For Quick Alerts
  ALLOW NOTIFICATIONS  
  For Daily Alerts

  ಚಿತ್ರಪುಟ; ತಾಜ್ ಮಹಲ್ ಮುಂದೆ ಹೆಜ್ಜೆ ಹಾಕಿದ 'ಸುವರ್ಣ' ಸ್ಪರ್ಧಿಗಳು

  By Harshitha
  |

  ಅದ್ದೂರಿ ಸ್ಟೇಜ್ ಮೇಲೆ ಕುಣಿದಿದ್ದಾಯ್ತು, ಅತಿ ಎತ್ತರದ ಪ್ರದೇಶದಲ್ಲಿ ತೇಲಾಡುತ್ತಾ ಸ್ಟೆಪ್ ಹಾಕಿದ್ದೂ ಆಯ್ತು, ಬೆಂಕಿ ಜೊತೆ ಸರಸವಾಡುತ್ತಾ, ಹಳ್ಳಿ ಸೊಬಗಿನಲ್ಲಿ, ಕೆಸರುಗದ್ದೆಯಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಶೋ ಸ್ಪರ್ಧಿಗಳು, ಇದೀಗ ಭಾರತದ ಸುಪ್ರಸಿದ್ಧ 'ತಾಜ್ ಮಹಲ್' ಮುಂದೆ ಡ್ಯಾನ್ಸ್ ಮಾಡಿದ್ದಾರೆ.

  ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ 'ತಾಜ್ ಮಹಲ್' ಮುಂದೆ ಮೊದಲ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ನಡೆಸಿದ ಕೀರ್ತಿ ಸುವರ್ಣ ವಾಹಿನಿಯದ್ದು. [ಡ್ಯಾನ್ಸ್ ಶೋನಲ್ಲಿ 'ಬಾಹುಬಲಿ' ಜಲಪಾತದ ವೈಭವ ಅನಾವರಣ]

  ಹೇಳಿ ಕೇಳಿ ತಾಜ್ ಮಹಲ್ ಪ್ರೀತಿಯ ಸಂಕೇತ. ಅಂತೆಯೇ, ಪ್ರೀತಿ ಸಂಕೇತದ ಪ್ರತೀಕವಾಗಿ 'ತಾಜ್ ಮಹಲ್' ಮುಂದೆ ವೇದಿಕೆ ನಿರ್ಮಿಸಿ ಪ್ರೀತಿ ಹಬ್ಬವನ್ನು 'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮ ಆಚರಿಸಿದೆ.

  ಪ್ರೀತಿಯ ಸಂಕೇತ 'ತಾಜ್ ಮಹಲ್' ಮುಂದೆ 'ಡ್ಯಾನ್ಸ್ ಡ್ಯಾನ್ಸ್' ಶೋ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ. [ಅಬ್ಬಾ.! ಚಲಿಸುವ ಟ್ರಕ್ ನಲ್ಲಿ ಏನಿದು ಸಾಹಸ]

  'ತಾಜ್ ಮಹಲ್' ಮುಂದೆ ಕುಣಿದು ಕುಪ್ಪಳಿಸಿರುವ ಸುವರ್ಣ ವಾಹಿನಿಯ 'ಡ್ಯಾನ್ಸ್ ಡ್ಯಾನ್ಸ್' ಸ್ಪರ್ಧಿಗಳ ಫೋಟೋ ಕಲೆಕ್ಷನ್ ಇಲ್ಲಿದೆ...ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  English summary
  Kannada Entertainment Channel Suvarna has made an achievement by conducting 'Dance Dance' reality show in front of World Famous 'Taj Mahal'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X