For Quick Alerts
  ALLOW NOTIFICATIONS  
  For Daily Alerts

  'ಪಲ್ಲವಿ ಅನುಪಲ್ಲವಿ' ನೂರೈವತ್ತರ ಸುವರ್ಣ ಸಂಭ್ರಮ

  By Rajendra
  |
  ಸುವರ್ಣ ವಾಹಿನಿಯ ಮತ್ತೊಂದು ಜನಪ್ರಿಯ ಧಾರಾವಾಹಿ 'ಪಲ್ಲವಿ ಅನುಪಲ್ಲವಿ' ನೂರೈವತ್ತು ಕಂತುಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಧಾರಾವಾಹಿ ತಂಡ ತಮ್ಮ ವೀಕ್ಷಕ ಬಳಗದೊಂದಿಗೆ ಹಂಚಿಕೊಂಡು ಸಂಭ್ರಮಿಸಿದೆ.

  ಈ ಹಿಂದೆಯೂ ವಿವಿಧ ಧಾರಾವಾಹಿಗಳ ಕಲಾವಿದರು ವೀಕ್ಷಕರೊಂದಿಗೆ ಸಂವಾದ, ಚರ್ಚೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈಗ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಂಡವು ದಾವಣಗೆರೆಯಲ್ಲಿ ತಮ್ಮ ವೀಕ್ಷಕ ಬಳಗದೊಂದಿಗೆ ಮುಖಾಮುಖಿಯಾಗಿ ಸಂವಾದ ನಡೆಸಿತು.

  ಸಂವಾದದ ಜೊತೆಗೆ ನಡೆದ ಮನರಂಜನಾ ಕಾರ್ಯಕ್ರಮ ದಾವಣಗೆರೆ ಮಂದಿಯ ಬೆಣ್ಣೆಯಂತ ಮನಸ್ಸನ್ನು ಗೆದ್ದಿದೆ. ಈ ಕಾರ್ಯಕ್ರಮದಲ್ಲಿ 'ಚಾರ್ ಮಿನಾರ್' ಚಿತ್ರದ ನಾಯಕ ಪ್ರೇಮ್ ಹಾಗೂ ಮೇಘನಾ ಗಾವ್ಕರ್ ಅವರೂ ಪಾಲ್ಗೊಂಡು ಹೆಜ್ಜೆ ಹಾಕಿ ಮತ್ತಷ್ಟು ಮೆರುಗು ನೀಡಿದ್ದಾರೆ.

  ದಾವಣಗೆರೆಯಲ್ಲಿ ನಡೆದ 'ಪಲ್ಲವಿ ಅನುಪಲ್ಲವಿ 150' ಸುವರ್ಣ ಸಂಭ್ರಮ ಕಾರ್ಯಕ್ರಮ ಶನಿವಾರ (ಫೆ.23) ಪ್ರಸಾರವಾಗಲಿದೆ. ಸಂಜೆ 6ಕ್ಕೆ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು. ಕುತೂಹಲ ತಿರುವುಗಳಿಂದ ಕೂಡಿರುವ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

  ಮಧುಸೂಧನ್ ಜಿ ನಿರ್ದೇಶಿಸಿರುವ ಈ ಧಾರಾವಾಹಿಗೆ ರಘು ಚರಣ್ ತಿಪಟೂರು ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪಾತ್ರವರ್ಗದಲ್ಲಿ ಮಧು ಹೆಗಡೆ, ರಶ್ಮಿ, ರಕ್ಷಾ ಹೊಳ್ಳ, ಅಶ್ವಿನ್, ಸುಪ್ರೀತಾ, ಸೌಮ್ಯಾ ಅಲೆಕ್ಸ್, ಕೃಷ್ಣ ನಾಡಿಗ್, ಲಕ್ಷ್ಮಿ ಭಟ್ ಮುಂತಾದವರಿದ್ದಾರೆ.

  ನಂದಿನಿ ಹಾಗೂ ಕಿಶೋರ್ ಸುತ್ತ ಸುತ್ತವ ಕಥೆ ಇದು. ಕಿಶೋರ್ ಒಬ್ಬ ಮಲ್ಟಿ ಮಿಲಿಯನೇರ್ ಉದ್ಯಮಿ. ಮೊದಲಿನಿಂದಲೂ ನಂದಿನಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ನಂದಿನಿ ಗಂಡ ಅಪಘಾತದಲ್ಲಿ ಕಣ್ಮುಚ್ಚುತ್ತಾನೆ. ವಿಧವೆಯಾದ ನಂದಿನಿಗೆ ಒಬ್ಬ ಮಗಳು ಇದ್ದಾಳೆ. ಇವರಿಬ್ಬರು ಒಂದಾಗುತ್ತಾರಾ? ಎಂಬುದೇ ಕಥೆ. (ಒನ್ಇಂಡಿಯಾ ಕನ್ನಡ)

  English summary
  Suvarna Channel's Kannada daily soap 'Pallavi Anupallavi' completes 150 episodes. The serial team celebrated the success in Davangere with channel viewers. The progamme Suvarna Sambhrama Pallavi Anu Pallavi, is playing on February 23 at 6:00 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X