For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಕಾರಂಜಿ'

  By Rajendra
  |

  ಅನನ್ಯಾ ಮತ್ತು ದಾಮಿನಿ ಎಂಬ ಇಬ್ಬರು ಹುಡುಗಿರ ಸುತ್ತ ಹೆಣೆದಿರುವ ಕಥೆ 'ಕಾರಂಜಿ'. ಅನನ್ಯಾ ಸೌಮ್ಯ ಸ್ವಭಾವದ, ಸಹೃದಯಿ ಹುಡುಗಿ. ದಾಮಿನಿ ಸ್ಯಾಡಿಸ್ಟ್ ಸ್ವಭಾದವಳು. ಪ್ರೀತಿ ಬಯಸುವ ಅನನ್ಯಳನ್ನು ಸದಾ ಅಸಂತೋಷಪಡಿಸುವುದೇ ಅವಳ ಗುರಿ. ವಿವೇಕನನ್ನು ಅನನ್ಯಾ ಪ್ರೀತಿಸುವುದರೊಂದಿಗೆ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ.

  ಸ್ಟಾರ್ ನೆಟ್‍ ವರ್ಕ್ಸ್ ನ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು ಇದೇ ಫೆಬ್ರವರಿ 17 ರಿಂದ ಹೊಚ್ಚ ಹೊಸ ಧಾರಾವಾಹಿ 'ಕಾರಂಜಿ' ಯನ್ನು ಪ್ರಾರಂಭಿಸುತ್ತಿದೆ. ಈ ಧಾರಾವಾಹಿಯನ್ನು ನಿರ್ದೇಶಕ, ಸಂಭಾಷಣಕಾರ, ಸ್ಕ್ರಿಪ್ಟ್ ರೈಟರ್ ಎ.ಜಿ ಶೇಷಾದ್ರಿ ನಿರ್ದೇಶಿಸುತ್ತಿದ್ದಾರೆ. [ಸುವರ್ಣ ಲೇಡೀಸ್ ಕ್ಲಬ್ ಗೆ 150ರ ಸಂಭ್ರಮ]

  ವರನಟ ಡಾ.ರಾಜ್ ಕುಮಾರ್ ಅಭಿನಯದ ಕೊನೆಯ ಚಲನಚಿತ್ರ 'ಶಬ್ದವೇದಿ' ಚಿತ್ರಕ್ಕೆ ಡೈಲಾಗ್ ರೈಟಿಂಗ್ ಮಾಡಿದ ಖ್ಯಾತಿ ಇವರದು. 'ಹೃದಯಾ ಹೃದಯಾ' ಸಿನೆಮಾದ ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ರೈಟಿಂಗ್ ಸಹ ಶೇಷಾದ್ರಿ ಮಾಡಿದ್ದಾರೆ.

  ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವ ಹಾಗೆ, "ಪ್ರೈಮ್ ಟೈಮ್ ಧಾರಾವಾಹಿಗಳನ್ನು ಮತ್ತಷ್ಟು ಸ್ಟ್ರಾಂಗ್ ಮಾಡುವುದಕ್ಕಾಗಿ 'ಕಾರಂಜಿ' ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದ್ದೇವೆ. ಈ ಧಾರಾವಾಹಿಯು ಅತ್ಯುತ್ತಮವಾಗಿ ಮೂಡಿಬರಲು ಸರಿಯಾದ ತಂಡ ಮತ್ತು ಕಲಾವಿದರ ಬಳಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಧಾರಾವಾಹಿಯ ಕಥೆ ಮತ್ತು ಸಂಭಾಷಣೆ ತುಂಬಾ ಸುಂದರವಾಗಿದೆ. ನಮ್ಮ ವೀಕ್ಷಕರು ಈ ಧಾರಾವಾಹಿ ನೋಡಿ ಸಂತಸ ಪಡುತ್ತಾರೆಂಬುದು ನನ್ನ ನಂಬಿಕೆ" ಎಂದರು.

  'ಕಾರಂಜಿ' ಸುವರ್ಣವಾಹಿನಿಯಲ್ಲಿ ಮೂಡಿಬರುತ್ತಿರುವ ಸ್ಟಾರ್ ಸಿಂಗರ್, ಅಮೃತರ್ಷಿಣಿ, ಪ್ರಿಯದರ್ಶಿನಿ, ಮಿಲನ, ಅರಗಿಣಿ, ಪಂಚರಂಗಿ ಪೋಂ ಪೋಂ, ಆಕಾಶದೀಪ, ಕರ್ಪೂರದ ಗೊಂಬೆ, ಮೀರಾ ಮಾಧವ ಹಾಗೂ ಸ್ವಾತಿ ಮುತ್ತು ಹಲವಾರು ಕಾರ್ಯಕ್ರಮಗಳ ಗುಂಪಿಗೆ ಒಂದು ಹೊಸ ಸೇರ್ಪಡೆ. ಇವೆಲ್ಲವುಗಳು ಕನ್ನಡಿಗರ ಮನೆ ಮಾತಾಗಿವೆ. ಹೀಗೆ ಸುವರ್ಣವಾಹಿನಿಯು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ನೀಡುತ್ತಲೇ ಬರುತ್ತಿದೆ ಎಂಬುದು ಹೆಮ್ಮೆಯ ಸಂಗತಿ. (ಒನ್ಇಂಡಿಯಾ ಕನ್ನಡ)

  English summary
  The Star Networks Kannada General Entertainment Channel Suvarna announces the launch of its new fiction show “Karanji” from February 17 th 2014. Karanji will go on air from Monday to Saturday 06:30PM

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X