ಜಿಮ್ ಸೀನನಾಗಿ ಬಂದ ಸುಷ್ಮಿತ್ ಜೈನ್; ಎಂಜಿನಿಯರಿಂಗ್ ಪದವೀಧರನಾಗಿರುವ ಈ ನಟನ ಹಿನ್ನೆಲೆಯೇನು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದ ಸುಷ್ಮಿತ್ ಜೈನ್ ಇದೀಗ ಜಿಮ್ ಸೀನನಾಗಿ ಬದಲಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ 'ಅಣ್ಣಯ್ಯ' ದಲ್ಲಿ ಜಿಮ್ ಸೀನನ ಪಾತ್ರದಲ್ಲಿ ಸುಷ್ಮಿತ್ ಜೈನ್ ಕಾಣಿಸಿಕೊಂಡಿದ್ದಾರೆ.

"ನಾನು ಜಿಮ್ ಸೀನನಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇನೆ. ಇದು ತುಂಬಾ ಮಜವಾಗಿರುವಂತಹ ಪಾತ್ರ. ನಟಿಸುವುದಕ್ಕೂ ಅಷ್ಟೇ ಮಜವಿದೆ. ಜನ ಜಿಮ್ ಸೀನನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಣ್ಣಯ್ಯ ಧಾರಾವಾಹಿಯ ನಿರ್ದೇಶಕ ಮಧು ಅವರು ನನಗೆ ಸಾಕಷ್ಟು ಸ್ವಾತಂತ್ರ್ಯ ಕೊಟ್ಟು, ಜಿಮ್ ಸೀನನ ಪಾತ್ರಕ್ಕೆ ಜೀವ ತುಂಬುವಂತೆ ಸಹಕರಿಸುತ್ತಿದ್ದಾರೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ಸುಷ್ಮಿತ್ ಜೈನ್ ಹೇಳಿಕೊಂಡಿದ್ದಾರೆ.

Sushmith Jain is back on serial as Gym Seena in the Zee Kannada serial Annayya

"ನಾನು ಇಲ್ಲಿಯ ತನಕ ನಟಿಸಿರುವಂತಹ ಎಲ್ಲಾ ಧಾರಾವಾಹಿಗಳಲ್ಲಿ, ಎಲ್ಲಾ ಪಾತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ. ಇನ್ನು ಒಂದೇ ತರಹದ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಾನು ಒಪ್ಪುತ್ತಿರಲಿಲ್ಲ. ಯಾಕೆಂದರೆ ಅಭಿನಯಿಸುವ ಪ್ರತಿ ಪಾತ್ರವೂ ವಿಭಿನ್ನವಾಗಿರಬೇಕು ಎಂಬುದು ನನ್ನ ಆಸೆ. ಅಣ್ಣಯ್ಯ ಧಾರಾವಾಹಿ, ಅದರಲ್ಲಿನ ಜಿಮ್ ಸೀನನ ಪಾತ್ರ ನನ್ನನ್ನು ನೆಕ್ಸ್ಟ್ ಲೆವಲ್‌ಗೆ ಕರೆದುಕೊಂಡು ಹೋಗಲಿದೆ ಎಂಬುದು ನನ್ನ ನಂಬಿಕೆ" ಎಂದು ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಸುಷ್ಮಿತ್ ಜೈನ್ ಹಂಚಿಕೊಂಡಿದ್ದಾರೆ.

