ಹೀರೋ ಪಾತ್ರವೇ ಬೇಡ ಎಂದಿದ್ದ ಸುಷ್ಮಿತ್, ಜಿಮ್ ಸೀನನಾಗಿ ಆಯ್ಕೆಯಾಗಿದ್ದೇಗೆ ಗೊತ್ತಾ?
ಈಗಂತು 'ಅಣ್ಣಯ್ಯ' ಧಾರಾವಾಹಿ ವೀಕ್ಷಕರಿಗೆ ಖುಷಿ ಅಂದ್ರೆ ಖುಷಿ. ವೀಕ್ಷಕರ ಮನಸ್ಸಿಗೆ ಮುದ ನೀಡುತ್ತಿರುವುದು ಜಿಮ್ ಸೀನ ಹಾಗೂ ರಶ್ಮಿ ಮದುವೆ. ಈ ಮೊದಲೆಲ್ಲಾ ಅಣ್ಣಯ್ಯನ ತಂಗಿಯಂದಿರಿಂದ ಆಗಾಗ ಒಳ್ಳೊಳ್ಳೆ ಮೆಸೇಜ್, ಒಂದು ಸ್ವಲ್ಪ ಮನರಂಜನೆ ಸಿಕ್ತಾ ಇತ್ತು. ಆದ್ರೆ ರಶ್ಮಿ ಮದುವೆ ಆದಾಗಿನಿಂದ ಬರಪೂರ ಸಂತಸ ಕಾಣಿಸ್ತಾ ಇದೆ.
ಶಿವು ಹಾಗೂ ಪಾರ್ವತಿಯದ್ದು ರೊಮ್ಯಾಂಟಿಕ್ ಸೀನ್‌ಗಳು ಪಡ್ಡೆ ಹೈಕ್ಳ ನಿದ್ದೆ ಕೆಡಿಸಿದ್ರೆ, ಸೀನ ಹಾಗೂ ರಶ್ಮಿ ನಡುವಿನ ದಾಂಪತ್ಯ ಎಲ್ಲರ ಹೊಟ್ಟೆ ಉಣ್ಣಾಗಿಸುವಂತಿದೆ. ಆ ಇಬ್ಬರ ನಡುವಿನ ಜಗಳ ನೋಡೋದಕ್ಕೇನೆ ಒಂದಷ್ಟು ಜನ 'ಅಣ್ಣಯ್ಯ' ಸೀರಿಯಲ್ ಕಡೆಗೆ ಶಿಫ್ಟ್ ಆಗಿ ಬಿಟ್ಟಿದ್ದಾರೆ. ಜಿಮ್ ಸೀನ ಈ ಸೀರಿಯಲ್ ಆಡಿಷನ್ ಕೋಡೋದಕ್ಕೆ ಬಂದಾಗ ಆದ ಅನುಭವವನ್ನ 'Its majja Kannada' ಯೂಟ್ಯೂಬ್ ಚಾನೆಲ್ ಜೊತೆಗೆ ಹಂಚಿಕೊಂಡಿದ್ದಾರೆ.

ಸುಷ್ಮಿತ್, ಜಿಮ್ ಸೀನ ಆಗಿದ್ದೇಗೆ..?
ಜಿಮ್ ಸೀನಾ ಸ್ಕ್ರೀನ್ ಟೆಸ್ಸ್‌ಗೆ ಹೋಗಿಲ್ಲ. ನಾನು ಹೋಗಿದ್ದ ಯಾವುದೋ ಒಂದು ಬೇರೆ ಪಾತ್ರಕ್ಕೆ. ನಾನು ಇನ್ಮೇಲೆ ಹೀರೋ ಪಾತ್ರವನ್ನ ಮಾಡಬಾರದು ಅಂತ ನಿರ್ಧರಿಸಿದ್ದೆ. ಯಾಕಂದ್ರೆ ಆಲ್ ರೆಡಿ ಏಳು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನೇ ಮಾಡಿದ್ದೆ. ಅದೇ ರೀತಿ ಮುಂದುವರೆದರೆ ಸಿನಿಮಾಗಳಲ್ಲಿ ಅಭಿನಯಿಸೋದಕ್ಕೆ ಆಗಲ್ಲ ಅನ್ನೋ ಕಾರಣಕ್ಕೆ, ಬೇರೆ ಬೇರೆ ಪಾತ್ರ ಮಾಡಿದರೆ ಸಿನಿಮಾಗಳಿಗೆ ಸಮಯ ಸಿಗುತ್ತೆ ಎಂಬ ಕಾರಣಕ್ಕೆ ಹೀರೋ ಬೇಡ ಅಂತ ಸುಮ್ಮನಾಗಿದ್ದೆ. ರಾಘವೇಂದ್ರ ಹುಣಸೂರು ಸರ್ ತಲೆಯಲ್ಲಿ ನನ್ನ ಜಿಮ್ ಸೀನ ಪಾತ್ರ ಮಾಡಿಸಬೇಕು ಅಂತ ಇತ್ತು. ಅದು ಆಯ್ತು.
