ಸುವರ್ಣ ಚಾನೆಲ್ ಗೆ ಲಗ್ಗೆ ಇಟ್ಟ 'ಗುಂಡ್ಯಾನ ಹೆಂಡ್ತಿ'

By Suneetha

ಸುವರ್ಣ ವಾಹಿನಿ ವೀಕ್ಷಕರ ಅಭಿಲಾಷೆಗೆ ತಕ್ಕ ಹಾಗೆ ವಿಭಿನ್ನ ರುಚಿಯ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ಎತ್ತಿದ ಕೈ. ಕೆಲವು ದಿನಗಳ ಹಿಂದೆ ಆರಂಭವಾದ 'ದುರ್ಗಾ' ಮತ್ತು 'ಅಮ್ಮ' ಧಾರಾವಾಹಿ ಎಲ್ಲರ ಮನೆಮಾತಾಗಿದ್ದು, ಇದೀಗ ಅದೇ ಹಾದಿಯಲ್ಲಿ ಮತ್ತೊಂದು ಧಾರಾವಾಹಿಯನ್ನು ಪ್ರಾರಂಭಿಸಲು ಸುವರ್ಣ ವಾಹಿನಿ ಕ್ಷಣಗಣನೆ ಆರಂಭಿಸಿದೆ.

ಉತ್ತರ ಕರ್ನಾಟಕದ ಭಾಷೆ ಎಲ್ಲರಿಗೂ ಇಷ್ಟವಾದ ಭಾಷೆ. ಮಾತಿನ ಶೈಲಿ ತುಂಬಾ ಹೃದಯವಂತಿಕೆಯಿಂದ ಕೂಡಿರುತ್ತದೆ. ಈ ಭಾಷೆಯ ಆದೆಷ್ಟೋ ಧಾರಾವಾಹಿಗಳು, ಚಲನಚಿತ್ರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅಂತೆಯೇ ಸುವರ್ಣ ಚಾನಲ್ ಕೂಡ ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕದ ಶೈಲಿಯಲ್ಲಿ ಮತ್ತೊಂದು ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡುತ್ತಿದೆ.

Suvarna channel launches new fiction show 'Gundyana Hendthi'

ಈ ಬಾರಿ 'ಗುಂಡ್ಯಾನ ಹೆಂಡ್ತಿ' ಎಂಬ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿ 'ಗುಂಡ್ಯಾನ ಹೆಂಡತಿ'ಯ ಸುತ್ತಮುತ್ತ ಸುತ್ತುವ ಕಥೆ.

ಉತ್ತರ ಕರ್ನಾಟಕದ ಜಮೀನ್ದಾರ ದೇಸಾಯಿ ಮನೆತನದ ಹುಡುಗ ಗುಂಡ್ಯಾ 10ನೇ ಕ್ಲಾಸ್ ನಲ್ಲಿ ಸತತ ನಾಲ್ಕು ಬಾರಿ ಅನುತ್ತೀರ್ಣ ಹೊಂದಿರುವ ಹುಡುಗ. ಗುಂಡ್ಯಾನಿಗೆ ಮದುವೆ ಮಾಡಿ ಆಸ್ತಿ ಕಬಳಿಸಬೇಕೆಂಬುದು ಈ ಮನೆಯವರ ದುರಾಸೆ. ಇಲ್ಲಿ ಗುಂಡ್ಯಾನ ಅಜ್ಜಿ ಆಸ್ತಿಗಾಗಿ ತಂತ್ರವನ್ನು ರಚಿಸಿರುತ್ತಾರೆ. ಅಷ್ಟಕ್ಕೂ ಆ ತಂತ್ರ ಯಾವುದು? ಕುತಂತ್ರಿಗಳಿಗೆ ಅದನ್ನು ಭೇಧಿಸಲು ಆಗುತ್ತಾ ಅನ್ನೋದು ಕಥೆ.

Suvarna channel launches new fiction show 'Gundyana Hendthi'

'ಮೂರು ಗಂಟು, ನೂರು ಗುಟ್ಟು' ಎಂಬ ಸಹ ಶೀರ್ಷಿಕೆಯನ್ನು ಹೊಂದಿರುವ ಈ ಧಾರಾವಾಹಿಯಲ್ಲಿ 'ಕಮಲಿ' ಎಂಬ ಕಥಾ ನಾಯಕಿ ಬಡ ಕುಟುಂಬದಿಂದ ಬಂದಿರುತ್ತಾಳೆ. ತಂದೆ-ತಾಯಿಯನ್ನು ಕಳೆದುಕೊಂಡಿರುವ ಈಕೆ ತಂದೆಯ ಸಾವಿನ ರಹಸ್ಯದ ಹಿಂದೆ ಬೀಳುತ್ತಾಳೆ.

ಪಕ್ಕಾ ಉತ್ತರ ಕರ್ನಾಟಕದ ಭಾಷೆಯಲ್ಲಿರುವ ಗುಂಡ್ಯಾನ ಹೆಂಡ್ತಿ ಧಾರಾವಾಹಿಗೆ ವಿ.ಸೋಮಶೇಖರ್ ಅವರು ನಿರ್ದೇಶನ ಮಾಡುತ್ತಿದ್ದು, ನಂದಿತಾ ಅವರು ಕಥೆ ಬರೆದಿದ್ದಾರೆ. ಅಂಜುಮ್ ರಿಜ್ವಿ ನಿರ್ಮಾಣದ ಧಾರಾವಾಹಿಯಲ್ಲಿ ಸಮೀಪ್, ಸುದೀಪನಾ ಪ್ರಭುದೇವ್, ರಮೇಶ್ ಪಂಡಿತ್, ನಟಿ ಸುಂದಶ್ರೀ, ಶಶಿಕುಮಾರ, ಸುಷ್ಮಾ ನಾಣಯ್ಯ, ಪವಿತ್ರಾ ಮುಂತಾದವರು ಮಿಂಚಿದ್ದಾರೆ.

ಫೆಬ್ರವರಿ 22 ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಗುಂಡ್ಯಾನ ಹೆಂಡ್ತಿ ಪ್ರಸಾರವಾಗಲಿದೆ.

More from Filmibeat

English summary
The Star Networks Kannada General Entertainment Channel Suvarna announces the launch of its new fiction show “Gundyana Hendthi” from February 22nd 2016. “Gundyana Hendthi” will go on air from Monday to Saturday 06:30PM
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X