Sushma K Rao: ಕನಸೋ ಇದು.. ನನಸೋ ಇದು; ಭಾಗ್ಯ ಏನಿದು? ಅಂತಿದ್ದಾರೆ ನೆಟ್ಟಿಗರು!

By ಎಸ್ ಸುಮಂತ್

ಇತ್ತೀಚೆಗೆ ಯುಗಾದಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಯ್ತು. ಇನ್ನು ಸೀರಿಯಲ್‌ನಲ್ಲೂ ಸಂಸಾರಗಳು ಇರುವುದರಿಂದ ಹಬ್ಬದ ದಿನ ತೆರೆಮೇಲೂ ಸಂಭ್ರಮಾಚರಣೆ ಜೋರಾಗಿಯೇ ಇರುತ್ತದೆ. ಅದರಲ್ಲೂ ಕುಸುಮಾ ಮನೆ ಒಡೆದು ಎರಡು ಭಾಗವಾಗಿದೆ. ಹಾಗಂತ ಹಬ್ಬವನ್ನೇನು ಬಿಟ್ಟಿಲ್ಲ. ಸೌಕರ್ಯವಿದ್ದಷ್ಟೇ ಬಳಸಿಕೊಂಡು ಖುಷಿಯಾಗಿ ಹಬ್ಬ ಮಾಡಿದ್ದಾರೆ.

ತಾಂಡವ್ ಒಂದು ಕಡೆ, ಕುಸುಮಾ ಅಂಡ್ ಫ್ಯಾಮಿಲಿ ಮತ್ತೊಂದು ಕಡೆ. ಮಗ ತನ್ನ ತಪ್ಪನ್ನು ಅರ್ಥ ಮಾಡಿಕೊಂಡು ಮತ್ತೆ ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾನೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಅದು ಸುಳ್ಳಾಗಿದೆ. ಇನ್ನು ಜಿದ್ದಿಗೆ ಬಿದ್ದಿದ್ದಾನೆ. ಇದರ ನಡುವೆ ಯಾರೂ ನೋಡಿರದ ವಿಡಿಯೋವೊಂದನ್ನು ಭಾಗ್ಯಾ ಹಂಚಿಕೊಂಡಿದ್ದಾರೆ.

Sushma K Rao shares Bhagyalakshmi serial BTS video

ಎಣ್ಣೆ ಸ್ನಾನಕ್ಕೆ ತಾಂಡವ್ ಸಿದ್ಧತೆ

ಭಾಗ್ಯಾ ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ಆಗಾಗ ಅಲ್ಲಲ್ಲಿ ಟ್ರಿಪ್ ಹೋಗುತ್ತಾ ಇರುತ್ತಾರೆ ಭಾಗ್ಯಾ ಅಲಿಯಾಸ್ ಸುಷ್ಮಾ. ಅಲ್ಲಿನ ವಿಶೇಷತೆಗಳನ್ನೆಲ್ಲ ಸೆರೆ ಹಿಡಿದು ಪ್ರೇಕ್ಷಕರಿಗೂ ತೋರಿಸುತ್ತಾ ಇರುತ್ತಾರೆ. ಇದೀಗ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದುವೇ ತಾಂಡವ್ ತಲೆಗೆ ಎಣ್ಣೆ ಹಚ್ಚುತ್ತಾ ಇರುವ ವಿಡಿಯೋ ಅದು.

ಧಾರಾವಾಹಿ ಭಾಗವೇ ಹೌದು

ಎಣ್ಣೆ ಸ್ನಾನ ಮಾಡುವುದು ಯುಗಾದಿ ಹಬ್ಬದ ದಿನವೇ ಸರಿ. ಆದರೆ ಈ ಯುಗಾದಿಯಂದು ಕುಸುಮಾ ಮನೆಯಲ್ಲಿ ಈ ರೀತಿಯ ಸಂತಸದ ದಿನಗಳೇನು ಕಾಣಲಿಲ್ಲ. ತಾಂಡವ್ ಉರಿದುರಿದು ಬೀಳುತ್ತಿದ್ದ. ಆದರೆ ಇದು ಶೂಟಿಂಗ್‌ಗಾಗಿಯೇ ತೆಗೆದ ಶಾಟ್ಸ್ ಆಗಿದೆ. ಯಾಕಂದ್ರೆ ಅಲ್ಲಿ ಲೈಟ್, ಕ್ಯಾಮರಾ, ಥರ್ಮಾಕೋಲ್ ದರ್ಶನವೂ ಕಾಣಿಸುತ್ತಿದೆ. ಅಷ್ಟೇ ಅಲ್ಲ ರಿಟೇಕ್ ಕೂಡ ಆಗಿದೆ. ಸೀರಿಯಸ್ ಆಗಿ ಏನೋ ಹೇಳುವಾಗ ಭಾಗ್ಯಾ ನಕ್ಕಿದ್ದಾರೆ. ಅಲ್ಲಿನ ಎಲ್ಲಾ ವಾತಾವರಣ ನೋಡಿದರೆ ಅದು ಧಾರಾವಾಹಿಯ ಒಂದು ಭಾಗವೇ ಎಂಬುದು ಅರ್ಥವಾಗುತ್ತದೆ.

