»   » ಮನರಂಜನೆ ಮಹಾಪೂರ ಸುವರ್ಣ ಪರಿವಾರ ಅವಾರ್ಡ್ಸ್

ಮನರಂಜನೆ ಮಹಾಪೂರ ಸುವರ್ಣ ಪರಿವಾರ ಅವಾರ್ಡ್ಸ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು 3ನೇ ಪರಿವಾರ ಅವಾರ್ಡ್ಸ್ ಕಾರ್ಯಕ್ರಮವನ್ನು ಇದೇ ಏಪ್ರಿಲ್ 18 ಮತ್ತು 19 ರಂದು ಸಂಜೆ 6 ಗಂಟೆಗೆ ಪ್ರಸಾರ ಮಾಡಲಿದೆ.

  ಸುವರ್ಣ ತಾರೆಯರಾದ ಅಮೃತ, ಸಮರ್ಥ ಮತ್ತು ಪ್ರಾರ್ಥನಾ; ಸೂರ್ಯ ಮತ್ತು ಶ್ರಾವಣಿ; ಮಧು, ಕೃಷ್ಣ ಮತ್ತು ಸೋನಿಯಾ; ಪ್ರೀತಂ ಮತ್ತು ಭಾಗ್ಯ ಹಾಗೂ ಮೊದಲಾದವರು ಅದ್ಭುತ ಪರ್ಫಾಮನ್ಸ್ ಗಳನ್ನು ನೀಡಿ ಮನರಂಜನೆಯ ಮಹಾಪೂರವನ್ನೇ ಹರಿಸಿದ್ದಾರೆ.

  Suvarna Parivaar Awards

  ಅಲ್ಲದೇ ಪ್ರಪಪ್ರಥಮ ಬಾರಿಗೆ ಕನ್ನಡ ಕಿರುತೆರೆಯ ವೇದಿಕೆಯಲ್ಲಿ ಹೆಜ್ಜೆ ಹಾಕಿದ ಇನ್ ವೆನ್ಸಿಬಲ್ ಟೀಮ್‍ ಡಾನ್ಸ್ ಝಲಕ್ 3ನೇ ಸುವರ್ಣ ಪರಿವಾರ ಅವಾರ್ಡ್ಸ್ ವೇದಿಕೆಗೆ ವಿಶೇಷ ಮೆರಗು ನೀಡುವಂತಿತ್ತು.

  ಸುಂದರ ರಸಸಂಜೆಯ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಾದ ಗೋಲ್ಡನ್ ಸ್ಟಾರ್ ಗಣೇಶ್, ಅಕುಲ್ ಬಾಲಾಜಿ, ನೀತು, ಸಂತೋಷ್, ಆದಿ ಲೋಕೇಶ್ ಮತ್ತು ಸೃಜನಶೀಲ ನಿರ್ದೇಶಕ ಗುರುಪ್ರಸಾದ ಸಾಕ್ಷಿಯಾದರು.

  Suvarna Parivaar Awards

  3ನೇ ಸುವರ್ಣ ಪರಿವಾರ ಅವಾರ್ಡ್ಸ್ ಮುಖ್ಯ ಪ್ರಾಯೋಜಕತ್ವವನ್ನು ಬ್ರೂಕ್ ಬಾಂಡ್ ರೆಡ್ ಲೆಬಲ್ ವಹಿಸಿದೆ ಮತ್ತು ಇಂದುಲೇಖಾ ಭೃಂಗಾ ಆಯಿಲ್ ಪವರ್ಡ್ ಬೈ ಸ್ಪಾನ್ಸರ್ ಆಗಿದೆ. ಸುವರ್ಣ ಪರಿವಾರ ಅವಾಡ್ಸ್ 39 ವಿಭಿನ್ನ ಕೆಟೆಗರಿಗಳನ್ನು ಹೊಂದಿದ್ದು ಅದರಲ್ಲಿ ಬೆಸ್ಟ್ ಮತ್ತು ಫೆವರೆಟ್ ಕೆಟಗರಿಗಳನ್ನಾಗಿ ವಿಂಗಡಿಸಲಾಗಿದೆ.

