»   » ಈ ವಾರ ಭರ್ಜರಿ ಮೊತ್ತ 1 ಲಕ್ಷ ಯಾರ ಕಿಸೆಗೆ ಸೇರುತ್ತದೆ

ಈ ವಾರ ಭರ್ಜರಿ ಮೊತ್ತ 1 ಲಕ್ಷ ಯಾರ ಕಿಸೆಗೆ ಸೇರುತ್ತದೆ

Posted By:
Subscribe to Filmibeat Kannada

ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಬೃಹತ್ ಕಂಪೆನಿಯ ಸಹಯೋಗದೊಂದಿಗೆ ಖಾಸಗಿ ಚಾನಲ್ ಸುವರ್ಣ ವಾಹಿನಿ 'ನೀವು ಭಲೇ ಕಿಲಾಡಿ' ಎಂಬ ಹೊಸ ರಿಯಾಲಿಟಿ ಶೋ ಒಂದನ್ನು ಆರಂಭಿಸಿರುವ ವಿಚಾರ ನಿಮಗೆ ಗೊತ್ತೇ ಇದೆ.

'ಡಿ.ಎಸ್.ಪಿ 'ಓಲ್ಡ್ ಟ್ರಾವನ್ ಸೋಡಾ' ಸಂಸ್ಥೆ ಅರ್ಪಿಸುವ 'ನೀವು ಭಲೇ ಖಿಲಾಡಿ' ರಿಯಾಲಿಟಿ ಶೋಗೆ ಒಬ್ಬೊಬ್ಬ ಸ್ಪರ್ಧಿಯು ಒಂದೊಂದು ಆಶಯವನ್ನು ಇಟ್ಟುಕೊಂಡು ಬಂದಿದ್ದಾರೆ.[ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!]

Suvarna Channel's 'Neevu Bhale Kiladi' Special Episode

ಹಾಸ್ಯ ಚಟಾಕಿ, ನೃತ್ಯ ಹಾಗೂ ಹಾಡುವುದರಲ್ಲಿ ನಿಪುಣರಾಗಿರುವ ಬೆಂಗಳೂರಿನ ಸ್ಪರ್ಧಿ ಆಕಾಶ್ ಶೆಟ್ಟಿ ಎಂಬುವವರು ಗೆದ್ದ ಹಣವನ್ನು ತನ್ನ ತಂಗಿಯ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸುತ್ತೇನೆ ಎಂದರೆ, ಹುಬ್ಬಳ್ಳಿಯ ಸ್ಪರ್ಧಿ ಅಭಿಷೇಕ್ ಮಾಡೆಲಿಂಗ್ ಫೀಸ್ ಕಟ್ಟಲು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಬೆಂಗಳೂರಿನ ಸ್ಪರ್ಧಿ ಮಂಜುನಾಥ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ರಾಹುಲ್ ಎಂಬುವವರು, ಡ್ಯಾನ್ಸ್ ಮಾಡುವುದರಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ.[ಅಬ್ಬಾ.! ಚಲಿಸುವ ಟ್ರಕ್ ನಲ್ಲಿ ಏನಿದು ಸಾಹಸ]

Suvarna Channel's 'Neevu Bhale Kiladi' Special Episode

ಈ ವಾರದ ವಿಶೇಷ ಸಂಚಿಕೆಯಲ್ಲಿ 'ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು' ಮತ್ತು 'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋನ ಫೈನಲಿಸ್ಟ್ ದೀಪ್ತಿ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಅಂದಹಾಗೆ ಈ ವಾರ 1 ಲಕ್ಷ ರೂಪಾಯಿ ಯಾರ ಮಡಿಲು ಸೇರುತ್ತದೆ ಎಂಬುದನ್ನು ನೋಡಲು ಇದೇ ಭಾನುವಾರ (ಮಾರ್ಚ್ 6) ರಾತ್ರಿ 10 ಘಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿ ವೀಕ್ಷಿಸಿ.

English summary
Kannada's popular Suvarna Channel's new reality show 'Neevu Bhale Kiladi' Special Episode in March 6th at 10 PM. 'Pro Kabaddi' fame Danish is hosting this show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada