ಬಿಬಿಕೆ2 ಮನೆಯಿಂದ ಮಯೂರ್ ಔಟ್, ಅನುಪಮ ಸೇಫ್
ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಸ್ಪರ್ಧಿ ನಟ ಮಯೂರ್ ಪಟೇಲ್ ನಿರೀಕ್ಷೆಯಂತೆ ಮನೆಯಿಂದ ಹೊರಬಿದ್ದಿದ್ದಾರೆ. ಐದನೇ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಎಲಿಮಿನೇಷನ್ ನಾಟಕದಲ್ಲಿ ಮನೆಯಿಂದ ಹೊರ ನಡೆದಿದ್ದ ನೀತೂ ಶೆಟ್ಟಿ ಈಗ ಮನೆಗೆ ಪುನಃ ಎಂಟ್ರಿ ಕೊಟ್ಟಿದ್ದಾರೆ. ಮಯೂರ್ ಅವರು ಆರುವಾರಗಳ ತಮ್ಮ ವಾಸ್ತವ್ಯವನ್ನು ಅಂತ್ಯಗೊಳಿಸಿ ಹೊರ ಬಂದಿದ್ದಾರೆ.
ಐದನೇ ವಾರದ ಕೊನೆಗೆ ನೀತೂ ಶೆಟ್ಟಿ ಎಲಿಮಿನೇಟ್ ಆದರೂ ಮನೆಯ ಇನ್ನೊಂದು ರಹಸ್ಯ ಕೋಣೆಯಲ್ಲಿ ಕೂತು ಮನೆಯೊಳಗಿನ ನಾಟಕವನ್ನು ನೋಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಜೊತೆಗೆ ಈ ಮುಂಚೆ ಎರಡೇ ವಾರಕ್ಕೆ ಮನೆಯಿಂದ ಹೊರ ಹೋಗಿದ್ದ ಹರ್ಷಿಕಾ ಪೂಣಚ್ಚ ರೀ ಎಂಟ್ರಿ ಪಡೆದುಕೊಂಡಿದ್ದರು. [ಮನೆಗೆ ಹರ್ಷಿಕಾ ಪೂಣಚ್ಚ ರೀ ಎಂಟ್ರಿ]
ಭಾರಿ ಕುತೂಹಲ ಕೆರಳಿಸಿದ ಈ ವಾರದ ನಾಮಿನೇಷನ್ ಪ್ರಕ್ರಿಯೆ, ನಿರೀಕ್ಷಿತ ಎಲಿಮಿನೇಷನ್ ನಲ್ಲಿ ಮುಕ್ತಾಯ ಕಂಡಿದೆ. ಆದರೆ, ಪ್ರೇಕ್ಷಕರು ಹಾಗೂ ಸ್ಪರ್ಧಿಗಳಲ್ಲಿ ಕುತೂಹಲ ಹುಟ್ಟಿಸಲು ನಿರೂಪಕ ಕಿಚ್ಚ ಸುದೀಪ್ ಅವರು ಈ ವಾರ ಎರಡು ಎಲಿಮಿನೇಷನ್ ಎಂಬಂಥ ವಾತಾವರಣ ಸೃಷ್ಟಿಸಿದ್ದರು. ಹೀಗಾಗಿ ಶ್ವೇತಾ, ಅನುಪಮ ಹಾಗೂ ಮಯೂರ್ ಮನದಲ್ಲಿ ಕೊನೆ ಕ್ಷಣದ ತನಕ ಆತಂಕ ಮನೆ ಮಾಡಿತ್ತು. ಆದರೆ, ಅಂತ್ಯ ಮಾತ್ರ ನಿರೀಕ್ಷಿತವಾಗಿತ್ತು.

