»   » ಉದಯೋನ್ಮುಖ ತಾರೆಗಳ ಜತೆ 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ'

ಉದಯೋನ್ಮುಖ ತಾರೆಗಳ ಜತೆ 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ'

Posted By:
Subscribe to Filmibeat Kannada

ಸುವರ್ಣ ವಾಹಿನಿಯ ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಪ್ರಸ್ತುತವಾಗಿ ಮೂಡಿಬರುತ್ತಿರುವ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಕಾರ್ಯಕ್ರಮ ವೀಕ್ಷಕರ ಮನಗೆದ್ದಿದೆ. ಪ್ರತಿ ವಾರದ ಸಂಚಿಕೆಯಲ್ಲಿ ವಿವಿಧ ಸೆಲೆಬ್ರಿಟಿಗಳು, ಬಿಡುಗಡೆಗೆ ದಾಪುಗಾಲಿನಲ್ಲಿರುವ ಚಿತ್ರತಂಡಗಳೊಂದಿಗಿನ ಹಾಸ್ಯ ಅದಕ್ಕೆ ನಿರೂಪಕರಾದ ಅನುಶ್ರೀ ಹಾಗೂ ಶೈನ್ ಕಿರಿಕ್ಕಿನ ವಗ್ಗರಣೆ ನೋಡುಗರನ್ನು ನಕ್ಕು ನಗಿಸುತ್ತಿದೆ.

Swalpa Adjust Madkolli with Neha Patil, Sukrutha Wagle

'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಸೆಟ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು, ಪ್ಯಾಟೆ ಹುಡ್ಗೀರು, ಅಭಿನೇತ್ರಿ, ಬೆಂಕಿಪಟ್ಣ, ರಾಜರಾಜೇಂದ್ರ, ರಾಟೆ , ವಾಸ್ತುಪ್ರಕಾರ ಹೀಗೆ ವಿವಿಧ ಚಿತ್ರತಂಡ ಮತ್ತು ಸುವರ್ಣದ ಧಾರಾವಾಹಿ ಬಳಗವು ಪಾಲ್ಗೊಂಡಿತ್ತು. ಈಗ ಈ ಕಾರ್ಯಕ್ರಮ 10ನೇ ಸಂಚಿಕೆಯನ್ನು ಇದೇ ಭಾನುವಾರ (ಮಾ.1) ಪ್ರಸಾರ ಮಾಡುತ್ತಿದ್ದು ಅದರಲ್ಲಿ ಕನ್ನಡದ ಉದಯೋನ್ಮುಖ ನಟಿಯರು ಪಾಲ್ಗೊಂಡಿದ್ದಾರೆ.

Swalpa Adjust Madkolli with Neha Patil, Sukrutha Wagle

ಈಗ ಬಿಡುಗಡೆಗೆ ಸಿದ್ಧವಾಗಿರುವ 'ದಕ್ಷ' ಚಿತ್ರದಲ್ಲಿ ಅಭಿನಯಿಸಿರುವ ನೇಹಾ ಪಾಟೀಲ, 'ಜಟ್ಟ' ಚಲನಚಿತ್ರದಲ್ಲಿ ಅಭಿನಯಿಸಿ ರಾಜ್ಯ ಪ್ರಶಸ್ತಿ ಪಡೆದ, ಬಿಡುಗಡೆಗೆ ಸಿದ್ಧವಾಗಿರುವ 'ಫ್ಲಾಪ್' ಚಿತ್ರ ತಾರೆ ಸುಕೃತ ವಾಗ್ಲೆ, 'ಸಪ್ನೋಂಕಿ ರಾಣಿ' ಹಾಗೂ 'ಹಾಫ್ ಮೆಂಟಲ್' ಚಿತ್ರದಲ್ಲಿ ಅಭಿನಯಿಸಿದ ಐಶ್ವರ್ಯ ಸಿಂಧೋಗಿ ಹಾಗೂ 'ಕಲಿಯುಗ' ಚಿತ್ರ ತಾರೆ ದೀಪಿಕಾ ದಾಸ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ಈ ವಾರದ ಸಂಚಿಕೆಯಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳು.

Swalpa Adjust Madkolli with Neha Patil, Sukrutha Wagle

ಹೀಗೆ ಮಜ ಮೋಜು ನೀಡುತ್ತ ಪ್ರತಿ ಸಂಚಿಕೆಯಲ್ಲೂ ಸೆಲೆಬ್ರಿಟಿಗಳನ್ನು ನಗಿಸುತ್ತಾ ಆಟವಾಡಿ ಎಂಜಾಯ್ ಮಾಡುವ ಕಾರ್ಯಕ್ರಮ ವೀಕ್ಷಕರಿಗೂ ಅಷ್ಟೇ ಮೋಜನ್ನು ನೀಡುತ್ತಿದೆ. ಈ ವಾರದ ಉದಯೋನ್ಮುಖ ನಟಿಯರ ಸಂಚಿಕೆಯನ್ನು ತಪ್ಪದೇ ವೀಕ್ಷಿಸಲು ಇದೇ ಭಾನುವಾ ಮಾರ್ಚ್ 1ರಂದು ರಾತ್ರಿ 9 ಗಂಟೆಗೆ ಸುವರ್ಣ ವಾಹಿನಿಯನ್ನು ಟ್ಯೂನ್ ಮಾಡಿ. (ಫಿಲ್ಮಿಬೀಟ್ ಕನ್ನಡ)

English summary
This time Suvarna channel's game show 'Swalpa Adjust Madkolli' with many movie teams. Neha Patil, Sukrutha Wagle, Aishwary Sindogi, Deepika Das have participated. The episode will telecast on 1st March 2015 Sunday 9pm. Which is about getting adjust in life and to various circumstances, will be telecast on every Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada