For Quick Alerts
  ALLOW NOTIFICATIONS  
  For Daily Alerts

  ಸಂಬಳ ನೀಡದೆ ಬೀಗ ಹಾಕಿದ ಕನ್ನಡ ಸುದ್ದಿ ವಾಹಿನಿ : 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ

  By James Martin
  |

  ಸ್ವರಾಜ್ ನ್ಯೂಸ್ ಕನ್ನಡ ಸುದ್ದಿವಾಹಿನಿಗೆ ರಾತ್ರೋ ರಾತ್ರಿ ಬೀಗ ಜಡಿಯಲಾಗಿದೆ. ಇದರಿಂದಾಗಿ 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಕೆಲ ಪತ್ರಕರ್ತರು ಧೈರ್ಯ ಮಾಡಿ, ಪೊಲೀಸರ ಮೊರೆ ಹೊಕ್ಕಿದ್ದಾರೆ.

  ಹೈದರಾಬಾದ್ ಮೂಲದ ಹೀರಾ ಗ್ರೂಪ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಎಂ.ಇ.ಪಿ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ಒಡೆತನದ ಟಿಟಿಸಿ ನ್ಯೂಸ್ ಅಧೀನದಲ್ಲಿ ಆರಂಭಗೊಂಡಿದ್ದ ಸ್ವರಾಜ್ ನ್ಯೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ, ಬಂದ್ ಆಗಿದೆ.

  ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

  ಜನವರಿ 1 ರಿಂದ ಟಿಟಿಸಿ ನ್ಯೂಸ್ ಚಾನಲ್ ಎಂಬ ಹೆಸರಿನಲ್ಲಿ ಹೊಸ ಸುದ್ದಿ ವಾಹಿನಿ ಪ್ರಾರಂಭವಾಗಿತ್ತು. ಮಾರ್ಚ್ 17 ರಿಂದ ಸ್ವರಾಜ್ ಎಕ್ಸ್‌ಪ್ರೆಸ್ ಅಂತ ಹೆಸರು ಬದಲಾಯಿಸಲಾಯಿತು. ಅಂದೇ. ಸ್ಯಾಟಿಲೈಟ್ ಪ್ರಸಾರ ಪ್ರಾರಂಭವಾಯಿತು.

  ಸ್ವರಾಜ್ ನ್ಯೂಸ್ ಎಕ್ಸ್‌ಪ್ರೆಸ್ ಹೀರಾ ರೀಟೇಲ್ ಹೈದರಾಬಾದ್ ಪ್ರೈವೇಟ್ ಲಿಮಿಟೆಡ್ ಅಂತ ಪ್ರಾರಂಬಿಸಲಾಗಿತ್ತು. ಬೆಂಗಳೂರು ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಕೂಡ 260 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈಗ ಏಕೇಕಿ ಯಾವುದೇ ಯಾವುದೇ ಮುನ್ಸೂಚನೆ ನೀಡದೆ, ಬಾಗಿಲು ಬಂದ್ ಮುಚ್ಚಲಾಗಿದೆ.

  ಬಿಬಿಸಿ ಲೈವ್ ರಿಪೋರ್ಟಿಂಗ್ ವೇಳೆ 'ಸೆಕ್ಸಿ ಸೌಂಡ್'

  ಸಿಬ್ಬಂದಿಗಳಿಗೆ ನೀಡಬೇಕಾದ ಸಂಬಳ ಹಾಗೂ ಸವಲತ್ತುಗಳನ್ನ ನೀಡದೆ ರಾತ್ರೋ ರಾತ್ರಿ ಬೀಗ ಜಡಿದಿದ್ದಾರೆ. ಇನ್ನೂ ಇಲ್ಲಿರುವ ಸಿಬ್ಬಂದಿಗಳಿಗೆ ಆಗಸ್ಟ್ ತಿಂಗಳ ಸಂಬಳವೂ ಕೂಡ ನೀಡದೆ ವಂಚನೆ ಮಾಡಿದ್ದಾರೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣೆ ಗೋಸ್ಕರ ಈ ಚಾನಲ್ ಅನ್ನ ಬಳಸಿಕೊಂಡು ಪತ್ರಕರ್ತರಿಗೆ ಮೋಸ ಮಾಡಿದ್ದಾರೆ.

  ಇನ್ನೂ ಈ ಎಲ್ಲಾ ಅಕ್ರಮ ಹಾಗೂ ಇಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸಂಸ್ಥೆಯ ಮುಖ್ಯ ಸಂಪಾದಕ ಸಮೀ ಉಲ್ಲಾ ಯಾವುದೇ ಸಿಬ್ಬಂದಿಗಳಿಗೆ ಸ್ಪಂದಿಸುತ್ತಿಲ್ಲ. ಸಂಸ್ಥೆಯ ಸಂಪಾದಕಿ ನಾಝಿಯಾ ಕೌಸರ್ ತಮ್ಮದೇ ಸಮುದಾಯದ ಸಂಸ್ಥೆಯ ಮುಖ್ಯಸ್ಥೆ ಡಾ. ನೌಹೀರಾ ಶೇಖ್ ಪರ ಕಾರ್ಯ ನಿರ್ವಹಿಸುತ್ತಿದ್ದರು.

  ಒಟ್ಟಾರೆ, ಐವರಿಂದ ನಮಗೆ ಅನ್ಯಾಯವಾಗಿದೆ ಎಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 11ರಂದು ದೂರು ದಾಖಲಾಗಿಸಲಾಗಿದೆ. ಇದಲ್ಲದೆ, ಕಾರ್ಮಿಕ ಇಲಾಖೆಗೂ ದೂರು ಸಲ್ಲಿಸಲು ನೊಂದ ಪತ್ರಕರ್ತರು ಮುಂದಾಗಿದ್ದಾರೆ.

  Read more about: tv news channel
  English summary
  Swaraj News Channel Kannada shuts door. Journalist have approached Adugodi police seeking justice. As many as 250 plus journalists reportedly lost job due to closure of channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X