Sushma K Rao shares Bhagyalakshmi serial BTS video

ಏನಿದು ನೀವೂ ಎಂದ ನೆಟ್ಟಿಗರು

ಇದು ಧಾರಾವಾಹಿಗೋಸ್ಕರವೇ ಶೂಟ್ ಮಾಡಿದ್ದರೆ ಹಬ್ಬದ ದಿನವೇ ಇದನ್ನ ಪ್ರಸಾರ ಮಾಡಬೇಕಿತ್ತು. ಯಾಕಂದ್ರೆ ಇದು ಎಣ್ಣೆಯ ಸ್ನಾನವಾಗಿದೆ. ಪ್ರಸಾರ ಮಾಡದೇ ಈ ದೃಶ್ಯವನ್ನ ಏನು ಮಾಡಿದ್ರಿ ಅಂತಿದ್ದಾರೆ ನೆಟ್ಟಿಗರು. ಇನ್ನು ಹಲವರು ಇದು ಕನಸಿನ ದೃಶ್ಯವಿರಬೇಕು. ಯಾರು ಕಾಣುವ ಕನಸಿದು ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಇನ್ನು ಈ ದೃಶ್ಯ ಪ್ರಸಾರವಾಗುವುದು ಯಾವಾಗ ಎಂದು ಕೇಳುತ್ತಿದ್ದಾರೆ.

ರಿಯಲ್ ಭಾಗ್ಯಾ ಫುಲ್ ಜಾಲಿ

ಭಾಗ್ಯಾ ಧಾರಾವಾಹಿಯಲ್ಲಿ ಮಾತ್ರ ಸೈಲೆಂಟ್. ಆಗಾಗ ವೈಲೆಂಟ್ ಕೂಡ ಆಗುತ್ತಾರೆ. ಎಲ್ಲವನ್ಜು ಸಹಿಸಿಕೊಂಡು, ಮಕ್ಕಳ ಭವಿಷ್ಯ, ಅತ್ತೆ ಮಾವನ ಕಾಳಜಿ ಮಾಡುವ ಭಾಗ್ಯಾಳಿಗೆ ಟ್ರಿಗರ್ ಮಾಡುವುದೇ ತಾಂಡವ್. ಟ್ರಿಗರ್ ಆದಾಗ ಭಾಗ್ಯಾಳ ಕೋಪದ ಮುಖವೇ ಬೇರೆ ಥರ ಇರುತ್ತೆ. ಆದರೆ ಭಾಗ್ಯಾ ರಿಯಲ್ ಲೈಫ್‌ನಲ್ಲಿ ಫುಲ್ ಜಾಲಿ.

ರಿಯಾಲಿಟಿ ಶೋನಲ್ಲೂ ಬ್ಯುಸಿ

ಭಾಗ್ಯಾ ಪಾತ್ರಧಾರಿ ಸುಷ್ಮಾ ಕೆ. ರಾವ್ ಸದಾ ನಗುಮುಖದಲ್ಲಿರುವ ಚೆಲುವೆ. ತಾನು ನಗುತ್ತಾ, ತನ್ನ ಜೊತೆಗಿರುವವರನ್ನು ನಗಿಸುತ್ತಾ ಇರುತ್ತಾರೆ. ಅವರೆಷ್ಟು ಪಾಸಿಟಿವ್ ಗುಣಗಳನ್ನು ತುಂಬಿಕೊಂಡಿರುವ ವ್ಯಕ್ತಿ ಎಂಬುದಕ್ಕೆ ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಗೊತ್ತಾಗುತ್ತದೆ. ಸದ್ಯ ಧಾರಾವಾಹಿ ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಆಂಕರ್ ಕೂಡ ಆಗಿದ್ದಾರೆ.

More from Filmibeat

English summary
Bhagyalakshmi serial Written Update; Sushma K Rao shares serial making fun video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X