»   » ಕನ್ನಡ ವೀಕ್ಷಕ ವಿವರಣೆಯೊಂದಿಗೆ ಕ್ರಿಕೆಟ್ ವರ್ಲ್ಡ್ ಕಪ್!

ಕನ್ನಡ ವೀಕ್ಷಕ ವಿವರಣೆಯೊಂದಿಗೆ ಕ್ರಿಕೆಟ್ ವರ್ಲ್ಡ್ ಕಪ್!

Posted By:
Subscribe to Filmibeat Kannada

ಕ್ರಿಕೆಟ್ ವೀಕ್ಷಕ ವಿವರಣೆ ಸಾಮಾನ್ಯವಾಗಿ ಇಂಗ್ಲಿಷ್ ನಲ್ಲಿಯೇ ಇರುತ್ತದೆ. ಅದನ್ನು ಕನ್ನಡದಲ್ಲಿ ಕೇಳುವುದು ಎಂದರೆ ಅಸಾಧ್ಯದ ಮಾತಾಯಿತು. ಈ ಅಸಾಧ್ಯವನ್ನು ಸಾಧ್ಯವಾಗಿಸುತ್ತಿದೆ ಕನ್ನಡದ ಜನಪ್ರಿಯ ವಾಹಿನಿ ಸುವರ್ಣ ಪ್ಲಸ್.

ಕ್ರಿಕೆಟ್ ವರ್ಲ್ಡ್ ಕಪ್ ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿ ಕೇಳುವುದೇನು ಬಂತು ಕನ್ನಡ ವಾಹಿನಿಯಲ್ಲಿಯೇ ನೋಡುವ ಹಾಗೂ ಕನ್ನಡದಲ್ಲಿಯೇ ವೀಕ್ಷಕ ವಿವರಣೆಯನ್ನು ಕೇಳುವ ಮಜಾ ನೋಡಿ ಆನಂದಿಸಿ! [ಗೃಹಿಣಿಯರಿಗಾಗಿ 'ಈಟಿವಿ ಕನ್ನಡ' ಬಂಪರ್ ಆಫರ್]

ವಿಶ್ವದಾದ್ಯಂತ ನಮಗೆಲ್ಲರಿಗೂ ತಿಳಿದಿರುವಂತೆ ಅಂತರಾಷ್ಟ್ರೀಯ ಮಟ್ಟದ ಕ್ರೀಡೆ ಕ್ರಿಕೆಟ್. ಈ ವರ್ಷದ ಐಸಿಸಿ ವಿಶ್ವಕಪ್ ಇದೇ ಫೆಬ್ರುವರಿ 14 ರಿಂದ ಪ್ರಾರಂಭವಾಗಲಿದ್ದು, ಈ ದಿನಗಣನೆಯ ಅಬ್ಬರದಲ್ಲಿ ಎಲ್ಲ ಕ್ರೀಡಾಭಿಮಾನಿಗಳ ಎದೆ ಬಡಿತ ಜೋರಾಗಿದೆ.

Suvarna plus brings ICC Cricket World Cup 2015

ನಮ್ಮ ರಾಜ್ಯದ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ವಾಹಿನಿಯನ್ನು ನಿರ್ಧರಿಸುವ ಸದಾವಕಾಶ. ಯಾವುದು ಎಂದು ನಿರ್ಧರಿಸುವುದಕ್ಕಿಂತ ಯಾವಾಗ ಎನ್ನುವ ಪ್ರಶ್ನೆ! ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಸಿನಿಮಾ ವಾಹಿನಿ ಸುವರ್ಣ ಪ್ಲಸ್ ನಲ್ಲಿ ಇದೇ ಪ್ರಪ್ರಥಮ ಬಾರಿಗೆ ಅತ್ಯಾಕರ್ಷಕವಾದ, ದೇಶಭಿಮಾನವನ್ನು ಮೆರೆಯುವ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂದರೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್ ನ್ನು ನಮ್ಮ ಕನ್ನಡ ಭಾಷೆಯಲ್ಲಿಯೇ ನೋಡುವ ಅವಕಾಶವನ್ನು ವೀಕ್ಷಕರಿಗೆ ವಾಹಿನಿಯು ಕಲ್ಪಿಸುತ್ತಿದೆ.

ಅಲ್ಲದೇ ಪಂದ್ಯದ ರೋಚಕ ಕ್ಷಣಗಳನ್ನು ಸುವರ್ಣ ಪ್ಲಸ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದಕ್ಕಿಂತ ಬೇರೆ ಶುಭಸುದ್ದಿ ಇದೆಯೇ? ಖಂಡಿತ ಇಲ್ಲ, ಕ್ರೀಡಾಲೋಕದ ಅತ್ಯದ್ಭುತ ಇವೆಂಟನ್ನು ನೋಡಿ ಕಣ್ಮನ ಸೆಳೆದುಕೊಳ್ಳಲು ಸಿದ್ಧರಾಗಿ.

"ಕ್ರಿಕೆಟ್ ಜ್ವರಕ್ಕೆ ತಣಿಸುವಂತೆ ಒಂದು ಎಸೆತದಿಂದ ಪ್ರತಿಯೊಂದು ಎಸೆತವನ್ನು ವೀಕ್ಷಿಸಲು ನಾವು ದಾರಿ ಮಾಡಿಕೊಡುತ್ತೇವೆ. ನಿಮ್ಮ ನೆಚ್ಚಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು sಸುವರ್ಣ ಪ್ಲಸ್‍ನಲ್ಲಿ ನೋಡಿ ಆನಂದಿಸಿ" ಎನ್ನುತ್ತಿದೆ ಸುವರ್ಣ ಪ್ಲಸ್ ವಾಹಿನಿ.

English summary
Suvarna plus brings ICC Cricket World Cup 2015 like never Before. For the first time in history Star Network`s Kannada movie channel Suvarna Plus brings you the most thrilling, most patriotic attraction of world cup cricket fever in your very own Kannada language, the ICC world cup which is slated to be played in New Zealand and Australia from February 14th 2015 to 29th March 2015 in our own Kannada language. Not only that but you can also watch the highlights of the matches in Suvarna Plus.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more