For Quick Alerts
  ALLOW NOTIFICATIONS  
  For Daily Alerts

  ಸುವರ್ಣ 'ಪುಟಾಣಿ ಪಂಟ್ರು' ತೀರ್ಪುಗಾರರಾಗಿ ಪ್ರೇಮ್

  By Rajendra
  |

  ಸ್ಟಾರ್ ನೆಟ್‍ವರ್ಕ್ ನ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು ಮಕ್ಕಳ ಆಧಾರಿತವಾದ 'ಪುಟಾಣಿ ಪಂಟ್ರು' ಎಂಬ ಕಾರ್ಯಕ್ರಮವನ್ನು ಆರಂಭಿಸುತ್ತಿದೆ.

  ಕರ್ನಾಟಕದ ಬಹುಮುಖ ಪ್ರತಿಭೆಯುಳ್ಳ ಅತ್ಯತ್ತಮ ಮಕ್ಕಳನ್ನು ಅನ್ವೇಷಿಸಿ ಗುರುತಿಸುವ ಸ್ಪರ್ಧಾತ್ಮಕ ಕಾರ್ಯಕ್ರಮ "ಪುಟಾಣಿ ಪಂಟ್ರು".

  ಈ ಕಾರ್ಯಕ್ರಮ ಇದೇ ಆಗಸ್ಟ್ 25 ರಿಂದ ಪ್ರತಿ ಭಾನುವಾರ ರಾತ್ರಿ 9-00 ಗಂಟೆಗೆ ಪ್ರಸಾರವಾಗುತ್ತದೆ. ರಾಮ್ ರಾಜ್ ಕಾಟನ್ಸ್ ಕಾರ್ಯಕ್ರಮದ ಮುಖ್ಯ ಸ್ಪಾನ್ಸರ್ ಆಗಿರುತ್ತಾರೆ. ವಾಹಿನಿಯು ಈಗಾಗಲೇ ಕರ್ನಾಟಕದಾದ್ಯಂತ ಆಯ್ಕೆ ಪ್ರಕ್ರೀಯೆಯನ್ನು ನಡೆಸಿದ್ದು ಒಟ್ಟು 14 ಮಕ್ಕಳನ್ನು ಆಯ್ಕೆ ಮಾಡಿದೆ.

  ಈ 14 ಮಕ್ಕಳ ಮಧ್ಯೆ ನಡೆಯುವ ಸ್ಪರ್ಧೆಯಲ್ಲಿ ಯಾರು 'ಪುಟಾಣಿ ಪಂಟ್ರು' ಮುಕುಟವನ್ನು ಪಡೆಯುತ್ತಾರೆಂಬುದನ್ನು ಕಾದು ನೋಡಬೇಕಿದೆ. 6 ರಿಂದ 13 ವರ್ಷದೊಳಗಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು. ಪ್ರತಿ ಪರ್ಫಾಮನ್ಸ್ ಗೂ ಅಂಕಗಳನ್ನು ನೀಡಿ ಜಡ್ಜ್ ಮಾಡಲಾಗುತ್ತದೆ. ಪ್ರತಿ ಸಂಚಿಕೆಯು ಒಂದೊಂದು ಥೀಮ್ ಆಧಾರಿತವಾಗಿದ್ದು ಅತ್ಯಂತ ಕಡಿಮೆ ಅಂಕ ಪಡೆದ ಸ್ಪರ್ಧಿಯನ್ನು ಕಾರ್ಯಕ್ರಮದಿಂದ ಹೊರ ಹಾಕಲಾಗುತ್ತದೆ.

  ಕನ್ನಡ ಚಿತ್ರರಂಗದ ನೆನಪಿರಲಿ ಪ್ರೇಮ್ ಮತ್ತು ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವತ್ಸ ಅವರು "ಪುಟಾಣಿ ಪಂಟ್ರು" ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದು. ಕಾವ್ಯಶಾಸ್ತ್ರೀ ಮತ್ತು ನಿರಂಜನ್ ದೇಸಾಯಿ ನಿರೂಪಿಸಲಿದ್ದಾರೆ.

  ಈ ಸಂಧರ್ಭದಲ್ಲಿ ವಾಹಿನಿಯ ಬಿಸಿನೆಸ್ ಹೆಡ್ ಆದ ಅನುಪ್ ಚಂದ್ರಶೇಖರನ್ ಹೇಳುವಂತೆ, "ಸುವರ್ಣ ವಾಹಿನಿಯು ಕನ್ನಡ ವೀಕ್ಷಕರಿಗೆ ವಿಭಿನ್ನವಾದ ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಲೇ ಬರುತ್ತಿದೆ. "ಪುಟಾಣಿ ಪಂಟ್ರು" ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುತ್ತಿರುವ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಕಾರ್ಯಕ್ರಮವಾಗಿದೆ.

  ಈ ಕಾರ್ಯಕ್ರಮ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗುತ್ತದೆ. ಇಲ್ಲಿ ಸಂಗೀತ ಅಥವಾ ನೃತ್ಯ ಎಂದು ಯಾವುದೇ ಕಟ್ಟುಪಾಡುಗಳಿಲ್ಲದೇ ಬಹುಮುಖ ಪ್ರತಿಭೆಗಳಿಗೆ ಸೃಷ್ಟಿಸಿರುವ ವೇದಿಕೆಯಾಗಿದೆ. ನಮ್ಮ ವೀಕ್ಷಕರು ಖಂಡಿತ ಖುಷಿ ಮಾಡುತ್ತಾರೆ ಎಂಬ ನಂಬಿಕೆ ನನ್ನದು ಎಂದರು.

  ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾದ ಕನ್ನಡದ ಕೋಟ್ಯಾಧಿಪತಿ, ಸುವರ್ಣ ಸೂಪರ್ ಜೋಡಿ, ಅಮೃತ ವರ್ಷಿಣಿ, ಚುಕ್ಕಿ, ಪಂಚರಂಗಿ ಪೋಂ ಪೋಂ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಸರಸ್ವತಿ, ಕರ್ಪೂರದ ಗೊಂಬೆ, ಪ್ರೀಯದರ್ಶಿನಿ,ಮಿಲನ ಮತ್ತು ಅರಗಿಣಿ ಮೊದಲಾದವುಗಳ ಸಾಲಿಗೆ ಈಗ "ಪುಟಾಣಿ ಪಂಟ್ರು" ಕಾರ್ಯಕ್ರಮ ಹೊಸ ಸೇರ್ಪಡೆಯಾಗುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Star Network's General Entertainment Channel Suvarna launching new Reality show "Putani Pantru", a talent hunt based reality show for kids, age group between 6- 13yrs, on August 25 th Sunday 9: PM. Kannada film star Prem Kumar and Shweta Srivatsa are the judges of the programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X