ಜಿಮ್ ಸೀನನ ಹಿನ್ನೆಲೆ ಇಲ್ಲಿದೆ
ಎಸ್ಎಸ್ಎಲ್‌ಸಿಯಲ್ಲಿ ಎರಡು ಸಲ ಡುಮ್ಕಿ ಹೊಡೆದಿದ್ದೀನಿ. ಕಾಲೇಜು ಮುಗಿಸಿ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದೀನಿ. ಸ್ಕೂಲ್, ಕಾಲೇಜಲ್ಲೆಲ್ಲಾ ನೀನ್ಯಾಕೆ ಹೀರೋ ಆಗಬಾರದು ಅಂತ ಫ್ರೆಂಡ್ಸ್ ಎಲ್ಲಾ ಹೇಳ್ತಾ ಇದ್ರು. ನಾನು ಕೂಡ ಆಗ ಅಂದುಕೊಂಡಿದ್ದೆ ಅಲ್ಪಸ್ವಲ್ಪ ಬಾಡಿ ಇದ್ರೆ, ಬ್ಯೂಟಿ ಇದ್ರೆ ಸೆಲೆಕ್ಟ್ ಆಗಿ ಬಿಡ್ತೀವಿ ಅಂತ. ಆಗ ಗೊತ್ತಾಯ್ತು ಅದು ಸಾಧ್ಯವಿಲ್ಲ. ಅದಕ್ಕೆ ಒಂದಷ್ಟು ತರಬೇತಿ ಪಡೆಯಬೇಕು ಅಂತ. ಕಲಿತು, ಸ್ಕ್ರೀನ್ ಟೆಸ್ಟ್ ಮೂಲಕ ಶುರು ಮಾಡಿದೆ.
ಜಿಮ್ ಸೀನನ ಕನಸು ಏನಾಗಿತ್ತು?
ಚಪ್ಪಲಿ ಅಂಗಡಿ ಇಟ್ಟರು ಪರವಾಗಿಲ್ಲ ಒಬ್ಬ ಓನರ್ ಆಗ್ತಾ ಇದ್ದೆ. ಇದೇ ಮಾಡಬೇಕು ಅಂತ ಫಿಕ್ಸ್ ಆಗಿರಲಿಲ್ಲ. ಹೊಟೇಲ್ ಮಾಡಬೇಕು ಎಂಬ ಆಸೆ ಇತ್ತು ಆದರೆ ಅದರ ಬಗ್ಗೆ ಜೀರೋ ನಾಲೆಡ್ಜ್ ಇತ್ತು. ಕೈ ಸುಟ್ಟುಕೊಳ್ಳಬಾರ್ಉ ಅಂತ ಆ ಆಸೆ ಬಿಟ್ಟೆ. ನಟನೆ ಆಸಕ್ತಿ ಇದ್ದ ಕಾರಣ ಇದರಲ್ಲಿಯೇ ಮುಂದುವರೆದೆ.
ಸುಷ್ಮಿತ್ ಎಂಗೇಜ್ಡ್..!
ಇನ್ನು ಇದೇ ಸಂದರ್ಶನದಲ್ಲಿ ಸುಷ್ಮಿತ್ ಬಗ್ಗೆ ಒಂದಷ್ಟು ವಿಚಾರಗಳು ರಿವೀಲ್ ಆಗಿದ್ದು, ಸುಷ್ಮಿತ್ ಅಲಿಯಾಸ್ ಜಿಮ್ ಸೀನನಿಗೆ ಫ್ರೆಂಡ್ಸ್ ಇದ್ರೆ ಸಾಕಂತೆ. ಫ್ಯಾಮಿಲಿಯನ್ನ ಮರೆತೆ ಬಿಡ್ತಾರಂತೆ. ಹಾಗೇ ಲವ್ವರ್ ಕೂಡ ಇದ್ದು ನನ್ನ ಹುಡುಗ ಇಷ್ಟೊಂದು ಚೆನ್ನಾಗಿ ಆಕ್ಟ್ ಮಾಡ್ತಾ ಇದಾನೆ. ಎಲ್ಲರೂ ಹೊಗಳುತ್ತಾರೆ ಎಂಬ ಖುಷಿ ಅವರಿಗೆ ಇದೆಯಂತೆ. ಆದರೆ ಇಷ್ಟು ಓಪನ್ ಆಗಿ ಲವ್ವರ್ ಇದಾರೆ ಅಂತ ಹೇಳಿದ್ದಕ್ಕೂ ಒಂದು ಕಾರಣವಿದೆ. ಲವ್ವರ್ ಇಲ್ಲ ಅಂತ ಹೇಳಿ ಸುಮಾರು ಜನರನ್ನ ಖುಷಿ ಪಡಿಸೋದಕ್ಕಿಂತ ಲವ್ವರ್ ಇದಾಳೆ ಅಂತೇಳಿ ಒಬ್ಬರನ್ನ ಖುಷಿ ಪಡೀಸೋದೆ ಚೆಂದವಂತೆ.


Click it and Unblock the Notifications











