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಚಿತ್ಕಲಾ ಬಿರಾದಾರ್

ಚಿತ್ಕಲಾ ಬಿರಾದಾರ್

ಕನ್ನಡ ಕಿರುತೆರೆಯ ತಾಯಂದಿರಲ್ಲಿ ಒಬ್ಬರಾಗಿರುವ ಚಿತ್ಕಲಾ ಬಿರಾದರ್ ಅವರು ಟೀಚರ್ ಆಗಿದ್ದವರು ನಟನೆಯನ್ನು ಅರಸಿ ಬಂದವರು. ಬಂದೇ ಬರತಾವ ಕಾಲ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದವರು ಚಿತ್ಕಲಾ. ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಕನ್ನಡತಿ, ರತ್ನಮಾಲಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮದುವೆ ಮನೆ, ಫ್ಯಾಂಟಮ್, ಪ್ರೇಮ ಪೂಜ್ಯಂ ಹಾಗೂ ನಿನ್ನ ಸನಿಹಕೆ ಚಿತ್ರಗಳಲ್ಲೂ ಪೋಷಕ ನಟಿ ಪಾತ್ರಗಳಲ್ಲಿ ಮಿಂಚಿದ್ದಾರೆ.

ಮಧುಮತಿ

ಮಧುಮತಿ

ಕನ್ನಡತಿ ಧಾರಾವಾಹಿಯಲ್ಲಿ ಕೌಟುಂಬಿಕ ಪಾತ್ರಕ್ಕೆ ಜೀವ ತುಂಬಿರುವ ಮಧುಮತಿ ಅವರು ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಜೀವ ಹೂವಾಗಿದೆ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಸುಂದರಿ, ಕನ್ನಡತಿ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ಮೈನಸ್ 18 ಎನ್ನುವ ವೆಬ್ ಸೀರೀಸ್ ನಲ್ಲೂ ನಟಿಸಿದ್ದು, ಮಧುಮತಿ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ.

ಅಪೂರ್ವಶ್ರೀ

ಅಪೂರ್ವಶ್ರೀ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹಿಟ್ ಆದ ನಟಿ ಅಪೂರ್ವಶ್ರೀ. ಹಲವು ವರ್ಷಗಳಿಂದ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಜೊತೆ ಜೊತೆಯಲಿ ಧಾರಾವಾಹಿ ಇವರಿಗೆ ಹೆಸರು ತಂದುಕೊಟ್ಟಿದೆ. ಸುಂದರಿ ಗಂಡ ಸದಾನಂದ, ದಾಸ, ಜಾಕಿ, ಅಣ್ಣಬಾಂಡ್, ಕಲ್ಪನ, ಮಿಲನ, ಸುಂಟರಗಾಳಿ, ಗಾಜಿನ ಮನೆ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಾರಿಕಾ ರಾಜ್ ಅರಸ್

ಸಾರಿಕಾ ರಾಜ್ ಅರಸ್

ಸಾರಿಕಾ ರಾಜ್ ಅರಸ್ ಬಹಳ ವರ್ಷಗಳಿಂದ ಕಿರುತೆರೆಯಲ್ಲಿರುವ ನಟಿ. ಬಾಲನಟಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾರಿಕಾ ಅವರು ಇದುವರೆಗೂ 400ಕ್ಕೂ ಹೆಚ್ಚು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಬೀಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 32 ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ಸಾರಿಕಾ ಅವರು, ನಾಯಕಿ, ಖಳನಾಯಕಿ, ವಿಲನ್, ಹುಚ್ಚಿ, ಪೊಲೀಸ್, ಡಾಕ್ಟರ್ ಸೇರಿದಂತೆ ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
The actresses and their television journey who have been cast in supporting roles for many years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X