"ಆರಂಭದಲ್ಲಿ ನಾನು ಜಿಮ್ ಸೀನನ ಪಾತ್ರಕ್ಕೆ ಸರಿ ಹೊಂದುತ್ತೇನೋ ಇಲ್ಲವೋ ಎಂಬ ಅಳುಕು ನನಗಿತ್ತು. ಯಾಕೆಂದರೆ ನನ್ನನ್ನು ನೋಡಿದರೆ ನಾನು ಬಾಡಿ ಬಿಲ್ಡರ್ ಎಂದು ಯಾರಿಗೂ ಅನಿಸುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಪಾತ್ರವನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಂಡಾಗ ಖುಷಿಯಾಯಿತು. ಪಾಸಿಟಿವ್ ಆದ ಕಮೆಂಟ್‌ಗಳು ಬಂದಾಗ ಖುಷಿಯಾಯ್ತು. ನಟಿಸಬಹುದು ಎಂಬ ಕಾನ್ಫಿಡೆನ್ಸ್ ಕೂಡಾ ಬಂತು" ಎಂದು ಜಿಮ್ ಸೀನನ ಪಾತ್ರದ ಬಗ್ಗೆ ಸುಷ್ಮಿತ್ ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಸುಷ್ಮಿತ್ ಜೈನ್ ಅವರು 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯ ಸ್ಯಾಂಡಿ ಆಲಿಯಾಸ್ ಸುಂದರನಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಪೋಷಕ ಪಾತ್ರದ ಮೂಲಕ ಬಣ್ಣದ ನಂಟು ಬೆಳೆಸಿಕೊಂಡಿರುವ ಸುಷ್ಮಿತ್ ಜೈನ್ ಮುಂದೆ "ಭೂಮಿ ತಾಯಾಣೆ" ಧಾರಾವಾಹಿಯಲ್ಲಿ ನಾಯಕನಾಗಿ ಭಡ್ತಿ ಪಡೆದರು.

Sushmith Jain is back on serial as Gym Seena in the Zee Kannada serial Annayya

'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಖಳನಾಯಕನಾಗಿ ಸುಷ್ಮಿತ್ ಜೈನ್ ನಟಿಸಿದ್ದರು. ಅದರಲ್ಲಿ ಮೊದಲ ಬಾರಿ ನಾನು ವಿಲನ್ ಆಗಿ ಕಾಣಿಸಿಕೊಂಡಿದ್ದು. ನನಗೆ ವಿಲನ್ ಪಾತ್ರದಲ್ಲಿ ನಟಿಸಲು ತುಂಬಾ ಇಷ್ಟ. ಹೀರೋಗೆ ವಿರುದ್ಧವಾದ ಪಾತ್ರವದು. ಖಡಕ್ ಆಗಿ ಅಬ್ಬರಿಸುವ ಖಳನಾಯಕನಿದ್ದರೆ ನಾಯಕನ ಪಾತ್ರಕ್ಕೆ ಒಂದು ಬೆಲೆ. ಹಾಗಾಗಿ ನಾನು ಖಳನಾಯಕನ ಪಾತ್ರ ಸಿಕ್ಕಾಗ ಸಂತಸದಿಂದಲೇ ಒಪ್ಪಿಕೊಂಡೆ ಎಂದು ಈ ಹಿಂದೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಸ್ವತಃ ಸುಷ್ಮಿತ್ ಜೈನ್ ಅವರು ಹಂಚಿಕೊಂಡಿದ್ದರು.

'ದೊರೆಸಾನಿ' ಧಾರಾವಾಹಿಯಲ್ಲಿ ಚಿನ್ಮಯ್ ಎನ್ನುವ ಅತಿಥಿ ಪಾತ್ರಕ್ಕೆ ಜೀವ ತುಂಬಿದ್ದ ಸುಷ್ಮಿತ್‌ಗೆ ಆ ಪಾತ್ರವೂ ಜನಪ್ರಿಯತೆ ನೀಡಿತ್ತು ಎಂಬುದು ಸುಳ್ಳಲ್ಲ. ಇದೀಗ ಜಿಮ್ ಸೀನನಾಗಿ ಮಗದೊಮ್ಮೆ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಸುಷ್ಮಿತ್ ಜೈನ್ ರಘುಚರಣ್ ಅವರ 'ವರ್ಜಿನ್' ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Sushmith Jain is back on serial as Gym Seena in the zee kannada serial Annayya:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X