ತುಳು ಸಿನಿಮಾರಂಗಲ್ಲಿದ್ದಾರೆ ಜೂ ಬುಲೆಟ್ ಪ್ರಕಾಶ್: ಯಾರೆಂದು ಗೊತ್ತೆ?

By ಪೂರ್ವ

ಕಾಮಿಡಿ ಕಿಲಾಡಿಗಳ ಮೂಲಕ ಅನೇಕ ಕರಾವಳಿಯ ಪ್ರತಿಭೆಗಳು ಅನಾವರಣವಾದವು ಎಂದರೆ ತಪ್ಪಿಲ್ಲ, ಅನೇಕ ಜನರಿಗೆ ಟ್ಯಾಲೆಂಟ್ ಇರುತ್ತದೆ ಆದರೆ ಅದನ್ನು ತೋರ್ಪಡಿಸಲು ಅವರಿಗೆ ಸರಿಯಾದ ವೇದಿಕೆ ಸಿಗದಿರುತ್ತದೆ ಅಂತಹ ವೇದಿಕೆಯನ್ನು ಜೀ ಕನ್ನಡ ವಾಹಿನಿ ದೊರಕಿಸಿಕೊಟ್ಟಿದೆ. ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್‌ಗಳನ್ನು ಮಾಡಿ ಕಲಾವಿದರನ್ನು ಹೆಕ್ಕಿ ತರುವ ಕೆಲಸವನ್ನು ಮಾಡುತ್ತಿದೆ. ಎಷ್ಟೋ ಮಂದಿ ಎಲೆಮರೆಯ ಕಾಯಂತೆ ಇದ್ದರು ಅಂಥಹವರನ್ನು ಹುಡುಕಿ ಅವರ ಪ್ರತಿಭೆಯನ್ನು ಇನ್ನೂ ಇಮ್ಮಡಿಗೊಳಿಸುವಲ್ಲಿ ಸಫಲರಾಗಿದ್ದಾರೆ.

ಅನೇಕ ಜನ ಕಾಮಿಡಿಕಿಲಾಡಿಗಳು ವೇದಿಕೆಯಿಂದ ತೆರಳಿದ ಮೇಲೆ ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನಟಿಸಲು ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಮಂಗಳೂರಿನ ಸೂರಜ್, ಸೂರಜ್ ಎಲ್ಲರನ್ನು ನಗೆ ಗಡಲಲ್ಲಿ ತೇಲಿಸಿಬಿಡುತ್ತಾರೆ ಅಂಥಹ ಪ್ರತಿಭೆ ಅವರಲ್ಲಿ ಅಡಕವಾಗಿತ್ತು ಎಂದು ಯಾರಿಗೂ ತಿಳಿದಿರಲಿಲ್ಲ. ಸೂರಜ್ ಅವರ ನಟನಾ ವೃತ್ತಿ ಆರಂಭವಾಗಿದ್ದು ಹೇಗೆ? ಹೇಗೆ ನಡೆಯುತ್ತಿದೆ ನೋಡೋಣ.

ತುಳು ರಂಗಭೂಮಿಯಲ್ಲಿ ಅಭಿನಯಿಸಿ ಮಂಗಳೂರಿನ ಜನರ ಮನಗೆದ್ದಿದ್ದರು ಸೂರಜ್, ಅನೇಕ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು. ಕಾಮಿಡಿ ಕಿಲಾಡಿಯಲ್ಲಿ ಭಾಗವಹಿಸಬೇಕೆಂಬ ಹಂಬಲದಿಂದ ಕಾಮಿಡಿ ಕಿಲಾಡಿ ಸೀಸನ್ 2ಗೆ ಮಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಸೆಲೆಕ್ಟ್ ಆಗಿ ಬೆಂಗಳೂರಿನಲ್ಲೂ ಸೆಲೆಕ್ಟ್ ಆಗಿ ಕಾಮಿಡಿ ಕಿಲಾಡಿಗಳು ಆಗಮಿಸಿದರು. ವೇದಿಕೆಗೆ ಬಂದ ಮೇಲೆ ಎಲ್ಲವನ್ನು ಕಲಿಯುವ ಅವಕಾಶ ಸಿಕ್ಕಿತು. ಕಾಮಿಡಿ ಕಿಲಾಡಿ ವೇದಿಕೆ ಕಲ್ಪಿಸಿಕೊಟ್ಟಿದ್ದರಿಂದ ಸೂರಜ್ ಅಭಿನಯ ಪ್ರತಿಭೆ ರಾಜ್ಯಕ್ಕೆಲ್ಲ ಗೊತ್ತಾಯಿತು.

