»   » ಸುವರ್ಣ ಲೇಡೀಸ್ ಕ್ಲಬ್ ಗೆ 150ರ ಸಂಭ್ರಮ

ಸುವರ್ಣ ಲೇಡೀಸ್ ಕ್ಲಬ್ ಗೆ 150ರ ಸಂಭ್ರಮ

Posted By:
Subscribe to Filmibeat Kannada

ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾದ, ಸದಭಿರುಚಿಯ ಕಾರ್ಯಕ್ರಮಗಳನ್ನು ಪರಿಚಯಿಸಿ ಸದಾ ವಿಶಿಷ್ಟತೆಯನ್ನು ಮೆರೆಯುತ್ತಿರುವ ವಾಹಿನಿ ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿ. ಇದೀಗ ಇದೇ ವಾಹಿನಿಯ ಭಿನ್ನ ಕಾರ್ಯಕ್ರ ಲೇಡೀಸ್ ಕ್ಲಬ್ ಗೆ 150ರ ಸಂಭ್ರಮ.

ಸ್ಟಾರ್ ಸಿಂಗರ್, ಕಥೆ ಅಲ್ಲ ಜೀವನ, ಸ್ವಯಂವರ, ಪ್ಯಾಟೇ ಮಂದಿ ಕಾಡಿಗ್ ಬಂದ್ರು, ಹಳ್ಳಿ ಹೈದ ಪ್ಯಾಟೇಗ್ ಬಂದ, ನೋಡಿ ಸ್ವಾಮೀ ನಾವೀರೋದೇ ಹೀಗೆ, ನೀನಾ? ನಾನಾ?, ಬೊಂಬಾಟ್ ಭೋಜನ, ಕನ್ನಡದ ಕೋಟ್ಯಾಧಿಪತಿ, ಸುವರ್ಣ ಸೂಪರ್ ಜೋಡಿ ಮತ್ತು ಪುಟಾಣಿ ಪಂಟ್ರು ಹೀಗೆ ಒಂದರ ಮೇಲೊಂದು ಕನ್ನಡ ಕಿರುತೆರೆಯಲ್ಲಿಯೇ ಎಂದೂ ಕಂಡಿರದ ಅಚ್ಚರಿಯ ಹೊಚ್ಚ ಹೊಸ ರಿಯಾಲಿಟಿ ಶೋಗಳು ಮೂಡಿಬರುತ್ತಿವೆ.

ಅಮೃತವರ್ಷಿಣಿ, ಆಕಾಶದೀಪ, ಅರಗಿಣಿ, ಪ್ರಿಯದರ್ಶಿನಿ, ಕರ್ಪೂರದ ಗೊಂಬೆ, ಸರಸ್ವತಿ, ಮಿಲನ, ಮೀರಾ ಮಾಧವ, ಸ್ವಾತಿ ಮುತ್ತು ಹಾಗೂ ಪಂಚರಂಗಿ ಪೋಂ ಪೋಂ ಹೀಗೆ ಹಲವಾರು ವೈವಿಧ್ಯಮಯ ಧಾರಾವಾಹಿಗಳು ಮೂಡಿಬರುತ್ತಿವೆ.

ಸುವರ್ಣ ಲೇಡೀಸ್ ಕ್ಲಬ್ ವೀಕ್ಷಕರೊಂದಿಗೆ ನೇರ ಸಂಪರ್ಕ

ವೀಕ್ಷಕರ ಸದಭಿರುಚಿಯನ್ನಾಧರಿಸಿ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಮನರಂಜನೆಯೊಂದಿಗೆ ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಕಾರ್ಯಕ್ರಮಗಳನ್ನು ಹೊರತರಲು ವೀಕ್ಷಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರ ಅಭಿಪ್ರಾಯ, ಆಸಕ್ತಿಗಳನ್ನು ತಿಳಿಯಲು ಹೊರಟ ವಾಹಿನಿಯ ಪ್ರಯತ್ನದ ಫಲವೇ 'ಸುವರ್ಣ ಲೇಡೀಸ್ ಕ್ಲಬ್'.

