twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಪ್ರಕರಣ: ರಿಪಬ್ಲಿಕ್ ಟಿವಿ, ಇಂಡಿಯಾ ಟಿವಿ ವರದಿ ಬಗ್ಗೆ ಸುಪ್ರೀಂ ಅಸಮಾಧಾನ

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ದೇಶದ ಗಮನ ಸೆಳೆದಿತ್ತು. ಮಾಧ್ಯಮಗಳಂತೂ ತಿಂಗಳಾನುಗಟ್ಟಲೆ ಈ ಕುರಿತು ಸುದ್ದಿಗಳನ್ನು ಪ್ರಸಾರ ಮಾಡಿತು.

    ಕೆಲವು ಟಿವಿ ಮಾಧ್ಯಮಗಳಂತೂ ಕೊಲೆಯ ತನಿಖೆ ನಡೆಸಿ ತೀರ್ಪನ್ನೂ ನೀಡಿ ರಿಯಾ ಚಕ್ರವರ್ತಿ ಮತ್ತಿತರರನ್ನು ಅಪರಾಧಿಗಳೆಂದು ನಿರ್ಣಯಿಸಿಬಿಟ್ಟವು. ರಿಯಾ ಅನ್ನು ಬಂಧಿಸಬೇಕು ಎಂದು ಸ್ವತಃ ರಿಪಬ್ಲಿಕ್ ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಅರಚಾಡಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ಮಾಧ್ಯಮಗಳ ವರದಿಗಳು ಪ್ರಾಥಮಿಕ ಸಾಕ್ಷ್ಯಗಳನ್ನು ತಿರಸ್ಕರಿಸಿ ಮಾಡಿದ ವರದಿಗಳು ಎಂದು ಹೇಳಿದೆ. ಆದರೆ ಆ ಮಾಧ್ಯಮಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರಾಕರಿಸಿದೆ ಬಾಂಬೆ ಹೈಕೋರ್ಟ್.

     Sushant Singh Case: High Court Unhappy With Republic Tv And Times Now Reporting

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, 'ಅಪರಾಧದ ದೃಶ್ಯಗಳ ಪುನರ್ನಿರ್ಮಾಣ, ಸಂಭಾವ್ಯ ಸಾಕ್ಷಿಗಳ ಸಂದರ್ಶನ, ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುವುದನ್ನು ಮಾಧ್ಯಮಗಳು ಮಾಡಬಾರದು' ಎಂದಿದ್ದಾರೆ.

    ಅಪರಾಧ ಪ್ರಕರಣ ಕುರಿತಾಗಿ ಮಾಧ್ಯಮ ಸಂವಾದಗಳು, ವಿಶೇಷ ಸಂದರ್ಶನಗಳನ್ನು ಮಾಧ್ಯಮಗಳು ಮಾಡಬಾರದು ಎಂದು ಸಹ ಹೈಕೋರ್ಟ್ ಹೇಳಿದೆ.

    ಸುಶಾಂತ್ ಸಿಂಗ್ ಪ್ರಕರಣದ ವರದಿ ಮಾಡುವಾಗ ಮಾಧ್ಯಮಗಳು ಸಂಯಮದಿಂದ ವರದಿ ಮಾಡಬೇಕು ಎಂದು ಈ ಹಿಂದೆ ಸಹ ಬಾಂಬೆ ಹೈಕೋರ್ಟ್ ಸೂಚಿಸಿತ್ತು.

    English summary
    Bombay high court express unhappyness on Republic TV and Times Now about their reporting on Sushanth Singh case.
    Monday, January 18, 2021, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X