ಕೋಸ್ಟಲ್ ವುಡ್‌ನಲ್ಲಿ ಸೂರಜ್ ಅಭಿನಯ

ಕೋಸ್ಟಲ್ ವುಡ್‌ನಲ್ಲಿ ಸೂರಜ್ ಅಭಿನಯ

ಕೆಲವು ತುಳು ಸಿನಿಮಾಗಳಲ್ಲಿಯೂ ಸೂರಜ್ ಅಭಿನಯವನ್ನು ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ 'ಯಾರಿಗುಂಟು ಯಾರಿಗಿಲ್ಲ' ಎಂಬ ಶೋನಲ್ಲಿ ಆಂಕರಿಂಗ್ ಮಾಡಲು ಅವಕಾಶ ಸಿಕ್ಕಿತು. ಆ ಬಳಿಕ ಡಿಕೆಡಿಯಲ್ಲಿ ಕೂಡ ಚಾನ್ಸ್ ಸಿಕ್ಕಿತು. ಡಾನ್ಸ್ ಬಗ್ಗೆ ಏನು ಗೊತ್ತಿರಲಿಲ್ಲ. ಹುಲಿಡಾನ್ಸ್ ಬಿಟ್ಟು ಬೇರೆ ಡಾನ್ಸ್ ಬಗ್ಗೆ ಅಷ್ಟಾಗಿ ತಿಳಿದುಕೊಳ್ಳದ ಸೂರಜ್ ಬಳಿಕ ಡಾನ್ಸ್‌ನ್ನು ಕಲಿತು ಡಾನ್ಸ್ ಕರ್ನಾಟಕ ಡಾನ್ಸ್‌ನಲ್ಲಿ ಭಾಗವಹಿಸಿದರು. ಮಂಗಳೂರಿನ ಸೂರಜ್ ಜ್ಯೂನಿಯರ್ ಬುಲೆಟ್ ಪ್ರಕಾಶ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಜನರನ್ನು ನಗೆಗಡಲಲ್ಲಿ ತೇಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನಾಟಕದಲ್ಲಿ ಅಭಿನಯಿಸಲು ಹಪಹಪಿಸುತ್ತಿದ್ದ ಸೂರಜ್

ನಾಟಕದಲ್ಲಿ ಅಭಿನಯಿಸಲು ಹಪಹಪಿಸುತ್ತಿದ್ದ ಸೂರಜ್

ಮಂಗಳೂರಿನಲ್ಲಿ ಬಾಲ್ಯ ಕಳೆದ ಸೂರಜ್ ಇದೀಗ ಸಿನಿಮಾಗಳಲ್ಲಿ ನಟಿಸುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಟಿಸಬೇಕೆಂಬ ಆಸೆ ಇತ್ತು ಸೂರಜ್‌ಗೆ. ಆದರೆ ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಬಳಿಕ ತಂದೆಯ ಬಳಿ ನಾಟಕದಲ್ಲಿ ಅಭಿನಯ ಮಾಡಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದಾಗ ಒಪ್ಪಿಗೆ ಸೂಚಿಸಿದರು. ಬಳಿಕ 'ಮಾನಸ ಕಲಾವಿದೆರ್' 'ಪರಂಗಿ ಪೇಟೆ' ಇವರ ನಾಟಕ ತಂಡದಲ್ಲಿ ಅಭಿನಯವನ್ನು ಮಾಡಿದರು.

ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟ

ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟ

ಸೂರಜ್ ಜೀವನ ಶುರುವಾಗಿದ್ದೇ ಅಲ್ಲಿಂದ ಪರಂಗಿ ಪೇಟೆಯ ದಿನಕರ್ ಎಂಬುವವರು ರಂಗಭೂಮಿಯಲ್ಲಿ ಅಭಿನಯಿಸಲು ಅವಕಾಶವನ್ನು ನೀಡಿದರು. ಮತ್ತೊಂದು ಅವಕಾಶ ಸಿಕ್ಕಿದ್ದು ಬಲೆ ತೆಲಿಪಲೇ ಎಂಬ ತಂಡದ ಮೂಲಕ ಬಹು ದೊಡ್ಡ ಚಾನ್ಸ್ ಅರಸಿ ಬಂದಿತು. ಬಳಿಕ ಕಲಾ ಸಂಗಮ ಟೀಂಗೆ ಸೇರಿದರು. ಅಲ್ಲಿ ಕೂಡ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಬಳಿಕ ಕಾಮಿಡಿ ಕಿಲಾಡಿ ಸೀಸನ್ 2ಗೆ ಆಯ್ಕೆ ಆದರು ಅಲ್ಲಿಂದ ಸೂರಜ್ ಅವರ ಬದುಕಿನ ಚಿತ್ರಣ ಬದಲಾಯಿತು. ಕಾಮಿಡಿ ಕಿಲಾಡಿಯಲ್ಲಿ ರನ್ನರ್ ಅಪ್ ಆದ ಸೂರಜ್ ಬಳಿಕ ಹಿಂದಿರುಗಿ ನೋಡಿಲ್ಲ.

"ಏಕ್ ಲವ್ ಯಾ" ಚಿತ್ರದಲ್ಲಿ ಸೂರಜ್ ಅಭಿನಯ

ಜೋಗಿ ಪ್ರೇಮ್ ನಿರ್ದೇಶನದ "ಏಕ್ ಲವ್ ಯಾ" ಚಿತ್ರದಲ್ಲಿ ಸೂರಜ್ ಅಭಿನಯಿಸಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾದ ಹೀರೋ. ತಮ್ಮನ ಚೊಚ್ಚಲ ಸಿನಿಮಾವನ್ನು ರಕ್ಷಿತಾ ಅವರೇ ನಿರ್ಮಾಣ ಮಾಡಿದ್ದಾರೆ. ಸೂರಜ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಹೊಸ ನಟರು ಈ ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Suraj called as Jr Bullet Prakash in Tulu movie industry. He performed in many movies and Tulu plays.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X