For Quick Alerts
  ALLOW NOTIFICATIONS  
  For Daily Alerts

  In Pics: ಸ್ಟಾರ್ ಸುವರ್ಣ ತಾರೆಗಳ ಬೆಳಕಿನ ಹಬ್ಬ 'ಸುವರ್ಣ ದೀಪೋತ್ಸವ'

  By Suneetha
  |

  ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅತೀ ವಿಜೃಂಭಣೆಯಿಂದ ಸ್ಟಾರ್ ತಾರೆಗಳ ಜೊತೆ ವೈಭವ ಹಾಗೂ ಸಂಭ್ರಮದಿಂದ ಕೂಡಿದ 'ಬೆಳಕಿನ ಹಬ್ಬ' ದೀಪಾವಳಿಯನ್ನು ಕಿಕ್ಕಿರಿದ ಅಭಿಮಾನಿಗಳ ಜೊತೆ ಆಚರಿಸಲಾಯಿತು.

  ಇದೇ ಮೊದಲ ಬಾರಿಗೆ ಪ್ರೇಕ್ಷಕರ ಜೊತೆ, ಎಲ್ಲರ ಮೆಚ್ಚಿನ ಧಾರಾವಾಹಿ 'ಹರಹರ ಮಹಾದೇವ' ತಂಡ ಬೆಳಕಿನ ಹಬ್ಬವನ್ನು ಆಚರಿಸಿಕೊಂಡಿತು. ಸತಿ-ಮಹಾದೇವನಿಗೆ, ಸುವರ್ಣ ತಾರೆಯರು ಸಾತ್ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.['ಮಹಾದೇವ'ನೊಂದಿಗೆ ಸುವರ್ಣ ತಾರೆಗಳ ಬೆಳಕಿನ ಹಬ್ಬ]

  ಸ್ವಾರ್ ಸುವರ್ಣದ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ತಾರೆಯರು ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿ, ತಮ್ಮ ಮನದಾಳದ ಮಾತುಗಳಿಂದ ಎಲ್ಲರನ್ನು ರಂಜಿಸಿ, ಅಭಿಮಾನಿಗಳ ಜೊತೆ ತಾವೂ ಸಂಭ್ರಮಿಸಿದರು. ಮುಂದೆ ಓದಿ.....

  ಸ್ಟೆಪ್ ಹಾಕಿದ ಕಿರುತೆರೆ ತಾರೆಗಳು

  ಸ್ಟೆಪ್ ಹಾಕಿದ ಕಿರುತೆರೆ ತಾರೆಗಳು

  ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿ ಕಲಾವಿದರು ಮತ್ತು ರಿಯಾಲಿಟಿ ಸ್ಟಾರ್ ಗಳು ತಮ್ಮ ಪರಿವಾರದೊಂದಿಗೆ, ದೀಪಾವಳಿ ಹಬ್ಬದ ವಿಶೇಷತೆಯನ್ನು ತಿಳಿಸುವುದರ ಜೊತೆ-ಜೊತೆಗೆ ಒಂದಿಷ್ಟು ಜಬರ್ದಸ್ತ್ ಸ್ಟೆಪ್ ಹಾಕಿ ಎಲ್ಲರನ್ನು ಮನರಂಜಿಸಿದರು.[ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್]

  ದಿಗ್ಗಜರನ್ನು ಅನುಕರಣೆ ಮಾಡಿದ ಕಲಾವಿದರು

  ದಿಗ್ಗಜರನ್ನು ಅನುಕರಣೆ ಮಾಡಿದ ಕಲಾವಿದರು

  ಇದೇ ಸಂದರ್ಭದಲ್ಲಿ ಚಿತ್ರರಂಗದ ದಿಗ್ಗಜ ನಟರಾದ, ವರನಟ ಡಾ.ರಾಜ್ ಕುಮಾರ್, 'ಅಭಿನಯ ಭಾರ್ಗವ' ಡಾ.ವಿಷ್ಣುವರ್ಧನ್, 'ಕರಾಟೆ ಕಿಂಗ್' ಶಂಕರ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರತಿರೂಪದ ನಟರು, ಅವರದೇ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವುದರ ಜೊತೆಗೆ ಅವರಂತೆ ಡೈಲಾಗ್ ಗಳನ್ನು ಹೇಳಿ ನೆರೆದಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕ ಬಂಧುಗಳನ್ನು ರಂಜಿಸಿದರು. [ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']