ನೂರೈವತ್ತು ಸಂಚಿಕೆಗಳನ್ನು ಪೂರೈಸಿದ ಕಾರ್ಯಕ್ರಮ

ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಧಾರವಾಡ, ಹಾಸನ, ಗದಗ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ "ಸುವರ್ಣ ಲೇಡೀಸ್ ಕ್ಲಬ್" ಶಾಖೆಗಳು ಸ್ಥಾಪನೆಯಾಗಿ ತಮ್ಮ ಛಾಪನ್ನು ಮೂಡಿಸುತ್ತಿವೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9 ಗಂಟೆಗೆ ಸುವರ್ಣ ಪ್ಲಸ್ ನಲ್ಲಿ ಪ್ರಸಾರವಾಗುವ ಸುವರ್ಣ ಲೇಡಿಸ್ ಕ್ಲಬ್ ಗಣರಾಜ್ಯೋತ್ಸವ ದಿನದಂದು 150 ನೇ ಸಂಚಿಕೆಯನ್ನು ಪ್ರಸಾರ ಮಾಡಿತು. ಇದೇ ಸಂದರ್ಭದಲ್ಲಿ ಮೈಸೂರಿನ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಇನ್ನಷ್ಟು ಶಾಖೆಗಳನ್ನು ತೆರೆಯಲು ಉದ್ದೇಶ

ವಾಹಿನಿಯ ಬಿಸಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಸುವರ್ಣ ಲೇಡೀಸ್ ಕ್ಲಬ್ ಈಗ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯಲಾಗಿದ್ದು ಮುಂಬರುವ ದಿನಗಳಲ್ಲಿ ಬೆಳಗಾವಿ, ಚಿತ್ರದುರ್ಗ, ಚಿಕ್ಕಮಂಗಳೂರು ಹಾಗೂ ರಾಯಚೂರ ನಲ್ಲಿ ಸ್ಥಾಪಿಸಲಿದ್ದೇವೆ. ಅಲ್ಲದೇ ಸುವರ್ಣ ಲೇಡೀಸ್ ಕ್ಲಬ್ ಸದಸ್ಯರಿಗೋಸ್ಕರ ರಾಜ್ಯಮಟ್ಟದ ಸಮಾವೇಶವನ್ನು ಏರ್ಪಡಿಸುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದರು".

ಪ್ರೇಕ್ಷಕರನ್ನು ರಂಜಿಸಿದ ಸಿಂಗಾರಿ ಬಂಗಾರಿ

'ಸಿಂಗಾರಿ ಬಂಗಾರಿ' ಧಾರಾವಾಹಿ ತಂಡದವರಿಂದ ಹಾಸ್ಯ ಚಟಾಕಿ ಹಾಗೂ ಮೈಸೂರಿನ ಲೇಡೀಸ್ ಕ್ಲಬ್ ಸದಸ್ಯರಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಸುವರ್ಣ ಲೇಡೀಸ್ ಕ್ಲಬ್ ಮುಖಾಂತರ ವಾಹಿನಿ ವೀಕ್ಷಕರೊಂದಿಗೆ ನೇರ ಸಂಪರ್ಕದಲ್ಲಿದೆ.

ಮನರಂಜನೆ ಜೊತೆಗೆ ಸಮಾಜ ಸೇವೆ

ಕಾರ್ಯಕ್ರಮ ರೂಪಿಸುವುದರ ಕುರಿತು ಅವರ ಅಭಿಪ್ರಾಯಗಳನ್ನು ಕಲೆಹಾಕುವುದಷ್ಟೇ ಅಲ್ಲದೇ ಸಂಘದ ಸದಸ್ಯತ್ವ ಪಡೆದಿರುವವರಿಗೆ ಮತ್ತು ಅವರ ಕುಟುಂಬದವರಿಗೆ ಒಂದು ವೇದಿಕೆ ರೂಪಿಸಿ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರತೆಗೆದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಶಂಸಿಸುತ್ತದೆ. ಸದಾ ಸಂಘದ ಸದಸ್ಯರು ಚಟುವಟಿಕೆಯಿಂದಿರುವಂತೆ ಕಾರ್ಯನಿರ್ವಹಿಸುತ್ತದೆ. ಹೀಗೆ ಮನರಂಜನೆಯೊಂದಿಗೆ ಸಮಾಜ ಸೇವಾಕಾರ್ಯಗಳನ್ನು ಲೇಡೀಸ್ ಕ್ಲಬ್ ಮೂಲಕ ವಾಹಿನಿ ಮಾಡುತ್ತಿದೆ ಸುವರ್ಣ ವಾಹಿನಿ.

English summary
Suvarna Ladies Club 150 th episode which had telecast on January 26 th Republic Day 9:00 Am. Suvarna Ladies Club is a platform for Suvarna viewers to get closer to their favorite channel & Suvarna celebreties.
Please Wait while comments are loading...