  ಫೆವರಿಟ್ ವಿಭಾಗದಲ್ಲಿ ಸುವರ್ಣದ ಫೆವರಿಟ್ ಸೀರಿಯಲ್, ಫೆವರಿಟ್ ಗಂಡ ಹೆಂಡ್ತಿ ಜೋಡಿ, ಫೆವರಿಟ್ ಕಾಮಿಡಿಯನ್, ಫೆವರಿಟ್ ನಟಿ, ಫೆವರಿಟ್ ನಟ, ಫೆವರಿಟ್ ಹೊಸ ಸದಸ್ಯ, ಫೆವರಿಟ್ ಹೊಸ ಸದಸ್ಯೆ ಮೊದಲಾದವು.

  Suvarna Parivaar Awards

  ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಅರುಣ್ ಸಾಗರ್ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬಂದಿದೆ. ಅರುಣ್ ಸಾಗರ್ ತಮ್ಮ ಪ್ರತಿಭೆಯಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಿರಂಜನ್ ದೇಶಪಾಂಡೆ, ಶೈನ್ ಶೆಟ್ಟಿ ಮತ್ತು ಇಂಚರ ಇವರುಗಳ ನಿರೂಪಣೆ ಇವೆಂಟ್ ಮೆರುಗನ್ನು ಹೆಚ್ಚಿಸುವಂತಿತ್ತು ಹಾಗೂ ವೀಕ್ಷಕರ ಮನಸೂರೆಗೊಳ್ಳುವಲ್ಲಿ ಸಫಲವಾಗಲಿದೆ.

  ವಾಹಿನಿ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಎಲ್ಲ ತಾರೆಯರು ಒಂದೇ ವೇದಿಕೆಯಲ್ಲಿ ಪರ್ಫಾರ್ಮ ಮಾಡುವುದರಿಂದ ಜನರು ಪ್ರೀತಿಯಿಂದ ನೋಡುವ ವಿಶೇಷ ಕಾರ್ಯಕ್ರಮ ಇದಾಗಿದೆ. ಅಲ್ಲದೇ ಇದು ಕಿರುತೆರೆ ತಾರೆಯರಿಗೆ ನೀಡುವ ಪ್ರೋತ್ಸಾಹ ಮತ್ತು ಪ್ರೇರಣೆಯಾಗಿದೆ.

  Suvarna Parivaar Awards

  ನಮ್ಮ ವೀಕ್ಷಕರ ನೀರಿಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಸುವರ್ಣವನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯುತ್ತೇವೆ ಎಂಬ ನಂಬಿಕೆ ನಮ್ಮದು. ಈ ಕಾರ್ಯಕ್ರಮದ ಸಫಲತೆಗೆ ಕಾರಣೀಭೂತರಾದ ನಮ್ಮ ಪರಿವಾರದ ಎಲ್ಲ ತಾರೆಯರು ಹಾಗೂ ತಂತ್ರಜ್ಞರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ ಎಂದಿದ್ದಾರೆ.
  Suvarna Parivaar Awards

  ಸುವರ್ಣ ಒಂದು ವಿಭಿನ್ನ ಹಾಗೂ ತಾಜಾ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿಯಾಗಿ ಎಲ್ಲರ ಮುಂದಿದೆ. ವಾಹಿನಿಯಲ್ಲಿ ಬರುವ ಅಮೃತವರ್ಷಿಣಿ, ಮಿಲನ, ಅವನು ಮತ್ತೆ ಶ್ರಾವಣಿ, ಅನುರೂಪ, ಖುಷಿ, ಪಂಚರಂಗಿ ಪೋಂ ಪೋಂ, ಮಧುಬಾಲ, ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ಅಂಬಾರಿ. (ಫಿಲ್ಮಿಬೀಟ್ ಕನ್ನಡ)

  English summary
  The Star Network`s Kannada General Entertainment channel Suvarna will telecast its 3 rd Parivaar Awards on April 18 th and 19 th 6pm. Brooke Bond Red Label is the title sponsor & Indulekha Bringha Oil is the powered by sponsor of the 3 rd Suvarna Parivaar awards.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more