ಅನುಪಮ ಭಟ್ ಸೇಫ್ ಎನ್ನುತ್ತಿದ್ದಂತೆ
ಅನುಪಮ ಭಟ್ ಸೇಫ್ ಎಂದು ಸುದೀಪ್ ಹೇಳುತ್ತಿದ್ದಂತೆ ಎಲಿಮಿನೇಟ್ ಆಗುವುದು ಮಯೂರ್ ಎಂದು ವೇದ್ಯವಾಗಿಬಿಟ್ಟಿತು.ಆರು ವಾರಗಳ ಮನೆಯಲ್ಲಿ ಆಗಾಗ ಎಲ್ಲಾ ಕಿರಿಕ್ ಗಳಲ್ಲೂ ಪೋಷಕ ಪಾತ್ರ ನಿರ್ವಹಿಸುತ್ತಿದ್ದ ಮಯೂರ್ ಮನೆಯಿಂದ ಹೊರ ನಡೆದರು.
ಮೊದಲಿನಿಂದಲೇ ಲೀಡ್ ರೋಲ್ ಪಡೆದುಕೊಂಡಿದ್ದರೆ ಮಯೂರ್ ಇನ್ನೊಂದಿಷ್ಟು ವಾರ ಹಾಯಾಗಿ ತಿಂದುಂಡು ಕಾಲದೂಡಬಹುದಾಗಿತ್ತು. ಟಾಸ್ಕ್ ಇರಲಿ, ಕಿರಿಕ್ ಇರಲಿ ಮಯೂರ್ ನಿರ್ವಹಿಸಿದ್ದು ಪೋಷಕ ಪಾತ್ರ ಮಾತ್ರ. ಅದೇ ಅವರನ್ನು ಮನೆಯಿಂದ ಹೊರಕ್ಕೆ ನಡೆಯುವಂತೆ ಮಾಡಿದೆ.

ಶ್ವೇತಾ ಇಲ್ಲದ ಬಿಗ್ ಬಾಸ್ ಮನೆ?
ಶ್ವೇತಾ ಇಲ್ಲದ ಮನೆಯ ಸದ್ಯಕ್ಕಂತೂ ಊಹಿಸಲು ಸಾಧ್ಯವಿಲ್ಲ. ಕಾರಣ ಇರುವ ಮಹಿಳಾ ಸ್ಪರ್ಧಿಗಳ ಪೈಕಿ ಶ್ವೇತಾ ಒಂದು ಕಡೆಯಾದರೆ ಮಿಕ್ಕವರು ಒಂದು ಕಡೆ ಇದ್ದಾರೆ ಹೀಗಾಗಿ ಮನೆಯಲ್ಲಿ ಒಂದಷ್ಟು ಚಟುವಟಿಕೆ ತೀವ್ರಗೊಳಿಸಲು ಶ್ವೇತಾ ಇರುವಿಕೆ ಇನ್ನೊಂದಿಷ್ಟು ವಾರಗಳ ಅನಿವಾರ್ಯ. ಮನೆಯ ಎಲ್ಲಾ ಟಾಸ್ಕ್, ಅಡುಗೆ ಮನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಶ್ವೇತಾ ಪ್ರೇಕ್ಷಕರ ಭಾವಾನಾತ್ಮಕ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ. ಎಷ್ಟು ಕಾಲ ಈ ಎಮೋಷನಲ್ ಕ್ಯಾಂಡಿಡೇಟ್ ಎಲಿಮಿನೇಟ್ ಆಗದೆ ಉಳಿಯುತ್ತಾರೋ ಕಾದು ನೋಡಬೇಕಿದೆ.

ಕಿಚ್ಚಿನ ಕಥೆ ಕಿಚ್ಚನ ಜೊತೆ
ಮನೆಯಲ್ಲಿ ಮಠ ಗುರುಪ್ರಸಾದ್ ಅವರ ಕಾರ್ಯ ವೈಖರಿ ಕಂಡು ಸ್ವತಃ ಸುದೀಪ್ ಕೂಡಾ ಅಚ್ಚರಿಪಟ್ಟಿದ್ದಾರೆ. ಸತ್ತ ಹೆಣಕ್ಕೆ ಕಥೆ ಹೇಳಲಾರೆ ಎಂದು ಕಾಂಪೌಂಡ್ ಹಾರಲು ಹೋದ ಗುರುಗೆ ಹೊಸ ಹೆಸರು ಸಿಕ್ಕಿದೆ. ಈಗ ಜಂಪಿಂಗ್ ಸ್ಟಾರ್ ಎನಿಸಿಕೊಂಡಿದ್ದಾರೆ.

