ಸುವರ್ಣ ಸೂಪರ್ ಸ್ಟಾರ್ ದಿ ಎಂಡ್; ತನ್ನ ಲೈಫ್‌ನಲ್ಲಿ ಸೂಪರ್ ಸ್ಟಾರ್ ರಹಸ್ಯ ಬಿಟ್ಟುಕೊಟ್ಟ ಶಾಲಿನಿ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಾದ 'ಜಾನಕಿ ರಾಘವ', 'ಹೊಂಗನಸು' ಇತ್ತೀಚೆಗಷ್ಟೇ ಮುಕ್ತಾಯಗೊಂಡಿತು. ಇದೀಗ ಅದರ ಬೆನ್ನಲ್ಲೇ ಮಗದೊಂದು ರಿಯಾಲಿಟಿ ಶೋ ಮುಕ್ತಾಯಗೊಳ್ಳುತ್ತಿದೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ ಪ್ರಸಾರವಾಗುತ್ತಿದ್ದ 'ಸುವರ್ಣ ಸೂಪರ್ ಸ್ಟಾರ್‌' ಇದೀಗ ಮುಕ್ತಾಯಗೊಳ್ಳುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ನಾಡಿನ ಮಹಿಳೆಯರ ಮನಗೆದ್ದ ಸುವರ್ಣ ಸೂಪರ್ ಸ್ಟಾರ್ ನ ಫಿನಾಲೆ ಇಂದು ನಡೆದಿದೆ. ಸುಮಾರು 1200 ಸಂಚಿಕೆಗಳು ಪ್ರಸಾರವಾಗಿದ್ದು ಬರೋಬ್ಬರಿ 3500ಕ್ಕೂ ಹೆಚ್ಚಿನ ಮಹಿಳೆಯರು ಇಲ್ಲಿ ಸೂಪರ್ ಸ್ಟಾರ್ ಗಳಾಗಿ ಮಿಂಚಿದ್ದಾರೆ. ಇದೀಗ ಅದರ ಫಿನಾಲೆ ಇಂದು ನಡೆಯಲಿದ್ದು, ಆ ನಿಮಿತ್ತ ಚಾನೆಲ್ ರಿಲೀಸ್ ಮಾಡಿದ ಪ್ರೋಮೋ ಸಖತ್ ಸದ್ದು ಮಾಡಿತ್ತು.

Suvarna Superstar has ended Shalini Satyanarayana remembered four years of journey

'ಸುವರ್ಣ ಸೂಪರ್ ಸ್ಟಾರ್.. ನಾಲ್ಕು ವರ್ಷದ ಸುದೀಘವಾದ ಪಯಣ ಕೊನೆಯ ಘಟ್ಟಕ್ಕೆ ಬಂದಿದೆ. ನನ್ನ ಲೈಫ್‌ನಲ್ಲಿ ಸೂಪರ್ ಸ್ಟಾರ್ ಅಂದ್ರೆ ಯಾರು ಎಂದರೆ ಅದು ಈ ವೇದಿಕೆನೇ. ಐ ಟ್ರೂಲಿ ಲವ್ ದಿಸ್ ವೇದಿಕೆ" ಎಂದು ನಿರೂಪಕಿ ಶಾಲಿನಿ ಸತ್ಯನಾರಾಯಣ ಅವರು ಪ್ರೋಮೋದಲ್ಲಿ ಹೇಳಿಕೊಂಡಿದ್ದರು. ಜೊತೆಗೆ ನಾಲ್ಕು ವರ್ಷಗಳ ಕಾಲ ಸುವರ್ಣ ಸೂಪರ್ ಸ್ಟಾರ್‌ನ ನಿರೂಪಕಿಯಾಗಿ ಮೋಡಿ ಮಾಡಿದ್ದ ಶಾಲಿನಿ ಈ ಒಂದು ಪಯಣ ಮುಕ್ತಾಯವಾಗುತ್ತಿರುವುದಕ್ಕೆ ಭಾವುಕರಾಗಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಸುವರ್ಣ ಸೂಪರ್ ಸ್ಟಾರ್ ನಿರೂಪಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಶಾಲಿನಿ ಸತ್ಯನಾರಾಯಣ ಪಾಚು ಪಾತ್ರದಲ್ಲಿ ಕಿರುತೆರೆಯಲ್ಲೂ ಫೇಮಸ್‌ ಆಗಿದ್ದವರು. ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಪಾ ಪಾಂಡು' ಧಾರಾವಾಹಿಯಲ್ಲಿ ನಾಯಕಿ ಪಾಚು ಆಗಿ ಕಾಣಿಸಿಕೊಂಡಿದ್ದ ಶಾಲಿನಿ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.

Suvarna Superstar has ended Shalini Satyanarayana remembered four years of journey

'ಜನನಿ' ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್ ಮಗಳಾಗಿ ಕಾಣಿಸಿಕೊಳ್ಳುವ ಕಿರುತೆರೆಗೆ ಕಾಲಿಟ್ಟ ಈಕೆ ತದ ನಂತರ 'ಅರ್ಧಸತ್ಯ', 'ಚದುರಂಗ', 'ಪಾಪಾ ಪಾಂಡು', 'ಪಾಪಾ ಪಾಂಡು'- 2, 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಬೆಡಗಿ. ರೆಡ್ ಎಫ್‌ಎಂನ ಪ್ರೋಗ್ರಾಮಿಂಗ್ ಹೆಡ್ ಆಗಿಯೂ ಸುದೀರ್ಘ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಅನುಭವವಿರುವ ಈಕೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 4 ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಕಾರ್ಯಕ್ರಮ 'ಚಿಣ್ಣರ ಚಿಲಿಪಿಲಿ'ಯ ನಿರೂಪಕಿಯಾಗಿ ಮೋಡಿ ಮಾಡಿದ್ದ ಶಾಲಿನಿ ಸತ್ಯನಾರಾಯಣ ಅವರು ಶಾಲಿವುಡ್ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡಾ ಶುರು ಮಾಡಿದ್ದು, ಅದು ಕೂಡಾ ಸಖತ್ ಸದ್ದು ಮಾಡಿತ್ತು.

More from Filmibeat

English summary
Suvarna Superstar has ended Shalini Satyanarayana remembered four years of journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X