ಮಿನಿ ಡ್ರೆಸ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ 38 ವರ್ಷದ ನಟಿ ; ಮದುವೆಯಾದ ಒಂದೂವರೆ ವರ್ಷಕ್ಕೆ ಗುಡ್ ನ್ಯೂಸ್

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.

ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ. ಇನ್ನೂ ವಯಸ್ಸಾಗಿದ್ದರಂತೂ ಮುಗಿದೇ ಹೋಯ್ತು. ಗೆದ್ದಲು ಹುಳಗಳಂತೆ ಕೊರೆಯಲು ಶುರು ಮಾಡುತ್ತಾರೆ. ವಯಸ್ಸು ಮೀರುತ್ತಿದೆ, ಫರ್ಟಿಲಿಟಿ ಸಮಸ್ಯೆ ಕಾಡಬಹುದು, ಸಮಾಜ ಏನು ಅಂದುಕೊಳ್ಳಬಹುದು, ಎಂಬ ಭಯದ ವಾತಾವರಣವನ್ನು ನಿರ್ಮಾಣ ಮಾಡ್ತಾರೆ.

Surbhi Jyoti s Internet-Breaking Reveal Flaunts Growing Baby Bump in Viral White Mini Dress

ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ. ಮತ್ತೂ ಕೆಲವೊಮ್ಮೆ ಈ ಟಾರ್ಚರ್ ನಿಂದ ಹೊರ ಬರಲಾದರೂ ರೆಡಿಯಾಗಿದ್ದು ಇದೆ. ಉದಾಹರಣೆಗೆ ಸುರಭಿ ಜ್ಯೋತಿ.

ಹೌದು, ಸುರಭಿ ಜ್ಯೋತಿ.. ಪಂಜಾಬ್‌ನ ಪೋರಿ. ಆರ್.ಜೆ. ಆಗಿ ಕೆಲಸ ಮಾಡುತ್ತಲೇ ಕಿರುತೆರೆ ಪ್ರವೇಶ ಮಾಡಿದ ಸುರಭಿ ಜ್ಯೋತಿ ''ಕಬೂಲ್ ಹೈ'' ಧಾರಾವಾಹಿಯ ಮೂಲಕ ಮನೆ ಮಾತಾದರು. ''ನಾಗಿನ್ 3'' ಧಾರಾವಾಹಿಯ ಮೂಲಕ ಕೀರ್ತಿಯ ಶಿಖರಕ್ಕೇರಿದರು. ''ಇಶ್ಕ್‌ಬಾಜ್''.. ''ಕೋಯಿ ಲೌಟ್ ಕೆ ಆಯಾ ಹೈ''.. ''ಯೇ ಜಾದು ಹೈ ಜಿನ್ ಕಾ''.. ಇವರ ಕೆಲ ಪ್ರಸಿದ್ಧ ಧಾರಾವಾಹಿಗಳು.

ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡ ಸುರಭಿ, ''ಇಕ್ ಕುಡಿ ಪಂಜಾಬ್ ದಿ''.. ''ರೌಲಾ ಪೈ ಗಯಾ''.. ಪಂಜಾಬಿ ಚಿತ್ರಗಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ ''ಕ್ಯಾ ಮೇರಿ ಸೋನಮ್ ಗುಪ್ತಾ ಬೇವಫಾ ಹೈ'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಇಷ್ಟೇ ಅಲ್ಲ ಸುರಭಿ ಜ್ಯೋತಿ 'ಖತ್ರೋನ್ ಕೆ ಖಿಲಾಡಿ 7' ಸೀಸನ್ 7ರ ಸ್ಫರ್ಧಿಯೂ ಹೌದು.

Surbhi Jyoti s Internet-Breaking Reveal Flaunts Growing Baby Bump in Viral White Mini Dress

ಇಂಥಾ ಸುರಭಿ ಜ್ಯೋತಿ ತಮ್ಮ 38ನೇ ವರ್ಷದಲ್ಲಿ ಸದ್ಯ ಗರ್ಭಿಣಿಯಾಗಿದ್ದಾರೆ. ಮಿನಿ ಡ್ರೆಸ್‌ನಲ್ಲಿ ಬೇಬಿ ಬಂಪ್ ಪ್ರದರ್ಶನ ಮಾಡಿದ್ದಾರೆ. ಸದ್ಯ ಸುರಭಿ ಜ್ಯೋತಿ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಫೋಟೋಗಳಿಗೆ ಕೇವಲ 17 ಗಂಟೆಯಲ್ಲಿ ಈಗಾಗಲೇ ಎರಡೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಇವು ಕೇವಲ ಫೋಟೊಗಳಲ್ಲ, ಭಾವನೆಗಳ ಪ್ರತಿಬಿಂಬ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಈ ನಗು ಮತ್ತು ಮುಖದ ಹೊಳಪು ಹೃದಯಕ್ಕೆ ನಾಟುವಂತಹದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸಹ ಕಲಾವಿದರು ಕೂಡ ಸುರಭಿಗೆ ಶುಭಾಶಯ ಕೋರುತ್ತಿದ್ದಾರೆ.

ಅಂದ್ಹಾಗೇ ಸುರಭಿ ಜ್ಯೋತಿ ಅವರಿಗೆ ಈಗ ಆರು ತಿಂಗಳು. ಜೂನ್‌ನಲ್ಲಿ ತಮ್ಮ ಮನೆಗೆ ಹೊಸ ಅತಿಥಿಯನ್ನು ಸುರಭಿ ಬರ ಮಾಡಿಕೊಳ್ಳಲಿದ್ದಾರೆ. ಇನ್ನುಳಿದಂತೆ ಸುರಭಿ ಜ್ಯೋತಿ ಅಕ್ಟೋಬರ್ 27, 2024ರಂದು ಸುಮಿತ್ ಸೂರಿ ಜೊತೆ ಸಪ್ತಪದಿ ತುಳಿದಿದ್ದರು. ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ ಇವರ ಅದ್ಧೂರಿ ಮದುವೆಗೆ ಸಾಕ್ಷಿಯಾಗಿತ್ತು. ಸುಮಿತ್ ಕೂಡ ವೃತ್ತಿಯಲ್ಲಿ ನಟ. ಇಷ್ಟೇ ಅಲ್ಲ ನಿರ್ಮಾಪಕ ಕೂಡ ಹೌದು. ''ಹಾ ಕೆ ಸಾತ್'' ಎಂಬ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಇಬ್ಬರ ಪರಿಚಯವಾಗಿತ್ತು. ಇಲ್ಲಿಂದ ಶುರುವಾದ ಇವರ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. ಈಗ ಇಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದಾರೆ.

More from Filmibeat

English summary
Adorable alert! Surbhi Jyoti is a vision in white as she proudly displays her growing baby bump. Discover how the actress is redefining maternity fashion with her latest viral look and read more about her and Sumit Suri's exciting new chapter.
Read more about: pregnancy pregnant ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X