ಮತ್ತೆ ಒಂದಾದ ಗುರು-ಅಕುಲ್ ಜೋಡಿ
ಗುರುಗಳೇ ನೀವು ಹೇಳುವ ಕಥೆ ಹೆಣ ಕೂಡಾ ಎದ್ದು ಕೂತು ಕೇಳುವಂತಿರಬೇಕು. ನೀವು ಯಾಕೆ ಬೇಜಾರಾದ್ರ್ರಿ ಎಂದು ಸುದೀಪ್ ಲೈಟ್ ಆಗಿ ಕುಟುಕಿದ್ದಾರೆ. ಮನೆಯಲ್ಲಿ ಅಕುಲ್ ಹಾಗೂ ಗುರು ಮಾತು ಬಿಟ್ಟು ದೂರಾಗಿದ್ದರು. ಇಬ್ಬರನ್ನು ಫೇವಿಕಾಲ್ ನ ಜೋಡಿ ರೀತಿಯಲ್ಲಿ ಸುದೀಪ್ ಒಂದು ಮಾಡಿದ್ದಾರೆ.

ನೀತೂ ರೀ ಎಂಟ್ರಿ ಬಗ್ಗೆ ಆದಿ ಅನಿಸಿಕೆ
ಇದರ ಜೊತೆಗೆ ನೀತೂ ರೀ ಎಂಟ್ರಿ ಬಗ್ಗೆ ಆದಿ ಅನಿಸಿಕೆ ಹೇಳಿಕೊಂಡಿದ್ದು, ರೀ ಎಂಟ್ರಿ ಕೊಟ್ಟಾಗ ನನ್ನ ನೀತೂ ನನಗೆ ಕಾಣಿಸಲಿಲ್ಲ. ನೀತೂ ಬದಲಾಗಿದ್ದಾಳೆ ಎನಿಸಿತು ಎಂದು ಹೇಳಿದ್ದು, ಸುದೀಪ್ ರಿಂದ ಇಬ್ಬರ ನಡುವಿನ ಮನಸ್ತಾಪ ತಿಳಿಯಾಗಿದ್ದು, ನೀತೂ ಮತ್ತೆ ಆದಿ ತಬ್ಬಿಕೊಂಡಿದ್ದು ನಡೆಯಿತು.
ಎಲ್ಲರೂ ರಾಜಿ ಆದ ಮೇಲೂ ಏನಿದೆ ಗಮ್ಮತ್ತು?
ನಾಯಕ ಸಂತೋಷ್ ಗೆ ಈಗ ಮನೆಯವರನ್ನು ಸಂಭಾಳಿಸುವ ಕಷ್ಟದ ಕೆಲಸ ಆರಂಭವಾಗಿದೆ. ಸೃಜನ್ ಹಾಗೂ ಹರ್ಷಿಕಾ ಕಿತ್ತಾಟವೂ ಅಂತ್ಯಗೊಂಡಿದೆ. ಎಲ್ಲವೂ ಆರಾಮವಾಗಿದ್ದರೆ ಬಿಗ್ ಬಾಸ್ ಮನೆಯಲ್ಲಿ ಏನ್ ಮಜಾ ಇರುತ್ತೆ. ಮುಂದಿನ ವಾರ ಕಾದು ನೋಡಿ ಮಜಾ ವಿಥ್ ಸೃಜಾ ಅಂಡ್ ಗ್ಯಾಂಗ್.


Click it and Unblock the Notifications