  ಡಿಂಪಲ್ ಕ್ವೀನ್ ರಚಿತಾ ರಾಮ್

  ಡಿಂಪಲ್ ಕ್ವೀನ್ ರಚಿತಾ ರಾಮ್

  ಕಿರುತೆರೆಯಲ್ಲಿ ಪರಿಚಯವಾಗಿ ಇದೀಗ ಬೆಳ್ಳಿತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಚೆಲುವೆ, ಕಣ್ಣ ನೋಟದಲ್ಲೇ ಕಾಡೋ ಮದನಾರಿ ಕನ್ನಡಿಗರ 'ಬುಲ್ ಬುಲ್' ನಟಿ ರಚಿತಾ ರಾಮ್ ಈ ಸಂಭ್ರಮದ ದೀಪೋತ್ಸವಕ್ಕೆ ಆಗಮಿಸಿದ್ದರು. ಜೊತೆಗೆ ಅವರು ಕೂಡ ತಮ್ಮ ಅಭಿಮಾನಿಗಳೊಂದಿಗೆ ಸೇರಿ ಹೆಜ್ಜೆ ಹಾಕಿ 'ಸುವರ್ಣ ದೀಪೋತ್ಸವ'ಕ್ಕೆ ಇನ್ನಷ್ಟು ಮೆರಗು ನೀಡಿದರು.

  ಮೋಜು-ಮಸ್ತಿಯಿಂದ ಕೂಡಿದ 'ದೀಪೋತ್ಸವ'

  ಮೋಜು-ಮಸ್ತಿಯಿಂದ ಕೂಡಿದ 'ದೀಪೋತ್ಸವ'

  ಈ ಸಂಭ್ರಮದ ಕಾರ್ಯಕ್ರಮದಲ್ಲಿ ನೃತ್ಯ-ಗೀತೆಗಳ ಜೊತೆಗೆ ಒಂದಿಷ್ಟು ಹಾಸ್ಯ ಚಟಾಕಿಯು ಎಲ್ಲರ ನಗುವಿಗೆ ಕಾರಣವಾಯಿತು. ಹಾಸ್ಯ ಮಾತುಗಾರ ರಿಚರ್ಡ್ ಲೂಯಿಸ್ ಅವರ ಹಾಸ್ಯ ಚಟಾಕಿ ಈ ವೇದಿಕೆಗೆ ಮತ್ತಷ್ಟು ರಂಗು ನೀಡಿತು.

  ಯಾವಾಗ ಪ್ರಸಾರ?

  ಯಾವಾಗ ಪ್ರಸಾರ?

  ರಂಗು ರಂಗಿನ ವೇದಿಕೆಯಲ್ಲಿ ಗುಂಗೇರಿಸಿ, ಕಂಗೊಳಿಸುವ 'ಬೆಳಕಿನ ಹಬ್ಬ' ದೀಪಾವಳಿ, ಇದೇ ಭಾನುವಾರ (ಅಕ್ಟೋಬರ್ 30ರಂದು), ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ನಿಮ್ಮೆಲ್ಲರ ಮನೆಗೆ ಬರಲಿದೆ.

  English summary
  'Deepavali' was very grandly celebrated amidst packed audience with the stars of Suvarna TV. 'Hara Hara Mahadeva' team appeared before the audience for the first time during the festival of lights with the audience. The stars of Suvarna added more color to this celebration by their colorful performances. This spectacular event will be telecast this weekend on Sunday (October 30th) evening 6 PM only on Star Suvarna Channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X